Connect with us

ಪಕ್ಷ ಎಲ್ಲಿ ಹೋಗಿ ಸ್ಪರ್ಧೆ ಮಾಡು ಅಂದ್ರೂ ನಾನು ನಿಲ್ತೀನಿ: ಸಿಟಿ ರವಿ

ಪಕ್ಷ ಎಲ್ಲಿ ಹೋಗಿ ಸ್ಪರ್ಧೆ ಮಾಡು ಅಂದ್ರೂ ನಾನು ನಿಲ್ತೀನಿ: ಸಿಟಿ ರವಿ

ಬೆಂಗಳೂರು: ನಾನು ವರುಣಾ ಕ್ಷೇತ್ರದಲ್ಲಿ ನಿಲ್ಲೋದಕ್ಕೂ ಸೈ. ಕನಕಪುರ, ಹೊಳೆನರಸೀಪುರದಲ್ಲೂ ಸ್ಪರ್ಧಿಸಲೂ ರೆಡಿ. ಪಕ್ಷದ ಹೈಕಮಾಂಡ್ ಏನ್ ತೀರ್ಮಾನಿಸುತ್ತೋ ಅದಕ್ಕೆ ನಾನು ಬದ್ಧ ಅಂತ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಪಕ್ಷದ ಶಿಸ್ತಿನ ಕಾರ್ಯಕರ್ತ. ಪಕ್ಷ ಎಲ್ಲಿ ಹೋಗಿ ಸ್ಪರ್ಧೆ ಮಾಡು ಅಂದ್ರೂ ಅಲ್ಲಿ ಸ್ಪರ್ಧೆ ಮಾಡ್ತೀನಿ ಅಂತ ಹೇಳಿದ್ರು.

ಸಿಎಂ ವಿರುದ್ಧ ವ್ಯಂಗ್ಯ: ಕಳೆದ ಚುನಾವಣೆಯಲ್ಲೇ ಸಿದ್ದರಾಮಯ್ಯನಿಗೆ ಕಾಪು ಸಿದ್ದಲಿಂಗಸ್ವಾಮಿ ಏಳು ಕೆರೆ ನೀರು ಕುಡಿಸಿದ್ರು. ಆಗ ಬಿಜೆಪಿ, ಕೆಜೆಪಿ ಸ್ಪರ್ಧೆಯಿದ್ರೂ ಸಿದ್ದರಾಮಯ್ಯ ನೀರು ಕುಡಿದಿದ್ರು. ಈ ಬಾರಿ ಆ ಕೆರೆಯಲ್ಲೇ ಮುಳುಗಿ ಹೋಗ್ತಾರೆ. ಸಿದ್ದರಾಮಯ್ಯ ನಾಯಕರಲ್ಲ ಅನ್ನೋದು ಅವರ ಹೇಳಿಕೆಯಿಂದಲೇ ಸಾಬೀತಾಗಿದೆ. ಅವರ ಕ್ಷೇತ್ರದಲ್ಲೇ ಅವರು ಗೆಲ್ಲೋದು ಅನುಮಾನವಿದೆ, ಅದಕ್ಕೆ ಅವರು 224 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ರೆಡಿ ಅಂದಿದ್ದಾರೆ ಅಂತ ವ್ಯಂಗ್ಯವಾಡಿದ್ದಾರೆ.

ಸತ್ಯಾಸತ್ಯತೆ ಜನತೆಗೆ ತಿಳಿಸಿ: ಗೌರಿ ಲಂಕೇಶ್ ಹತ್ಯೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಿ ಟಿ ರವಿ, ಗೌರಿ ಲಂಕೇಶ್ ಸತ್ತಿರೋದು ಸತ್ಯ ಅಷ್ಟೇ. ಬೇರೇನೂ ಸತ್ಯ ಅಲ್ಲ. ಈ ಸರ್ಕಾರದಲ್ಲಿ ವಿಚಾರವಾದಿಗಳು ಸತ್ರೂ, ರಾಷ್ಟ್ರೀಯವಾದಿಗಳು ಸತ್ರೂ ತನಿಖೆ ನಡೆಸದೇ ದಿನಕೊಂದು ಟ್ವಿಸ್ಟ್ ಕೊಡೋದು ಸರಿಯಲ್ಲ. ಪೂರ್ವಗ್ರಹ ಪೀಡಿತ ತನಿಖೆ ನಡೆಸುವುದು ಸರಿಯಲ್ಲ. ತನಿಖೆ ನಡೆಸಿ ಸತ್ಯಾಸತ್ಯತೆ ಜನತೆಗೆ ತಿಳಿಸಿ ಅಂತ ಹೇಳಿದ್ರು.

ಶೀಘ್ರವೇ ಹೋರಾಟ: ಫೋನ್ ಕದ್ದಾಲಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರದ ವಿರುದ್ಧ ಹೋರಾಟ ಕೈಗೊಳ್ಳಲಾಗುವುದು. ಈ ಬಗ್ಗೆ ಮಾಜಿ ಡಿಸಿಎಂ ಆರ್ ಅಶೋಕ್ ಜತೆ ಚರ್ಚಿಸಿ ನಿರ್ಧಾರಕ್ಕೆ ಬರಲಾಗುವುದು. ಆರ್.ಅಶೋಕ್ ಆರೋಪ ಮಾಡಿದ ಬಳಿಕ ಸಿಎಂ ಈ ರೀತಿ ಹೇಳಿಕೆ ಕೊಡುವುದು ಸರಿಯಲ್ಲ. ಪ್ರಕರಣವನ್ನ ಸಿಬಿಐಗೆ ಕೊಡಲಿ, ಇಲ್ಲ ನ್ಯಾಯಾಂಗ ತನಿಖೆಗೆ ಕೊಡ್ಲಿ ಅಂತ ಕಿಡಿಕಾರಿದ್ರು.

Advertisement
Advertisement