ಮುಂಬೈ: ಬಿಜೆಪಿಗೆ ಮಹಾರಾಷ್ಟ್ರ ಸಿಎಂ ಸ್ಥಾನವನ್ನು ಏಕನಾಥ್ ಶಿಂಧೆ (Eknath shinde) ಬಿಟ್ಟುಕೊಟ್ಟಿದ್ದಾರೆ. ಈ ನಿರ್ಧಾರದ ಬೆನ್ನಲ್ಲೇ ಮಾಜಿ ಸಿಎಂ ದೇವೇಂದ್ರ ಫಡ್ನಾವೀಸ್ (Devendra Fadnavis) ಅವರು ಮುಖ್ಯಮಂತ್ರಿ ಪಟ್ಟ ಅಲಂಕರಿಸುವುದು ಬಹುತೇಕ ಖಚಿತವಾಗಿದೆ.
ಇಂದು (ನ.27) ಸಂಜೆ ಮಹತ್ವದ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಏಕನಾಥ್ ಶಿಂಧೆ, ನಾನು ಯಾವತ್ತೂ ಮುಖ್ಯಮಂತ್ರಿ ಆಗುತ್ತೇನೆ ಎಂದುಕೊಂಡಿರಲಿಲ್ಲ. ಬಿಜೆಪಿಗೆ (BJP) ಮತ್ತು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ನನ್ನಸಹಕಾರ ಯಾವಾಗಲೂ ಇರುತ್ತದೆ ಎಂದರು.
Advertisement
Advertisement
ನನ್ನ ಪ್ರಕಾರ ಸಿಎಂ ಎಂದರೆ ಕಾಮನ್ ಮ್ಯಾನ್. ನಾವು ತೆಗೆದುಕೊಂಡ ನಿರ್ಧಾರಗಳು ಇತಿಹಾಸ ಪುಟದಲ್ಲಿ ಸೇರಿವೆ. ನನಗೆ ಮೇಲೆ ಯಾರ ಸಿಟ್ಟಿಲ್ಲ. ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ. ನಾನು ಪ್ರಚಾರಕ್ಕಾಗಿ ಕೆಲಸ ಮಾಡಿಲ್ಲ. ಸಾಮಾನ್ಯನಂತೆ ಕೆಲಸ ಮಾಡಿದ್ದೇನೆ. ಮಹಾಯುತಿ (Mahayuti) ಒಕ್ಕೂಟ ಯಾರನ್ನೂ ಆಯ್ಕೆ ಮಾಡುತ್ತದೋ ಅವರಿಗೆ ನನ್ನ ಬೆಂಬಲ ಇರಲಿದೆ ಎಂದು ತಿಳಿಸಿದರು. ಇದನ್ನೂ ಓದಿ: ಒಲಿಂಪಿಕ್ಸ್ ಪದಕ ವಿಜೇತ ಕುಸ್ತಿಪಟುಗೆ ಶಾಕ್ – ಬಜರಂಗ್ ಪುನಿಯಾ 4 ವರ್ಷ ಬ್ಯಾನ್
Advertisement
ನನಗೆ ಪ್ರಧಾನಿ ಮೋದಿ ಕರೆ ಮಾಡಿದ್ದರು. ಏನೇ ಆಗಲಿ ಜೊತೆಗೆ ಇರುತ್ತೇನೆ ಎಂದು ಹೇಳಿದ್ದೇನೆ. ನೀವು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ದ. ಮೋದಿ ಅವರು ಕೈಗೊಳ್ಳುವ ನಿರ್ಧಾರಗಳೇ ಅಂತಿಮ ಎಂದು ಹೇಳಿದರು.