Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಕಾಂಗ್ರೆಸ್‌ ಜೊತೆ ಬಲವಂತದ ಮದುವೆಯಲ್ಲಿದ್ದೆ, ನಮ್ಮನ್ನು ಬಿಟ್ಟು ಹೋಗಿದ್ದಕ್ಕೆ ವಿಚ್ಛೇದನ ನೀಡಿದ್ದೇನೆ: ಹೆಚ್‌ಡಿಡಿ ತಿರುಗೇಟು
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಕಾಂಗ್ರೆಸ್‌ ಜೊತೆ ಬಲವಂತದ ಮದುವೆಯಲ್ಲಿದ್ದೆ, ನಮ್ಮನ್ನು ಬಿಟ್ಟು ಹೋಗಿದ್ದಕ್ಕೆ ವಿಚ್ಛೇದನ ನೀಡಿದ್ದೇನೆ: ಹೆಚ್‌ಡಿಡಿ ತಿರುಗೇಟು

Bengaluru City

ಕಾಂಗ್ರೆಸ್‌ ಜೊತೆ ಬಲವಂತದ ಮದುವೆಯಲ್ಲಿದ್ದೆ, ನಮ್ಮನ್ನು ಬಿಟ್ಟು ಹೋಗಿದ್ದಕ್ಕೆ ವಿಚ್ಛೇದನ ನೀಡಿದ್ದೇನೆ: ಹೆಚ್‌ಡಿಡಿ ತಿರುಗೇಟು

Public TV
Last updated: March 18, 2026 9:33 pm
Public TV
Share
2 Min Read
HD Devegowda Mallikarjun Kharge
SHARE

ಬೆಂಗಳೂರು: ಕಾಂಗ್ರೆಸ್‌ (Congress) ಜೊತೆ ಬಲವಂತದ ಮದುವೆಯಲ್ಲಿದ್ದೆ, ನಮ್ಮನ್ನು ಬಿಟ್ಟು ಹೋಗಿದ್ದಕ್ಕೆ ವಿಚ್ಛೇದನ ನೀಡಿದ್ದೇನೆ ಎಂದು ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರು (HD Devegowda) ಮಲ್ಲಿಕಾರ್ಜುನ ಖರ್ಗೆ ಅವರಿಗೆ ತಿರುಗೇಟು ನೀಡಿದ್ದಾರೆ.

ದೇವೇಗೌಡರು ಕಾಂಗ್ರೆಸ್ ಜತೆ ಮೈತ್ರಿ ಮುರಿದುಕೊಂಡ ಬಗ್ಗೆ ರಾಜ್ಯಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ(Mallikarjun Kharge) ಹೇಳಿಕೆ ನೀಡಿದ್ದಕ್ಕೆ ಪತ್ರದ ಮೂಲಕ ಅವರ ದಾಟಿಯಲ್ಲೇ ಟಾಂಗ್‌ ಕೊಟ್ಟಿದ್ದಾರೆ.

ಪತ್ರದಲ್ಲಿ ಏನಿದೆ?
ನನ್ನ ಆತ್ಮೀಯ ಮತ್ತು ದೀರ್ಘಕಾಲದ ಸ್ನೇಹಿತರಾದ ಶ್ರೀ ಮಲ್ಲಿಕಾರ್ಜುನ ಖರ್ಗೆಯವರು ಇಂದು ಸಂಸತ್ತಿನಲ್ಲಿ ನನ್ನ ಬಗ್ಗೆ ಒಂದು ಲಘು ಮಾತುಗಳನ್ನಾಡಿದ್ದಾರೆ. ನಾನು ಮೊದಲು ಅವರೊಂದಿಗೆ (ಕಾಂಗ್ರೆಸ್) ʻಪ್ರೀತಿಯಲ್ಲಿದ್ದೆʼ, ಆದರೆ ಅಂತಿಮವಾಗಿ ಮೋದಿ ಜೀ (ಬಿಜೆಪಿ) ಅವರನ್ನು ʻಮದುವೆಯಾದೆʼ ಎಂದು ಅವರು ಹೇಳಿದ್ದಾರೆ.

ನಾನು ಯಾಕೆ ಹಾಗೆ ಮಾಡಿದೆ ಎಂಬ ಕಾರಣ ತಮಗೆ ತಿಳಿಯುತ್ತಿಲ್ಲ ಎಂದೂ ಅವರು ಹೇಳಿದ್ದಾರೆ. ನಾನು ನಾಳೆಯ ಯುಗಾದಿ ಆಚರಣೆಗಾಗಿ ಬೆಂಗಳೂರಿಗೆ ಬರಬೇಕಿದ್ದರಿಂದ ಖರ್ಗೆಯವರು ಮಾತನಾಡಿದ ಸಮಯದಲ್ಲಿ ನಾನು ಸದನದಲ್ಲಿ ಇರಲಿಲ್ಲ. ​ನನ್ನ ಸ್ನೇಹಿತರಿಗೆ ಅದೇ ಮದುವೆಯ ಭಾಷೆಯಲ್ಲೇ ಉತ್ತರಿಸುವುದಾದರೆ – ನಾನು ಕಾಂಗ್ರೆಸ್ ಜೊತೆ ಬಲವಂತದ ಮದುವೆಯಲ್ಲಿದ್ದೆ, ಆದರೆ ಅದು ಒಂದು ಹಿಂಸಾತ್ಮಕ ಸಂಬಂಧವಾಗಿದ್ದರಿಂದ ನಾನು ಅವರಿಗೆ ʻವಿಚ್ಛೇದನʼ ನೀಡಬೇಕಾಯಿತು ಎಂದು ಹೇಳಲು ಬಯಸುತ್ತೇನೆ. ಇದನ್ನೂ ಓದಿ: ಕನ್ನಡಿಗ ಪಡೆದಿದ್ದ ರ‍್ಯಾಂಕ್‌ ತನ್ನದೆಂದು ಹೇಳಿ ಸನ್ಮಾನ – ಬಿಹಾರದ ಯುವಕ ಅರೆಸ್ಟ್

