ಜಾಮೀನು ಪಡೆದುಕೊಂಡು ಮೈಸೂರು (Mysore) ಹುಡುಗ ಆದಿಲ್ (Adil) ಜೈಲಿನಿಂದ ಹೊರ ಬರುತ್ತಿದ್ದಂತೆಯೇ ಪತ್ನಿ, ನಟಿ ರಾಖಿ ಸಾವಂತ್ (Rakhi Sawant) ಮೇಲೆ ಆರೋಪಗಳ ಮೇಲೆ ಆರೋಪ ಮಾಡುತ್ತಿದ್ದಾರೆ. ನಿನ್ನೆಯಷ್ಟೇ ಪತ್ರಿಕಾಗೋಷ್ಠಿ ಮಾಡಿದ್ದ ಆದಿಲ್, ತಮಗೆ ರಾಖಿಯಿಂದ ಆದ ಮೋಸದ ಎಲ್ಲ ವಿವರವನ್ನೂ ಬಿಚ್ಚಿಟ್ಟಿದ್ದರು. ಇದೀಗ ರಾಖಿ ಪತ್ರಿಕಾಗೋಷ್ಠಿ ನಡೆಸಿ, ಆದಿಲ್ ಮೇಲೆ ಗುರುತರ ಆರೋಪಗಳನ್ನು ಮಾಡಿದ್ದಾರೆ.
ನಿನ್ನೆ ನಡೆದ ಮಾಧ್ಯಮ ಗೋಷ್ಠಿಯಲ್ಲಿ ‘ರಾಖಿ ಗರ್ಭಚೀಲವನ್ನು ತೆಗೆಸಿಕೊಂಡಿದ್ದಾಳೆ. ಆಕೆಗೆ ಮಗು ಪಡೆಯುವ ಸಾಮರ್ಥ್ಯವಿಲ್ಲ. ಹಾಗಾಗಿ ಆಕೆಗೆ ಮಗುವಾಗುವುದಿಲ್ಲ’ ಎಂದು ಹೇಳಿದ್ದರು ಆದಿಲ್. ನಿನ್ನೆಯಷ್ಟೇ ವೈದ್ಯರೊಂದಿಗೆ ವಿಡಿಯೋ ಲೈವ್ ಮಾಡಿದ್ದ ರಾಖಿ, ತನಗೆ ಮಗು ಮಾಡಿಕೊಳ್ಳುವ ಸಾಮರ್ಥ್ಯವಿದೆ ಎಂದು ಹೇಳಿದ್ದರು. ಗರ್ಭಕೋಶದಲ್ಲಿ ಸಮಸ್ಯೆಯಿದ್ದ ಕಾರಣಕ್ಕಾಗಿ ಶಸ್ತ್ರ ಚಿಕಿತ್ಸೆ ನಡೆಸಿದ್ದರ ಬಗ್ಗೆಯೂ ಹೇಳಿದ್ದರು. ಇದನ್ನೂ ಓದಿ:ಡಾಲಿ ಹುಟ್ಟುಹಬ್ಬಕ್ಕೆ ಖಡಕ್ ರೊಟ್ಟಿ, ಪುಂಡೆಪಲ್ಯೆ ಮೆನು
ಇವತ್ತು ಆದಿಲ್ ಬಗ್ಗೆ ಮತ್ತೆ ಮಾತನಾಡಿದ್ದಾರೆ. ಮದುವೆಗೂ ಮುಂಚೆ ಆದಿಲ್ ತನ್ನನ್ನು ಗರ್ಭಿಣಿ (Pregnant) ಮಾಡಿದ್ದ. ಮದುವೆಗೂ ಮುಂಚೆ ನಾನು ಪ್ರಗ್ನೆಂಟ್ ಆಗಿ ಪಡಬಾರದ ಕಷ್ಟ ಪಟ್ಟಿದ್ದೇನೆ ಎಂದು ಆರೋಪ ಮಾಡಿದ್ದಾರೆ. ನಾನು ಹಿಂದೂವಾಗಿ ಮುಸ್ಲಿಂ ಧರ್ಮಾಚರಣೆಗಳನ್ನು ಮಾಡುತ್ತಿದ್ದೇನೆ. ಆದಿಲ್ ಒಬ್ಬ ಮುಸ್ಲಿಂ ಆಗಿ ಯಾವುದೇ ಆಚರಣೆಯನ್ನೂ ಮಾಡುವುದಿಲ್ಲ. ಮುಸ್ಲಿಂ ಜನಾಂಗಕ್ಕೆ ಅವನು ಕಳಂಕ ಎಂದಿದ್ದಾರೆ.
ಆದಿಲ್ ಮತ್ತು ರಾಖಿ ಒಬ್ಬರ ಮೇಲೆ ಒಬ್ಬರು ಆರೋಪ, ಪ್ರತ್ಯಾರೋಪ ಮಾಡುತ್ತಿದ್ದಾರೆ. ಗಂಭೀರವಾದ ವಿಷಯಗಳನ್ನೇ ಹೇಳಿಕೊಳ್ಳುತ್ತಿದ್ದಾರೆ. ಆದರೆ, ಇಬ್ಬರೂ ಯಾವುದೇ ರೀತಿಯಲ್ಲಿ ಅದಕ್ಕೆ ದಾಖಲೆಗಳನ್ನು ಬಿಡುಗಡೆ ಮಾಡುತ್ತಿಲ್ಲ. ಯಾರದು, ಸರಿ ಹಾಗೂ ಯಾರದು ತಪ್ಪು ಎನ್ನುವುದನ್ನು ಕೋರ್ಟ್ ನಲ್ಲೇ ನಿರ್ಣಯ ಮಾಡಿಕೊಳ್ಳಬೇಕಿದೆ.
Web Stories