ನವದೆಹಲಿ: ದೆಹಲಿಯ (Delhi) ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ (Manish Sisodia) ಅವರು ಸೋಮವಾರ ಕೇಂದ್ರೀಯ ತನಿಖಾ ದಳದ (CBI) 9 ಗಂಟೆಗಳ ವಿಚಾರಣೆಯ ಬಳಿಕ ಸ್ಫೋಟಕ ಹೇಳಿಕೆಯನ್ನು ನೀಡಿದ್ದಾರೆ. ದೆಹಲಿ ಸರ್ಕಾರದ ವಿವಾದಿತ ಮದ್ಯ ನೀತಿಯ (Liquor Policy Case) ಬಗ್ಗೆ ಪ್ರಶ್ನಿಸಬೇಕಿದ್ದ ಅಧಿಕಾರಿಗಳು ನನಗೆ ಆಡಳಿತಾರೂಢ ಆಮ್ ಆದ್ಮಿ ಪಕ್ಷವನ್ನು (AAP) ತೊರೆಯುವಂತೆ ಒತ್ತಡ ಹೇರಿದ್ದಾರೆ ಎಂದು ಆರೋಪಿಸಿದ್ದಾರೆ.
Advertisement
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿಯಾಗಿ ಮೇ ತಿಂಗಳಿನಿಂದ ಜೈಲಿನಲ್ಲಿರುವ ದೆಹಲಿ ಸಚಿವ ಸತ್ಯೇಂದ್ರ ಜೈನ್ ಅವರ ಪ್ರಕರಣದಂತೆಯೇ ನಿಮ್ಮ ಪ್ರಕರಣವೂ ಆಗಬಹುದು ಎಂದು ಅಧಿಕಾರಿಗಳು ಬೆದರಿಕೆ ಹಾಕಿದ್ದಾರೆ ಎಂದು ಸಿಸೋಡಿಯಾ ಮಾಧ್ಯಮಗಳೊಂದಿಗೆ ತಿಳಿಸಿದ್ದಾರೆ. ಇದನ್ನೂ ಓದಿ: ಜಮ್ಮು, ಕಾಶ್ಮೀರದಲ್ಲಿ ಗ್ರೆನೇಡ್ ದಾಳಿ- ಇಬ್ಬರು ಸ್ಥಳೀಯೇತರ ಕಾರ್ಮಿಕರು ಬಲಿ
Advertisement
ಆದರೆ ಸಿಬಿಐ ಈ ಆರೋಪಗಳನ್ನು ಬಲವಾಗಿ ತಳ್ಳಿಹಾಕಿದೆ. ಎಫ್‌ಐಆರ್‌ನಲ್ಲಿರುವ ಅವರ ವಿರುದ್ಧದ ಆರೋಪಗಳ ಪ್ರಕಾರವೇ ಸಿಸೋಡಿಯಾ ಅವರಿಗೆ ಕಾನೂನು ರೀತಿಯಲ್ಲಿ ವಿಚಾರಣೆ ನಡೆಸಲಾಗಿದೆ. ಪ್ರಕರಣದ ತನಿಖೆ ಕಾನೂನಿನ ಪ್ರಕಾರವೇ ಮುಂದುವರಿಯುತ್ತದೆ ಎಂದು ಹೇಳಿದೆ.
Advertisement
Advertisement
ದೆಹಲಿ ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಭಾನುವಾರ ಮನೀಶ್ ಸಿಸೋಡಿಯಾಗೆ ಸೋಮವಾರ ವಿಚಾರಣೆ ಹಾಜರಾಗುವಂತೆ ಸಮನ್ಸ್ ನೀಡಿತ್ತು. ಅದರಂತೆ ನಿನ್ನೆ ಮಧ್ಯಾಹ್ನ ಪ್ರಾರಂಭವಾದ ಸಿಬಿಐ ವಿಚಾರಣೆ 9 ಗಂಟೆಗಳವರೆಗೆ ನಡೆದಿದೆ. ಇದನ್ನೂ ಓದಿ: ಬೆಂಗಳೂರು ಗುಂಡಿಗೆ ಮಹಿಳೆ ಬಲಿ – KSRTC ಡ್ರೈವರ್ ಅರೆಸ್ಟ್