ಹೆಸರಾಂತ ನಿರ್ದೇಶಕ ರಾಮ್ ಗೋಪಾಲ್ ವರ್ಮಾಗೆ ಬಾಲಿವುಡ್ ನಟಿ ಶ್ರೀದೇವಿ ಎಂದರೆ ಎಲ್ಲಿಲ್ಲದ ಅಭಿಮಾನ. ಆಗಾಗ್ಗೆ ಶ್ರೀದೇವಿ ಅವರನ್ನು ನೆನಪಿಸಿಕೊಳ್ಳುತ್ತಲೇ ಇರುತ್ತಾರೆ ವರ್ಮಾ. ಶ್ರೀದೇವಿಯ ಸೌಂದರ್ಯವನ್ನು ಸಾಕಷ್ಟು ಬಾರಿ ಹೊಗಳಿದ್ದಾರೆ. ಶ್ರೀದೇವಿ ಮರಣ ಹೊಂದಿದ್ದಾಗ ಕಣ್ಣೀರಿಟ್ಟಿದ್ದಾರೆ.
ಶ್ರೀದೇವಿ ಅಗಲಿಕೆಯ ನಂತರವೂ ಅವರ ಜೊತೆಗಿನ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ ವರ್ಮಾ. ಕಾರಿನಲ್ಲಿ ಡ್ರೈವರ್ ಸೀಟ್ ನಲ್ಲಿ ಶ್ರೀದೇವಿ ಕುಳಿತಿದ್ದು, ಅದರ ಪಕ್ಕದ ಸೀಟಿನಲ್ಲಿ ಸೀಗರೇಟು ಹಿಡಿದುಕೊಂಡು ವರ್ಮಾ ಕೂತಿದ್ದಾರೆ. ಈ ಫೋಟೋವನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ನಾನು ಶ್ರೀದೇವಿ ಅವರನ್ನು ಭೇಟಿ ಮಾಡೋಕೆ ಸ್ವರ್ಗಕ್ಕೆ ಹೋಗಿದ್ದೆ ಎಂದು ಬರೆದುಕೊಂಡಿದ್ದಾರೆ. ಅದು ನಿಜವಾದ ಫೋಟೋವನ್ನು ಎಡಿಟ್ ಮಾಡಿದ ಫೋಟೋ ಅದಾಗಿದೆ ಎಂಬುದು ಗೊತ್ತಾಗಿದೆ. ಆದರೂ, ಶ್ರೀದೇವಿ ಮೇಲಿನ ಅಭಿಮಾನವನ್ನು ಮತ್ತೆ ತೋರಿಸಿದ್ದಾರೆ ವರ್ಮಾ.