ಉಡುಪಿಯಲ್ಲಿ ನಡೆದ ಪಾಣಾರ- ನಲಿಕೆ ಸಮುದಾಯ ಸಮಾವೇಶದಲ್ಲಿ ‘ಕಾಂತಾರ’ (Kantara) ಹೀರೋ ರಿಷಬ್ ಶೆಟ್ಟಿ (Rishab Shetty) ಭಾಗಿಯಾಗಿದ್ದಾರೆ. ಈ ವೇಳೆ, ಮುಂದಿನ ಜನ್ಮದಲ್ಲಿ ಪಾಣಾರ ಸಮುದಾಯದಲ್ಲಿ ಹುಟ್ಟುವ ಆಸೆಯಿದೆ ಎಂದು ರಿಷಬ್ ಮಾತನಾಡಿದ್ದಾರೆ.
ಉಡುಪಿಯ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪಾಣಾರ- ನಲಿಕೆ ಸಮುದಾಯ ಸಮಾವೇಶ ಕಾರ್ಯಕ್ರಮದಲ್ಲಿ ರಿಷಬ್ ಶೆಟ್ಟಿ ಕೂಡ ಸಾಕ್ಷಿಯಾಗುವ ಮೂಲಕ ಸಾಥ್ ನೀಡಿದ್ದಾರೆ. ಕಾಂತಾರ ಸಿನಿಮಾ ಸಕ್ಸಸ್ ಆಗಿರೋದ್ದಕ್ಕೆ ಕಾರಣ ನಾನಲ್ಲ. ಪಂಜುರ್ಲಿ ದೈವದ ಆಶೀರ್ವಾದ ಎಂದು ರಿಷಬ್ ಮಾತನಾಡಿದ್ದಾರೆ. ಈ ಸಿನಿಮಾದ ಮೂಲಕ ನನಗೂ ದೈವದ ಸೇವೆ ಮಾಡುವಂತೆ ಆಗಿದೆ. ಈ ಬಗ್ಗೆ ನನಗೆ ಖುಷಿಯಿದೆ ಎಂದು ಹೇಳಿದ್ದಾರೆ.
ಅಮೇರಿಕಾದ ಮ್ಯೂಸಿಯಂನಲ್ಲಿ ಇಂದು ಪಂಜುರ್ಲಿಯ ಮೊಗ ಇಟ್ಟಿದ್ದಾರೆ. ಇದು ನಮ್ಮ ನೆಲದ ದೈವ ದೇವರ ಶಕ್ತಿಯಾಗಿದೆ. ಮುಂದಿನ ಜನ್ಮದಲ್ಲಿ ಪಾಣಾರ ಸಮುದಾಯದಲ್ಲಿ ಹುಟ್ಟುವ ಆಸೆಯಿದೆ ಎಂದು ರಿಷಬ್ ವ್ಯಕ್ತಪಡಿಸಿದ್ದಾರೆ. ನಾನು ಪಾಣಾರನಾಗಿ ದೈವದ ಚಾಕರಿ ಮಾಡುವಂತಾಗಲಿ ಎಂದು ಕೇಳಿ ಕೇಳುತ್ತೇನೆ. ಪಂಜುರ್ಲಿ, ಗುಳಿಗ, ಅಣ್ಣಪ್ಪಸ್ವಾಮಿಯ ಸೇವೆ ಮಾಡುವ ಅವಕಾಶ ಸಿಗಲಿ ಎಂದು ರಿಷಬ್ ಮಾತನಾಡಿದ್ದಾರೆ.
ಸಮಾಜಮುಖಿ ಫೌಂಡೇಶನ್ ಮಾಡುತ್ತಿದ್ದೇವೆ. ನಲಿಕೆ ಸಮುದಾಯದ ಓದುವ ಮಕ್ಕಳಿಗೆ ತಮ್ಮ ಟ್ರಸ್ಟ್‌ನಿಂದ ಸಹಾಯ ಮಾಡುತ್ತೇವೆ. ಪಾಣಾರ ಸಮುದಾಯದ ಮಕ್ಕಳಲ್ಲಿ ಶಿಕ್ಷಣ ಜೊತೆ ಆಚಾರ ವಿಚಾರ ಮುಂದುವರೆಬೇಕು. ಈ ಬಗ್ಗೆ ಮುಖ್ಯಮಂತ್ರಿ ಉಪ ಮುಖ್ಯಮಂತ್ರಿ ಮತ್ತು ಸಚಿವರ ಜೊತೆ ಶಕ್ತಿಮೀರಿ ಒತ್ತಾಯ ಮಾಡುತ್ತೇನೆ ಎಂದು ರಿಷಬ್ ಬೆಂಬಲ ಸೂಚಿಸಿದ್ದಾರೆ. ಇದನ್ನೂ ಓದಿ:Gadar 2: ಮುನಿಸು ಮರೆತು 16 ವರ್ಷಗಳ ನಂತರ ಒಂದಾದ ಶಾರುಖ್-ಸನ್ನಿ ಡಿಯೋಲ್
ಬಳಿಕ ತಮ್ಮ ಮತ್ತು ಉಡುಪಿ ಊರಿನ ನಂಟಿನ ಬಗ್ಗೆ ರಿಷಬ್ ಮುಕ್ತವಾಗಿ ಮಾತನಾಡಿದರು. ಉಳಿದವರು ಕಂಡಂತೆ (Ulidavaru Kandante) ಸಿನಿಮಾ ನಾವು ಇಲ್ಲೇ ಚಿತ್ರೀಕರಣ ಮಾಡಿದೆವು. ನಿಮ್ಮೂರಿನ ಪ್ರತಿಭೆ ರಕ್ಷಿತ್ ಶೆಟ್ಟಿ (Rakshit Shetty) ಕೂಡ ವೃತ್ತಿರಂಗದಲ್ಲಿ ಬೆಳೆಯುತ್ತಿದ್ದಾರೆ ಎಂದು ರಿಷಬ್ ಮೆಚ್ಚುಗೆಯ ಮಾತುಗಳನ್ನ ಆಡಿದರು.