ನವದೆಹಲಿ: ರಷ್ಯಾ (Russia) ಅಧ್ಯಕ್ಷ ಪುಟಿನ್ ಜೊತೆ ಸಭೆ ನಡೆಸಲು ನನಗೆ ಅವಕಾಶ ನೀಡಿಲ್ಲ ಎಂದು ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಂಸತ್ ಭವನದ ಹೊರಗಡೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಾಮಾನ್ಯವಾಗಿ, ಭಾರತಕ್ಕೆ ಯಾರೇ ಭೇಟಿ ನೀಡಿದರೂ ಅವರ ಜೊತೆ ಪ್ರತಿಪಕ್ಷದ ನಾಯಕರು ಸಭೆ ನಡೆಸುವುದು ಶಿಷ್ಟಾಚಾರ. ಇದು ವಾಜಪೇಯಿ, ಮನಮೋಹನ್ ಸಿಂಗ್ ಸರ್ಕಾರದಲ್ಲಿ ನಡೆಯುತ್ತಿತ್ತು. ಆದರೆ ಈಗ ಈ ಶಿಷ್ಟಾಚಾರ ಪಾಲನೆಯಾಗುತ್ತಿಲ್ಲ ಎಂದು ದೂರಿದರು. ಇದನ್ನೂ ಓದಿ: ಟ್ರಂಪ್ ತಂಗಿದ್ದ ಹೋಟೆಲಿನಲ್ಲಿ ಪುಟಿನ್ ವಾಸ್ತವ್ಯ – ಈ ಸೂಟ್ ವಿಶೇಷತೆ ಏನು? 1 ರಾತ್ರಿಗೆ ದರ ಎಷ್ಟು?
VIDEO | Delhi: On Russian President Putin’s visit, Lok Sabha LoP and Congress MP Rahul Gandhi (@RahulGandhi) says, “Generally, the tradition has been that whoever visits India, the LoP used to have a meeting. It used to happen in the Vajpayee government, the Manmohan Singh… pic.twitter.com/7dDoWCB3za
— Press Trust of India (@PTI_News) December 4, 2025
ನಾನು ವಿದೇಶಕ್ಕೆ ಹೋದಾಗ ವಿಪಕ್ಷ ನಾಯಕನನ್ನು ಭೇಟಿ ಮಾಡಬಾರದು ಎಂದು ಅವರು ಸೂಚಿಸುತ್ತಾರೆ. ನಾವು ಭಾರತವನ್ನು ಪ್ರತಿನಿಧಿಸುತ್ತೇವೆ. ಆದರೆ ಈ ಸರ್ಕಾರ ನಾವು ವಿದೇಶಿ ಗಣ್ಯರನ್ನು ಭೇಟಿ ಮಾಡಲು ಬಯಸುವುದಿಲ್ಲ. ಅಭದ್ರತೆಯ ಕಾರಣದಿಂದಾಗಿ ಪ್ರಧಾನಿ ಮೋದಿ (Narendra Modi) ಮತ್ತು ವಿದೇಶಾಂಗ ಸಚಿವಾಲಯ ಈ ಶಿಷ್ಟಾಚಾರವನ್ನು ಅನುಸರಿಸುತ್ತಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಇಂದು ಪುಟಿನ್ ಭಾರತಕ್ಕೆ – ಐದು ಸ್ತರದ ರಕ್ಷಣೆ ಹೇಗಿರಲಿದೆ?
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಎರಡು ದಿನಗಳ ಭಾರತ ಪ್ರವಾಸ ಕೈಗೊಂಡಿದ್ದು ಇಂದು ಸಂಜೆ ದೆಹಲಿಗೆ ಬಂದಿಳಿಯಲಿದ್ದಾರೆ.

