ಬೆಳಗಾವಿ: ಬಿಜೆಪಿ (BJP) ಪಕ್ಷದಲ್ಲಿ ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ. ವೈಯಕ್ತಿಕ ಭಿನ್ನಾಭಿಪ್ರಾಯ ಏನಿದ್ದರೂ ಅದು ಮನೆಯಲ್ಲಿ. ಪಕ್ಷದ ವೇದಿಕೆಗೆ ಬಂದರೆ ನಾವೆಲ್ಲರೂ ಒಂದೇ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ (Ramesh Jarkiholi) ಹೇಳಿದರು.
ಗೋಕಾಕ್‌ನಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಹಲವು ನಾಯಕರ ಗೈರು ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರಂಭಾಪುರಿ ಜಗದ್ಗುರುಗಳ ಕಾರ್ಯಕ್ರಮಕ್ಕೆ ಪ್ರಹ್ಲಾದ್ ಜೋಶಿ, ಸಿಸಿ ಪಾಟೀಲ್ ಹೋಗಿದ್ರು. ಜಿಲ್ಲೆಯ ನಾಯಕರು ದಾವಣಗೆರೆಯ ಕಾರ್ಯಕ್ರಮಕ್ಕೆ ಹೋಗಿದ್ದಾರೆ. ನೋಡಿ ಅದು ಅವರವರ ಪ್ರೀತಿ, ವಿಶ್ವಾಸ. ನಾನು ಭಾನುವಾರ ಯಮಕನಮರಡಿ ಕ್ಷೇತ್ರಕ್ಕೆ ಹೋಗಿರಲಿಲ್ಲ. ಅವರು ಬ್ಯಾನರ್‌ನಲ್ಲಿ ನಮ್ಮ ಫೋಟೋ ಹಾಕಿರಲಿಲ್ವಲ್ಲ, ಅದಕ್ಕಾಗಿ ನನ್ನ ಹಾಗೂ ಬಾಲಚಂದ್ರ ಜಾರಕಿಹೊಳಿಯ ಅವಶ್ಯಕತೆ ಇಲ್ಲ ಎಂದು ಹೋಗಿರಲಿಲ್ಲ ಎಂದರು.
ಅಮಿತ್ ಶಾ ಒಗ್ಗಟ್ಟಿನ ಪಾಠ ಮಾಡಿದರೂ ಬೆಳಗಾವಿ ಬಿಜೆಪಿ ನಾಯಕರ ಮಧ್ಯೆ ವೈಮನಸ್ಸು ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾವು ಒಗ್ಗಟ್ಟಾಗಿದ್ದೇವೆ. ವೈಯಕ್ತಿಕ ಭಿನ್ನಾಭಿಪ್ರಾಯ ಏನಿದ್ದರೂ ಅದು ಮನೆಯಲ್ಲಿ. ಪಕ್ಷದ ವೇದಿಕೆಗೆ ಬಂದರೆ ನಾವೆಲ್ಲರೂ ಒಂದೇ. ಪಕ್ಷದ ಹೈಕಮಾಂಡ್ ನನ್ನನ್ನು ಈ ಬಾರಿ ಕಮಿಟಿಯಲ್ಲಿ ಹಾಕಿದ್ದಾರೆ. ಈಗ ಸರಿಯಾದ ಸಮಯ. ಮಂತ್ರಿಗಳ ಹಿಂದೆ ಅಡ್ಡಾಡುತ್ತಿರಲಿಲ್ಲ. ಪಕ್ಷದ ವರಿಷ್ಠರ ಆದೇಶ ಪ್ರಕಾರ ಕೆಲಸ ಮಾಡುತ್ತೇವೆ ಎಂದರು. ಇದನ್ನೂ ಓದಿ: ಹೇಗೆ ಬಲಿ ಹಾಕಬೇಕೆಂದು ಗೊತ್ತಿದೆ – ಟ್ರಾನ್ಸ್‌ಫಾಮರ್ ಬದಲಿಸದ ಅಧಿಕಾರಿಗೆ ಹೆಚ್.ಡಿ.ರೇವಣ್ಣ ಕ್ಲಾಸ್
ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) 20 ವರ್ಷ ರಮೇಶ್ ಜಾರಕಿಹೊಳಿ ಜೊತೆ ಇದ್ದು, ಲಾಭ ಪಡೆದು ಕೈ ಕೊಟ್ಟರು ಎಂಬ ಸಂಜಯ್ ಪಾಟೀಲ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಲಾಭ ಎಂದರೆ ಏನು ಅರ್ಥ ಆಗಲಿಲ್ಲ. ನಾವು ಆಗ ಒಂದು ಟೀಮ್ ಆಗಿ ಕೆಲಸ ಮಾಡುತ್ತಿದ್ದೆವು. ನಾವು ಎಲ್ಲಾ ಇದ್ದಾಗ ಒಳ್ಳೆಯ ರೀತಿ ಇದ್ದೆವು. ಡಿಕೆ ಶಿವಕುಮಾರ್ (DK Shivakumar) ಇರಬಹುದು, ಲಕ್ಷ್ಮಿ ಹೆಬ್ಬಾಳ್ಕರ್ ಇರಬಹುದು. ನಾವೆಲ್ಲರೂ ಒಂದಾಗಿ ಕೆಲಸ ಮಾಡಿದ್ದೇವೆ, ಇಲ್ಲ ಎನ್ನಲ್ಲ. ಅವಾಗ ಒಳ್ಳೆಯ ರೀತಿ ಇದ್ದು ಪಕ್ಷ ಕಟ್ಟಿ ಕಾಂಗ್ರೆಸ್ (Congress) ಕಟ್ಟಡ ಮಾಡಿದ್ದೇವೆ. ನಾವು ಆಗ ಒಳ್ಳೆಯ ರೀತಿ ಪಕ್ಷ ಕಟ್ಟಿದ್ದೆವು ಎಂದರು.
2018ರಲ್ಲಿ ಬೆಳಗಾವಿಯಲ್ಲಿ 8 ಸೀಟ್ ತಂದಿದ್ದೆವು. ಇನ್ನೂ 3 ಬರುತ್ತಿದ್ದವು. 2018ರಲ್ಲಿ ಕಾಂಗ್ರೆಸ್ ಪಕ್ಷದ ನಿರ್ಣಯದಿಂದ 3 ಸೀಟ್ ಕಳೆದುಕೊಂಡೆವು. ಸವದತ್ತಿ, ಕುಡಚಿ, ರಾಯಬಾಗದಲ್ಲಿ ಗೆಲ್ಲುತ್ತಿತ್ತು. ಹೋರಾಟ ಅಲ್ಲ, ನಮ್ಮ ಪಕ್ಷದ ಕೆಲಸ ಅದು. ಪಾಪ ಆ ಹೆಣ್ಣು ಮಗಳ ವಿರುದ್ಧ ಏನು ಹೋರಾಟ ಎಂದು ರಮೇಶ್ ಜಾರಕಿಹೊಳಿ ಹೇಳಿದರು. ಇದನ್ನೂ ಓದಿ: ಪಂಚರತ್ನ ಪ್ರಚಾರದ ವೇಳೆ ಜೆಡಿಎಸ್ ವಾಹನದ ಮೇಲೆ ಕಲ್ಲುತೂರಾಟ – ಚಾಲಕನಿಗೆ ಗಾಯ