ಮಂಡ್ಯ: ನನ್ನ ಬಳಿ ಕೋಟೆಯೂ ಇಲ್ಲ ಕೋಟಿಯೂ ಇಲ್ಲ. ಆದರೆ ಮಂಡ್ಯ ಲೋಕಸಭಾ ಕ್ಷೇತ್ರದಿಂದ ನನ್ನ ಸ್ಪರ್ಧೆ ಖಚಿತ ಎಂದು ಸುಮಲತಾ ಅಂಬರೀಶ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಮಂಡ್ಯದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಅಂಬಿ ಅಭಿಮಾನಿಗಳ ಜೊತೆ ಮಾತನಾಡಿದ್ದೇನೆ. ಎಲ್ಲ ಕಡೆ ಒಳ್ಳೆ ರೆಸ್ಪಾನ್ಸ್ ಇದೆ ಯಾವುದೇ ಕಾರಣಕ್ಕೂ ಸ್ಪರ್ಧೆಯಿಂದ ಹಿಂದೆ ಸರಿಯದಂತೆ ಹೇಳಿದ್ದಾರೆ. ಜನರ ಪ್ರೀತಿ ನೋಡಿ ತುಂಬಾ ಖುಷಿಯಾಗಿದೆ. ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಬಯಸಿದ್ದೇನೆ. ಆದರೆ ಟಿಕೆಟ್ ಕೊಡದಿದ್ರೆ ಪಕ್ಷೇತರ ಅಥವಾ ಬಿಜೆಪಿಯಿಂದ ಸ್ಪರ್ಧೆ ಮಾಡಬೇಕಾ ಎಂಬುದನ್ನು ನಿರ್ಧರಿಸಿಲ್ಲ ಅಂದ್ರು.
Advertisement
Advertisement
ಚುನಾವಣಾ ಪ್ರಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ನಮ್ಮ ಟೀಂ ರೆಡಿಯಿದೆ. ನಾವು ಎಲ್ಲರನ್ನೂ ಸೇರಿಸಿ ಒಂದು ಗ್ರೂಪ್ ಮಾಡಿಕೊಂಡು ಎಲ್ಲರ ಸಲಹೆ ಪಡೆದು ಕೆಲಸ ಮಾಡುತ್ತೇವೆ. ಮಂಡ್ಯದ ಮಂಜುನಾಥ ನಗರದಲ್ಲಿ ನಮ್ಮ ಸ್ವಂತ ಮನೆಯಿದ್ದು, ಅಲ್ಲಿಯೇ ಮನೆ ಕಟ್ಟಲು ನಿರ್ಧರಿಸಿದ್ದೇನೆ ಎಂದು ಸುಮಲತಾ ತಿಳಿಸಿದ್ರು.
Advertisement
ಇದೇ ವೇಳೆ ತಮ್ಮ ವಿರುದ್ಧ ನಿಖಿಲ್ ಸ್ಪರ್ಧಿಸುತ್ತಾರೆ ಎಂಬುದಕ್ಕೆ ಪ್ರತಿಕ್ರಿಯಿಸಿ, ನಿಖಿಲ್ ನನ್ನ ವಿರುದ್ಧ ಸ್ಪರ್ಧೆ ಮಾಡಿದ್ರೆ ಸ್ವಾಗತ. ನಿಖಿಲ್ ನಮಗೆ ಶತ್ರು ಅಲ್ಲ. ಅಭಿಷೇಕ್‍ಗೆ ನಿಖಿಲ್ ತುಂಬ ಒಳ್ಳೆ ಸ್ನೇಹಿತ. ನನಗೆ ನಿಖಿಲ್ ಬೇರೆಯವನಲ್ಲ ಅಂದ್ರು. ಇದನ್ನೂ ಓದಿ: ಮಂಡ್ಯದಿಂದ ಸ್ಪರ್ಧೆ ಖಚಿತ – ಸುಮಕ್ಕನ ಬಗ್ಗೆ ಮಾತನಾಡಲ್ಲ ಅಂದ್ರು ನಿಖಿಲ್
Advertisement
