ಕೊಪ್ಪಳ: ಇಷ್ಟು ವರ್ಷ ಆಳ್ವಿಕೆ ನಡೆಸಿದ ಕಾಂಗ್ರೆಸ್ (Congress) ಮೀಸಲಾತಿ ಹೆಚ್ಚಳ ಮಾಡಲಿಲ್ಲ. ಈಗ ಕಾಂಗ್ರೆಸ್‌ಗೆ 75-80 ಸ್ಥಾನ ಬಂದರೆ ನನ್ನ ಬೆರಳನ್ನೇ ಕತ್ತರಿಸಿ ಕೊಡುತ್ತೇನೆ ಎಂದು ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಶಿವನಗೌಡ ನಾಯಕ (Shivanagowda Nayaka) ಹೇಳಿದ್ದಾರೆ.
ಕೊಪ್ಪಳದ (Koppal) ಕುಷ್ಟಗಿಯಲ್ಲಿ ಜನಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಷ್ಟು ವರ್ಷ ಆಳ್ವಿಕೆ ನಡೆಸಿದ ಕಾಂಗ್ರೆಸ್ ಮೀಸಲಾತಿ ಹೆಚ್ಚಳ ಮಾಡಲಿಲ್ಲ. ಆಗ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಮೀಸಲಾತಿಯನ್ನು ನೀಡಿದರೆ ಈಗ ಆಧುನಿಕ ಅಂಬೇಡ್ಕರ್ ಆಗಿರುವ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಎಸ್‌ಸಿ (SC), ಎಸ್‌ಟಿ (ST) ಮೀಸಲಾತಿ ಹೆಚ್ಚಳ ಮಾಡಿದ್ದಾರೆ ಎಂದು ನುಡಿದರು. ಇದನ್ನೂ ಓದಿ: ಸಿದ್ದರಾಮಯ್ಯ ಅವಧಿಯಲ್ಲಿ ಶಾಲಾ-ಕಾಲೇಜುಗಳಲ್ಲಿಯೇ ಡ್ರಗ್ಸ್ ಸಿಗ್ತಿತ್ತು: ಕಟೀಲ್
ಬಸವರಾಜ ಬೊಮ್ಮಾಯಿ ಅವರಿಗೆ ಎಸ್‌ಸಿ, ಎಸ್‌ಟಿ ಅವರ ಬಗ್ಗೆ ಅಪಾರ ಕಾಳಜಿ ಇದೆ. ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಅವರು ಎರಡು ರಾಜಾಹುಲಿಗಳು ಇದ್ದಂತೆ. ಯಡಿಯೂರಪ್ಪನವರು ಮಹಾರಾಜಾಹುಲಿಯಾದರೆ, ಬೊಮ್ಮಾಯಿ ಅವರು ರಾಜಾಹುಲಿ ಎಂದರು. ಇದನ್ನೂ ಓದಿ: ಅಂಬೇಡ್ಕರ್, ಸಂವಿಧಾನ ನೆನೆದು ಭಾವುಕರಾದ ಕಾಗೇರಿ