ಶಿವಮೊಗ್ಗ: ಗುತ್ತಿಗೆದಾರ ಸಂತೋಷ್ ಕುಮಾರ್ ವಿನಾಃ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಗೊತ್ತಾಯ್ತು. ಈ ಬಗ್ಗೆ ಸ್ವತಃ ಮುಖ್ಯಮಂತ್ರಿ ಬಸವರಾಜ್ ಬೊಮ್ನಾಯಿ ಅವರೇ ನನಗೆ ತಿಳಿಸಿದ್ರು. ಆತ್ಮಹತ್ಯೆ ವಿಷಯ ಕೇಳಿ ನನಗೆ ಆಶ್ಚರ್ಯ ಆಗಿತ್ತು ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದರು.
Advertisement
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಟ್ಸಾಪ್‍ನಲ್ಲಿ ಟೈಪ್ ಮಾಡಿರುವ ಡೆತ್ ನೋಟ್ ಹರಿದಾಡ್ತಿದೆ ಅಂದ್ರು. ವರ್ಕ್ ಆರ್ಡರ್ ಕೊಡದೇ ನಾನು ಕೆಲಸ ಮಾಡಿ ಬಿಟ್ಟಿದ್ದೀನಿ ಎಂಬ ಅಂಶ ಗೊತ್ತಾಯ್ತು. ಮುಖ್ಯಮಂತ್ರಿ ಅವರಿಗೆ ತಕ್ಷಣ ನಾನು ರಾಜೀನಾಮೆ ಕೊಡ್ತೀನಿ ಅಂತಾ ಹೇಳಿದೆ. ನನಗೂ ಸಂತೋಷ್ ಎಂಬಾತನಿಗೂ ಸಂಬಂಧ ಇಲ್ಲ ಅಂತಾ ನಾನು ಯಾರು ಯಾರಿಗೆ ಹೇಳಬೇಕು ಎಲ್ಲರಿಗೂ ಹೇಳಿದ್ದೀನಿ. ಆತ್ಮಹತ್ಯೆ ಏಕೆ ಮಾಡಿಕೊಂಡ ಎಂಬುದು ತನಿಖಾ ವರದಿಯಲ್ಲಿದೆ. ಈ ಬಗ್ಗೆ ಹೆಚ್ಚಿನ ವಿವರ ನನಗೆ ಗೊತ್ತಿಲ್ಲ ಎಂದರು.
Advertisement
Advertisement
ಆತ್ಮಹತ್ಯೆ ಮಾಡಿಕೊಂಡಿದ್ದು ಹೌದು. ನನ್ನ ಹೆಸರು ಪ್ರಸ್ತಾಪ ಆಗಿದ್ದಕ್ಕೆ ನಾನು ರಾಜೀನಾಮೆ ಕೊಡಬೇಕಾಯ್ತು. ತನಿಖೆ ನಂತರ ಕ್ಲೀನ್ ಚಿಟ್ ಸಿಕ್ಕಿ ನಾನು ಮುಕ್ತವಾಗಿ ಹೊರಗೆ ಬಂದಿದ್ದೇನೆ. ಈಗ ಅವರು ಕೋರ್ಟ್ ಗೆ ಹೋಗುವ ಅಧಿಕಾರ ಇದೆ. ಕೋರ್ಟ್ ಗೆ ಹೋಗಿದ್ದಾರೆ. ಎಷ್ಟೇ ವರ್ಷ ನಡೆದರೂ ಅದರಲ್ಲಿಯೂ ನನಗೆ ಕ್ಲೀನ್ ಚಿಟ್ ಸಿಗುತ್ತದೆ ಎಂಬ ನೂರಕ್ಕೆ ನೂರು ವಿಶ್ವಾಸ ಇದೆ ಎಂದರು. ಇದನ್ನೂ ಓದಿ: ನಿವೃತ್ತಿ ಹೊಂದಿರುವ, ನಿವೃತ್ತಿ ಹೊಂದಲಿರುವ ವ್ಯಕ್ತಿಗೆ ಭಾರತದಲ್ಲಿ ಯಾವುದೇ ಮೌಲ್ಯವಿಲ್ಲ: ಸಿಜೆಐ ರಮಣ
Advertisement
ಕ್ಲೀನ್ ಚಿಟ್ ಸಿಗುವ ಮೊದಲು ಬೇರೆ ಆಪಾದನೆ ಮಾಡ್ತಿದ್ದರು. ಈಗ ಕ್ಲೀನ್ ಚಿಟ್ ಸಿಕ್ಕಿದ ಮೇಲೆ ಬೇರೆ ಆಪಾದನೆ ಮಾಡ್ತಿದ್ದಾರೆ. ಅವರು ಏನೇ ಆಪಾದನೆ ಮಾಡಿದ್ರೂ ಕೋರ್ಟ್ ಪರಿಶೀಲನೆ ಮಾಡುತ್ತದೆ. ಅಲ್ಲಿಯೂ ಕ್ಲೀನ್ ಚಿಟ್ ಸಿಗುವ ವಿಶ್ವಾಸ ಇದೆ. ಕೋರ್ಟ್ ನ ಅಧಿಕಾರಿಗಳಿಗೆ ಪ್ರಾರ್ಥನೆ ಮಾಡ್ತೇನೆ. ಸುಮ್ಮನೆ ಎಳೆದುಕೊಂಡು ಹೋದ್ರೆ ನನಗೂ ಸಮಾಧಾನ ಇರಲ್ಲ. ಅವರಿಗೂ ಸಮಾಧಾನ ಇರಲ್ಲ. ಹೀಗಾಗಿ ಕೋರ್ಟ್ ಬೇಗ ಜಡ್ಜ್ ಮೆಂಟ್ ಕೊಡಬೇಕು ಅಂತಾ ಪ್ರಾರ್ಥನೆ ಮಾಡ್ತೇನೆ ಎಂದು ತಿಳಿಸಿದರು.
ವೀರ ಸಾವರ್ಕರ್ ಬಗ್ಗೆ ಚರ್ಚೆ ಮಾಡೋದೇ ರಾಷ್ಟ್ರ ದ್ರೋಹ. ಅಂಡಮಾನ್ ಜೈಲಿನ ಸೆಲ್ ಅನ್ನು ನೋಡಿಕೊಂಡು ಬರಲಿ ಅವರಿಗೆ ಗೊತ್ತಾಗುತ್ತದೆ. ವೋಟಿಗೋಸ್ಕರ ಸಾವರ್ಕರ್ ಬಗ್ಗೆ ಆಪಾದನೆ ಮಾಡ್ತಿದ್ದಾರೆ. ಕಾಂಗ್ರೆಸ್ ನವರಿಗೆ ಹೇಳ್ತೀನಿ ಸಾವರ್ಕರ್ ಬಗ್ಗೆ ಟೀಕೆ ಮಾಡಿದರೆ ಅದಕ್ಕಿಂತ ಘೋರ ಅಪರಾಧ ಇಲ್ಲ ಎಂದು ಈಶ್ವರಪ್ಪ ವಾಗ್ದಾಳಿ ನಡೆಸಿದರು.