ಬೆಂಗಳೂರು: ಕನಕಪುರದಲ್ಲಿ ಕಲ್ಲು ಒಡೆಯುತ್ತೇನೆ. ರೇಷ್ಮೆ, ಕಡಲೆ, ಅರಿಶಿನ ಬೆಳೆಯುತ್ತೇನೆ ವಿನಃ ಆದರೆ ದೆಹಲಿಗೆ ಹೋಗಲ್ಲ. ರಾಜ್ಯದಲ್ಲಿಯೇ ರಾಜಕಾರಣ ಮಾಡುತ್ತೇನೆ ಎಂದು ಹೇಳುವ ಮೂಲಕ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿ ನಾನು ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
Advertisement
ಸದಾಶಿವ ನಗರದ ನಿವಾಸದಲ್ಲಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷರ ನೇಮಕದ ಬಗ್ಗೆ ಸಂಬಂಧಪಟ್ಟವರನ್ನ ಕೇಳಿ. ಎಐಸಿಸಿ ಅಧ್ಯಕ್ಷರು ಅಂಗಡಿಯಲ್ಲಿ ಸಿಗುವ ವಸ್ತು ಅಲ್ಲ. ನಾನು ಅಧ್ಯಕ್ಷರನ್ನ ಭೇಟಿ ಮಾಡಿಲ್ಲ. ಕೆಪಿಸಿಸಿ ಅಧ್ಯಕ್ಷ ವಿಚಾರ ನಾನಂತು ಮಾತನಾಡಲ್ಲ. ನನಗೇನು ಅತುರ ಇಲ್ಲ ಎನ್ನುವ ಮೂಲಕ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿ ಡಿಕೆಶಿ ಕೆಪಿಸಿಸಿ ಪಟ್ಟದ ಬಗ್ಗೆ ಒಲವು ವ್ಯಕ್ತಪಡಿಸಿದ್ದಾರೆ. ಏನೇ ಆದರು ರಾಜ್ಯ ರಾಜಕಾರಣದ ಮೇಲೆ ನನ್ನ ಕಣ್ಣು ಅನ್ನೋದನ್ನ ಸ್ಪಷ್ಟವಾಗಿ ತಿಳಿಸಿದ್ದಾರೆ.
Advertisement
Advertisement
ಸಿಬಿಐ ಮೇಲೆ ನನಗೆ ನಂಬಿಕೆ ಇದೆ. ಸಿಬಿಐ ತನ್ನ ಗೌರವ ಉಳಿಸಿಕೊಂಡಿದೆ. ಸಿಬಿಐ ಯಾವುದೇ ನೋಟಿಸ್ ನನಗೆ ಕೊಟ್ಟಿಲ್ಲ. ಕೇಂದ್ರ ಮತ್ತು ಯಡಿಯೂರಪ್ಪ ಸಿಬಿಐ ಅವರಿಗೆ ನನ್ನ ಮನೆ ಸುತ್ತಲೂ ಇರುವಂತೆ ಹೇಳಿದ್ದಾರೆ. ರಾಜ್ಯದಲ್ಲಿ ಲೋಕಾಯುಕ್ತ, ಎಸಿಬಿ ಇದ್ದರೂ ಸಿಎಂ ಸಿಬಿಐಗೆ ಪತ್ರ ಬರೆದಿದ್ದಾರೆ. ಎಲ್ಲವನ್ನೂ ಆರ್ ಟಿಐ ಅಡಿ ದಾಖಲೆ ತೆಗೆದುಕೊಂಡಿದ್ದೇನೆ. ಮಾಧ್ಯಮಗಳ ಮುಂದೆ ಏನೂ ಹೇಳಲ್ಲ ಎಂದರು.