ನವದೆಹಲಿ: ಸೌತ್ ಆಫ್ರಿಕಾ ಮಾಜಿ ಕ್ರಿಕೆಟ್ ಆಟಗಾರ ಎಬಿ ಡಿವಿಲಿಯರ್ಸ್ ಮತ್ತೆ ಕ್ರಿಕೆಟ್‍ಗೆ ಕಮ್ ಬ್ಯಾಕ್ ಮಾಡುವ ಮಾತನಾಡಿದ್ದು, ಆದರೆ ಧೋನಿ ಇದ್ದರೆ ಮಾತ್ರ ಕ್ರಿಕೆಟ್ ಆಡುತ್ತೇನೆ ಎಂದಿದ್ದಾರೆ.
ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿದ ಎಬಿಡಿ, ನಿವೃತ್ತಿ ಘೋಷಣೆ ಮಾಡುವ ಮುನ್ನ ತಮಗೆ 2019ರ ವಿಶ್ವಕಪ್ ಆಡುವ ಆಸೆ ಇತ್ತು ಎಂದಿದ್ದಾರೆ. ಅಲ್ಲದೇ 2023ರ ವಿಶ್ವಕಪ್ ಆಡಲು ನಾನು ಆರ್ಹನಾಗಿದ್ದು ಖಂಡಿತ ಆಡುತ್ತೇನೆ. ಆದರೆ ಆ ವೇಳೆ ಧೋನಿ ಕೂಡ ಇರಬೇಕು ಎಂದಿದ್ದಾರೆ. ಆ ಮೂಲಕ ತಮ್ಮ ಕ್ರಿಕೆಟ್ ವೃತ್ತಿ ಜೀವನದಲ್ಲಿ ಧೋನಿ ಎಷ್ಟು ಪ್ರೇರಣೆ ನೀಡಿದ್ದಾರೆ ಎಂಬುವುದನ್ನು ಬಹಿರಂಗ ಪಡಿಸಿದ್ದಾರೆ.
Advertisement
Advertisement
2023ರ ವೇಳೆಗೆ ನನಗೆ 39 ವರ್ಷಗಳಾಗಿರುತ್ತದೆ. ಆಗಲೂ ಧೋನಿ ಆಡುತ್ತಿರುತ್ತಾರೆ, ನಾನೂ ವಿಶ್ವಕಪ್ ಆಡುತ್ತೇನೆ ಎಂದಿದ್ದಾರೆ. ಇದೇ ವೇಳೆ ಕೊಹ್ಲಿ ಅವರೊಂದಿಗೆ ಇರುವ ಬಾಂಧವ್ಯದ ಬಗ್ಗೆಯೂ ಹೇಳಿಕೊಂಡಿದ್ದಾರೆ. ನಾನು ನಿವೃತ್ತಿ ಹೇಳಿದ ಸಂದರ್ಭದಲ್ಲೂ ಹಲವರು ಟೀಕೆಗಳನ್ನು ಎದುರಿಸಿದ್ದೇನೆ. ಆ ಸಮಯ ನನಗೆ ಬಹಳ ಕಷ್ಟಕಾರವಾಗಿತ್ತು ನೆನಪಿಸಿ ಕೊಂಡಿದ್ದಾರೆ.
Advertisement
ದಕ್ಷಿಣ ಆಫ್ರಿಕಾ ಪರ 114 ಟೆಸ್ಟ್ ಪಂದ್ಯಗಳನ್ನು ಆಡಿರುವ ಎಬಿಡಿ 8,765 ರನ್ ಸಿಡಿಸಿದ್ದಾರೆ. ಇದರಲ್ಲಿ 46 ಅರ್ಧ ಶತಕ, 22 ಶತಕಗಳನ್ನು ಸಿಡಿಸಿದ್ದಾರೆ. ಏಕದಿನ ಕ್ರಿಕೆಟಿನಲ್ಲಿ 228 ಪಂದ್ಯಗಳಿಂದ 9,577 ರನ್ ಗಳಿಸಿದ್ದು, ಇದರಲ್ಲಿ 25 ಶತಕ, 53 ಅರ್ಧ ಶತಕ ಸಿಡಿಸಿದ್ದಾರೆ. 2004 ರಲ್ಲಿ ಟೆಸ್ಟ್ ಪಂದ್ಯಗಳಿಗೆ ಪಾದಾರ್ಪಣೆ ಮಾಡಿದ ಎಬಿಡಿ 2018ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ವಿದಾಯ ಘೋಷಿಸಿದ್ದರು.