ಸಾಮಾಜಿಕ ಜಾಲತಾಣದ ಚರ್ಚೆ ಬಗ್ಗೆ ಪ್ರತಿಕ್ರಿಯಿಸಿ, ಕೆಲವೊಂದು ಚರ್ಚೆ ಅವೈಡ್ ಮಾಡಲು ಆಗಲ್ಲ. ಅದರ ಬಗ್ಗೆ ತಲೆಕೆಡಿಸಿಕೊಳ್ಳಲ್ಲ. ಮಂಡ್ಯ ಜೆಡಿಎಸ್ ಭದ್ರಕೋಟೆ ಆಗಿದ್ರು ನನ್ನ ಬಳಿ ಜನರ ಪ್ರೀತಿ ಇದೆ. ಅದನ್ನು ಇಟ್ಟುಕೊಂಡು ಜನರ ಬಳಿ ಹೋಗುತ್ತೇನೆ. ನನ್ನ ಹಿಂದೆ ಈಗ ಯಾರಿದ್ದಾರೆ. ಅಂಬರೀಶ್ ಇದ್ದಾಗ ಒಂದು ಫೋನಿನಲ್ಲಿ ಎಲ್ಲ ಕೆಲಸ ಆಗುತ್ತಿತ್ತು. ಈಗ ನನ್ನ ಜೊತೆ ಯಾರಿದ್ದಾರೆ ಹೇಳಿ. ಸೋಲು ಗೆಲುವಿನ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ. ಜನರ ಜೊತೆ ಇರುತ್ತೇನೆ. ಅಂಬರೀಶ್ ಅವರು ದೇವೇಗೌಡರನ್ನು ತಂದೆ ಸ್ಥಾನದಲ್ಲಿ ನೋಡುತ್ತಿದ್ದರು. ಅದೇ ಪ್ರೀತಿ ದೇವೇಗೌಡರಿಗೆ ಇತ್ತು ಎಂದು ಸುಮಲತಾ ಹೇಳಿದ ಚುನಾವಣೆ ಯುದ್ಧವಲ್ಲ ಅದೊಂದು ಸ್ಪರ್ಧೆ ಎಂದು ತಿಳಿಸಿದ್ರು.
ಗುರು ಕುಟುಂಬಕ್ಕೆ ಜಮೀನು ಪತ್ರ:
ಪುಲ್ವಾಮಾ ದಾಳಿಯಲ್ಲಿ ವೀರಮರಣವನ್ನಪ್ಪಿದ್ದ ಮಂಡ್ಯದ ಗುಡಿಗೆರೆ ಗ್ರಾಮದ ವೀರ ಯೋಧ ಗುರು ಕುಟುಂಬಕ್ಕೆ ನಟಿ ಸುಮಲತಾ ಅಂಬರೀಷ್ 20 ಗುಂಟೆ ಜಮೀನು ನೀಡೋದಾಗಿ ಘೋಷಿಸಿದ್ದಂತೆ ಇಂದು ಆ ಕುಟುಂಬಕ್ಕೆ ಜಮೀನು ಪತ್ರ ಹಸ್ತಾಂತರಿಸಿದ್ರು. ಮಂಡ್ಯದ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಈ ಹಿಂದೆ ನಾನು ಗುರು ಕುಟುಂಬಕ್ಕೆ ಜಮೀನು ನೀಡೋದಾಗಿ ಹೇಳಿದ್ದೆ. ಆ ಪ್ರಕಾರವಾಗಿ ಅಭಿಷೇಕ್ ಅಂಬರೀಶ್ ಹೆಸರಲ್ಲಿದ್ದ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ದೊಡ್ಡರಸಿನಕೆರೆ ಗ್ರಾಮದ ಜಮೀನಿನ ಪೈಕಿ 20 ಗುಂಟೆಯ ಜಾಗವನ್ನು ಗುರು ಪತ್ನಿ ಕಲಾವತಿಗೆ ಹಸ್ತಾಂತರಿಸೋದಾಗಿ ಹೇಳಿ ದಾನ ಪತ್ರವನ್ನು ಆ ಕುಟುಂಬಕ್ಕೆ ನೀಡಿದ್ರು.
ಇನ್ನು ಜಮೀನು ಪಡೆದ ಕಲಾವತಿ, ಕೂಡ ಈ ಜಮೀನನ್ನು ಯಾವುದೇ ಕಾರಣಕ್ಕೂ ಮಾರಲ್ಲ. ಸುಮಲತಾ ಅವರ ನೆನಪಾರ್ಥವಾಗಿ ಸ್ವೀಕರಿಸುವೆ ಎಂದ್ರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv