ಮೈಸೂರು: ನಾನು ಚಿಕ್ಕವನಾಗಿದ್ದಾಗ ನಮ್ಮ ಅಪ್ಪ ದಸರಾಗೆ (Dasara) ಕರೆದುಕೊಂಡು ಬಂದಿದ್ದರು. ನಾನು ನನ್ನ ಅಪ್ಪನ ಹೆಗಲ ಮೇಲೆ ಕೂತು ಮೈಸೂರು ದಸರಾ ನೋಡಿದ್ದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ತಮ್ಮ ದಸರಾ ನೆನಪನ್ನು ಮೆಲುಕು ಹಾಕಿದ್ದಾರೆ.
ಮೈಸೂರು ದಸರಾ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನನಗೆ ಆಗ ಐದಾರು ವರ್ಷ ಇರಬಹುದು. ನನ್ನ ಅಪ್ಪನ ಹೆಗಲ ಮೇಲೆ ಕುಳಿತು ದಸರಾ ನೋಡಿದ್ದೆ. ನೋಡು ನೋಡು ಮೈಸೂರು ಮಹಾರಾಜ ಎನ್ನುತ್ತಿದ್ದರು. ನನಗೆ ಕಾಣದಿದ್ದರೂ ನಮಸ್ಕಾರ ಮಾಡಿದ್ದೆ. ಮೈಸೂರಿಗೆ ಓದಲು ಬಂದಾಗ ಪ್ರತಿ ದಸರಾದಲ್ಲೂ ತಪ್ಪದೇ ವಸ್ತು ಪ್ರದರ್ಶನಕ್ಕೆ (Exhibition) ಹೋಗುತ್ತಿದ್ದೆ. ದಸರಾ ಮೂಲಕ ನಾಡಿನ ಕಲೆ, ಸಂಸ್ಕೃತಿಯನ್ನು ದೇಶಕ್ಕೆ ತಿಳಿಸುತ್ತಿದ್ದೇವೆ ಎಂದರು. ಇದನ್ನೂ ಓದಿ: ಮೈಸೂರಿನ ಐತಿಹಾಸಿಕ ದಸರಾ ಜೀವಂತ ಮಹಾಕಾವ್ಯ: ಕಾರ್ಯಕ್ರಮಗಳಿಗೆ ಹಂಸಲೇಖ ಚಾಲನೆ
Advertisement
Advertisement
ರಾಜ್ಯದ ಅಭಿವೃದ್ಧಿಯನ್ನು ಜನರಿಗೆ ತಿಳಿಸುವ ಕಾರ್ಯವನ್ನು ದಸರಾ ಮೆರವಣಿಗೆ ಮೂಲಕ ಮಾಡುತ್ತೇವೆ. ಇಡೀ ಜಗತ್ತಿಗೆ ಕನ್ನಡ ನಾಡಿನ ವೈಭೋಗ ತಿಳಿಸುವ ಕಾರ್ಯ ದಸರಾ ಮೂಲಕ ಆಗುತ್ತಿದೆ. ಕಲೆ, ಸಂಸ್ಕೃತಿ, ಸಂಪ್ರದಾಯ ನಮ್ಮ ನಾಡಿನಲ್ಲಿ ಶ್ರೀಮಂತವಾಗಿದೆ. ಕರ್ನಾಟಕ ಜನ ಸುಸಂಸ್ಕೃತ ಜನ. ನಮ್ಮಲ್ಲಿ ಪ್ರೀತಿ, ವಿಶ್ವಾಸ ಹೆಚ್ಚಿದೆ. ಪರಸ್ಪರ ಪ್ರೀತಿ, ವಿಶ್ವಾಸ, ಗೌರವದಿಂದ ಬದುಕುವುದು ಮುಖ್ಯ. ದೇಶ ಮತ್ತು ರಾಜ್ಯಕ್ಕೆ ಇದು ತುಂಬಾ ಅಗತ್ಯ ಎಂದು ಹೇಳಿದರು. ಇದನ್ನೂ ಓದಿ: ಮಹಿಷಾಸುರ ದುರ್ಗುಣಗಳ ಪ್ರತೀಕ; ಮಹಿಷ ದಸರಾ ಸಮಾಜಕ್ಕೆ ಒಳ್ಳೆಯ ಸಂದೇಶ ಸಾರುವುದಿಲ್ಲ: ಪೇಜಾವರ ಶ್ರೀ
Advertisement
ಈ ನಾಡಿನ ಸಂಪತ್ತು, ಅಧಿಕಾರ ಎಲ್ಲಾ ವರ್ಗದ ಜನರಿಗೂ ಹಂಚಿಕೆ ಆಗಬೇಕು. ಎಲ್ಲಾ ವರ್ಗದ ಜನರಿಗೂ ಎಲ್ಲಾ ಅವಕಾಶ ಸಿಗಬೇಕು. ಅದು ನಿಜವಾದ ಸಾಮಾಜಿಕ ನ್ಯಾಯ. ಸರ್ಕಾರ ಐದು ಗ್ಯಾರಂಟಿಗಳನ್ನು ಬದ್ಧತೆಯಿಂದ ಘೋಷಿಸಿ ಜಾರಿ ಮಾಡುತ್ತಿದೆ. ಐದನೇ ಗ್ಯಾರಂಟಿ ಮುಂದಿನ ಜನವರಿಯಲ್ಲಿ ಮಾಡುತ್ತೇವೆ. ದಸರಾ ಮಹತ್ವಕ್ಕೆ ಕುಂದು ಬಾರದಂತೆ ಸಾಂಪ್ರದಾಯಿಕ ದಸರಾ ಮಾಡುತ್ತಿದ್ದೇವೆ ಎಂದು ನುಡಿದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಐಸಿಎಸ್‌ಐ ವಾಕಥಾನ್
Advertisement
42 ಲಕ್ಷ ಹೆಕ್ಟೇರ್ ಬೆಳೆ ನಷ್ಟವಾಗಿದೆ. 30 ಸಾವಿರ ಕೋಟಿ ರೂ. ನಷ್ಟವಾಗಿದೆ. 4,800 ಕೋಟಿ ರೂ. ಪರಿಹಾರವನ್ನು ಕೇಂದ್ರದಿಂದ ಕೇಳಿದ್ದೇವೆ. ಈಗ 116 ತಾಲೂಕು ಬರಪೀಡಿತವಾಗಿದೆ. ಕೇಂದ್ರದ ಬರುವ ಹಣದಲ್ಲೇ ಎಲ್ಲಾ ಪರಿಹಾರ ಕೊಡಲು ಆಗಲ್ಲ. ಈ ವರ್ಷ ವಿಶೇಷ ಎಂದರೆ ಹಸಿರು ಬರ ಬಂದಿದೆ. ನೋಡಲು ಹಸಿರು ಕಾಣಿಸುತ್ತೆ. ಆದರೆ ಬೆಳೆ ಬಂದಿರಲ್ಲ. ಹಿಂಗಾರು ಮಳೆ ಉತ್ತಮವಾಗಲಿ ಅಂತಾ ಚಾಮುಂಡಿ ತಾಯಿಯಲ್ಲಿ ಪ್ರಾರ್ಥಿಸಿದ್ದೇವೆ ಎಂದರು. ಇದನ್ನೂ ಓದಿ: ಭಾರತದಲ್ಲಿ ಇರಬೇಕೆಂದರೆ ಭಾರತ್ ಮಾತಾ ಕಿ ಜೈ ಎನ್ನಬೇಕು: ಕೇಂದ್ರ ಸಚಿವ
Web Stories