ತೆಲುಗಿನ ಹೆಸರಾಂತ ನಟ ವಿಶ್ವಕ್ ಸೇನ್ (Vishwak Sen) ತಮಗಾದ ಅನ್ಯಾಯ ಮತ್ತು ನೋವುಗಳ ಬಗ್ಗೆ ಮಾತನಾಡಿದ್ದಾರೆ. ಅದರಲ್ಲೂ ತಮ್ಮ ಗಾಮಿ (Gami) ಚಿತ್ರಕ್ಕೆ ಅಡೆತಡೆ ಒಡ್ಡಿದವರ ಬಗ್ಗೆ ಆಕ್ರೋಶವನ್ನೂ ಅವರು ಹೊರ ಹಾಕಿದ್ದಾರೆ. ಈ ರೀತಿ ಮಾಡುವುದರ ಉದ್ದೇಶ ಏನು ಎನ್ನುವುದನ್ನು ಅವರು ಹೇಳಿದ್ದಾರೆ.
ಇತ್ತೀಚೆಗಷ್ಟೇ ವಿಶ್ವಕ್ ಸೇನ್ ನಟನೆಯ ಗಾಮಿ ಸಿನಿಮಾ ರಿಲೀಸ್ ಆಗಿತ್ತು. ಮೊದ ಮೊದಲ ಅತ್ಯುತ್ತಮ ರೆಸ್ಪಾನ್ಸ್ ಪಡೆದುಕೊಂಡಿತ್ತು. ಬುಕ್ ಮೈ ಶೋನಲ್ಲಿ ದಿ ಬೆಸ್ಟ್ ರೇಟಿಂಗ್ ಕೂಡ ಗಳಿಸಿಕೊಂಡಿತ್ತು. ಈ ಸಿನಿಮಾ ಭರ್ಜರಿ ಓಪನಿಂಗ್ ಪಡೆದುಕೊಂಡಿದ್ದನ್ನು ಸಹಿಸೋಕೆ ಆಗದೇ ನಿರಂತರ ಚಿತ್ರಕ್ಕೆ ತೊಂದರೆ ಕೊಟ್ಟರು ಎಂದು ಹೇಳಿಕೊಂಡಿದ್ದಾರೆ ವಿಶ್ವಕ್.
ಗಾಮಿ ಚಿತ್ರಕ್ಕೆ ಸಾಕಷ್ಟು ತೊಂದರೆ ಮಾಡಲಾಯಿತು. ಇದರ ಹಿಂದೆ ಯಾರಿದ್ದಾರೆ ಎಂದು ಗೊತ್ತಿಲ್ಲ. ಆದರೆ, ನಾನು ಚಿತ್ರೋದ್ಯಮದಲ್ಲಿ ಬೆಳೆಯಬಾರದು ಎನ್ನುವ ಉದ್ದೇಶವಂತೂ ಇದರ ಹಿಂದಿದೆ. ಹಾಗಾಗಿ ಚಿತ್ರವನ್ನು ಸೋಲಿಸಲು ಅವರು ಏನೆಲ್ಲ ಕುತಂತ್ರಗಳನ್ನು ಮಾಡಿದ್ದಾರೆ ಎಂದು ಅವರು ಅಳಲು ಹಂಚಿಕೊಂಡಿದ್ದಾರೆ.