ಬೆಂಗಳೂರು: ಅಲೆಮಾರಿ ಸಮುದಾಯಕ್ಕೆ 1% ಒಳಮೀಸಲಾತಿ ಕೊಡುವ ಬಗ್ಗೆ ಕಾನೂನು ಇಲಾಖೆ ಮತ್ತು ಕಾನೂನು ತಜ್ಞರ ಜೊತೆ ಚರ್ಚೆ ಮಾಡಿ ಶೀಘ್ರವೇ ನಿರ್ಧಾರ ಮಾಡೋದಾಗಿ ಸಿಎಂ ಸಿದ್ದರಾಮಯ್ಯ (CM Siddaramaiah) ತಿಳಿಸಿದ್ದಾರೆ.
ಒಳಮೀಸಲಾತಿ ಗೊಂದಲ ಹಿನ್ನೆಲೆಯಲ್ಲಿ ಅಲೆಮಾರಿ ಸಮುದಾಯಗಳ ಒಕ್ಕೂಟಗಳ ಜೊತೆ ಸಿಎಂ ಸಿದ್ದರಾಮಯ್ಯ ವಿಧಾನಸೌಧದಲ್ಲಿ ಸಭೆ ನಡೆಸಿದರು. ಸಭೆ ಬಳಿಕ ಮಾತನಾಡಿದ ಅವರು, ಅಲೆಮಾರಿಗಳ ಮಹಾಒಕ್ಕೂಟದ ಸಭೆ ಮಾಡಿದ್ದೇವೆ. ಅಲೆಮಾರಿಗಳು ನಾಗಮೋಹನ್ ದಾಸ್ ಅವರು ಕೊಟ್ಟಿದ್ದ 1% ಮೀಸಲಾತಿ ಕೊಡಬೇಕು ಅಂತ ಮನವಿ ಮಾಡಿದ್ದಾರೆ. ಜೊತೆಗೆ ಅಲೆಮಾರಿಗಳಿಗೆ ಅಭಿವೃದ್ಧಿ ನಿಗಮ ಮಾಡಬೇಕು. ಆರ್ಥಿಕ ಪ್ಯಾಕೇಜ್ ಕೊಡಬೇಕು ಅಂತ ಮನವಿ ಮಾಡಿದ್ದಾರೆ. ನಾವು ಸಾಮಾಜಿಕ ನ್ಯಾಯದ ಪರ ಇರೋದು. 1% ಮೀಸಲಾತಿ ಕೊಡೋ ಬಗ್ಗೆ ಕಾನೂನು ಇಲಾಖೆ ಮತ್ತು ಕಾನೂನು ತಜ್ಞರ ಜೊತೆ ಸಭೆ ಮಾಡಿ ತೀರ್ಮಾನ ಮಾಡ್ತೀವಿ. ಅಭಿವೃದ್ಧಿ ನಿಗಮ ಮಾಡ್ತೀವಿ. ಆರ್ಥಿಕ ಪ್ಯಾಕೇಜ್ ಕೊಡೋದಾಗಿ ಹೇಳಿದ್ದೇವೆ. ಸ್ವಲ್ಪ ಸಮಯ ಕೊಡಿ ಎಂದು ಕೇಳಿದ್ದೇವೆ. ಇದೇ ವೇಳೆ ಕೋರ್ಟ್ ಕೇಸ್ ವಾಪಸ್ ಪಡೆಯಬೇಕು ಅಂತ ಒಕ್ಕೂಟಕ್ಕೆ ಮನವಿ ಮಾಡಿದ್ದೇವೆ ಎಂದು ಹೇಳಿದ್ದಾರೆ.ಇದನ್ನೂ ಓದಿ: ಕನ್ನಡಕ್ಕೆ ಕನ್ನಡಿಗರಿಂದ, ಹೊರಗಿನವರಿಂದಲೂ ಸವಾಲಿದೆ: ಬಸವರಾಜ ಬೊಮ್ಮಾಯಿ
ಒಕ್ಕೂಟದ ಅಧ್ಯಕ್ಷ ಶೇಷಪ್ಪ ಮಾತಾಡಿ, ಅಲೆಮಾರಿಗಳಿಗೆ ನಾಗಮೋಹನ್ ದಾಸ್ ವರದಿ ಅನ್ವಯ 1% ಕೊಡಬೇಕು ಅಂತ ಮನವಿ ಮಾಡಿದ್ದೇವೆ. ಕಾನೂನಿನ ಚೌಕಟ್ಟಿನಲ್ಲಿ 1% ಕೊಡೋ ಬಗ್ಗೆ ಕಾನೂನು ತಜ್ಞರ ಜೊತೆ ಚರ್ಚೆ ಮಾಡೋದಾಗಿ ಸಿಎಂ ಹೇಳಿದ್ದಾರೆ. ಪ್ರತ್ಯೇಕ ನಿಗಮ ಮಾಡಲು ಒಪ್ಪಿದ್ದಾರೆ. ವಿಶೇಷ ಆರ್ಥಿಕ ಪ್ಯಾಕೇಜ್ ಕೊಡೋದಾಗಿ ಕೇಳಿದ್ದೇವೆ. ಸರ್ಕಾರಕ್ಕೆ ಧನ್ಯವಾದ ಹೇಳ್ತೀವಿ. ಆದಷ್ಟೂ ಬೇಗ ತೀರ್ಮಾನ ಮಾಡೋದಾಗಿ ಸಿಎಂ ಹೇಳಿದ್ದಾರೆ ಎಂದಿದ್ದಾರೆ.
ಇನ್ನೂ ಸಿಎಂ ಸಭೆಗೆ ಕೆಲವು ಅಲೆಮಾರಿ ಸಮುದಾಯವರನ್ನು ಬಿಡಲಿಲ್ಲ ಅಂತ ವಿಧಾನಸೌಧದಲ್ಲಿ ಗಲಾಟೆ ಮಾಡಿದರು. ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದ ಘಟನೆಯೂ ನಡೆಯಿತು.ಇದನ್ನೂ ಓದಿ: ಮಂಗಳೂರು| ಹಿಂದೂ ಮುಖಂಡ ಶರಣ್ ಪಂಪ್‌ವೆಲ್ ಪೊಲೀಸ್ ವಶಕ್ಕೆ
 
					
 
		 
		 
		 
		 
		 
		 
		 
		 
		