My dear friend Shri. @kharge made a humorous comment in parliament today on my “love” for @INCIndia and “marriage” with @BJP4India. I was not there in the House when he spoke. Here’s my response both lighthearted and factual on why I was forced to “divorce” the Congress @PMOIndia pic.twitter.com/qPK95FUxip

— H D Devegowda (@H_D_Devegowda) March 18, 2026

​2018ರಲ್ಲಿ ಕಾಂಗ್ರೆಸ್ ಗುಲಾಂ ನಬಿ ಆಜಾದ್ ಅವರನ್ನು ಕಳುಹಿಸಿ ಕುಮಾರಸ್ವಾಮಿಯವರಿಗೆ ಮುಖ್ಯಮಂತ್ರಿ ಸ್ಥಾನವನ್ನು ಆಫರ್ ಮಾಡಿದ್ದು ಖರ್ಗೆಯವರಿಗೆ ನೆನಪಿರಬಹುದು. ನಾನು ಇದಕ್ಕೆ ಒಪ್ಪಿರಲಿಲ್ಲ. ಖರ್ಗೆಯವರನ್ನೇ ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂದು ನಾನು ಎಲ್ಲರ ಸಮ್ಮುಖದಲ್ಲೇ ಹೇಳಿದ್ದೆ.

ಸಿದ್ದರಾಮಯ್ಯನವರು ಕೂಡ ಅಲ್ಲಿಯೇ ಇದ್ದರು. ಆದರೆ ಆಜಾದ್ ಅವರು ಕುಮಾರಸ್ವಾಮಿಯವರ ನಾಯಕತ್ವಕ್ಕೇ ಪಟ್ಟು ಹಿಡಿದರು. ಆದರೆ ಇಷ್ಟೆಲ್ಲಾ ಹಾಡು, ಕುಣಿತ ಮತ್ತು ಮದುವೆಯ ನಂತರ 2019 ರಲ್ಲಿ ಅವರು ಏನು ಮಾಡಿದರು? ಅವರು ನಮ್ಮನ್ನು ಕೈಬಿಟ್ಟರು.

ಎಷ್ಟು ಜನ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಹೋದರು ಮತ್ತು ಅವರನ್ನು ಅಲ್ಲಿಗೆ ಕಳುಹಿಸಿದ್ದು ಯಾರು ಎಂಬುದು ಈಗ ಜಗಜ್ಜಾಹೀರಾಗಿದೆ. ಅಂದು ಪಕ್ಷಾಂತರಕ್ಕೆ ಪ್ರಚೋದನೆ ನೀಡಿದ ವ್ಯಕ್ತಿಯ ವಿರುದ್ಧ ಕಾಂಗ್ರೆಸ್ ಕ್ರಮ ಕೈಗೊಂಡಿದ್ದರೆ ಇಂದು ನನ್ನ ಸ್ನೇಹಿತ ಖರ್ಗೆಯವರು ಎಐಸಿಸಿ ಅಧ್ಯಕ್ಷರಾಗಿ ಇನ್ನೂ ಉತ್ತಮ ಸ್ಥಾನದಲ್ಲಿರುತ್ತಿದ್ದರು. ​ಹಾಗಾಗಿ ಸತ್ಯವನ್ನು ಸ್ಪಷ್ಟಪಡಿಸಲು ಬಯಸುತ್ತೇನೆ:

ನಾನು ಕಾಂಗ್ರೆಸ್ ಮೈತ್ರಿಯನ್ನು ಬಿಟ್ಟು ಬರಲಿಲ್ಲ. ಅವರೇ ದೂರ ಹೋದರು. ಅವರು ನನಗೆ ಅವರಿಗೆ ʻವಿಚ್ಛೇದನʼನೀಡಿ ಹೆಚ್ಚು ಸ್ಥಿರವಾದ ಮೈತ್ರಿಯನ್ನು ಹುಡುಕಿಕೊಳ್ಳುವುದನ್ನು ಬಿಟ್ಟು ಬೇರೆ ದಾರಿಯೇ ಇರಲಿಲ್ಲ.

TAGGED:congressHD Devegowdajdsmallikarjun khargepoliticsಜೆಡಿಎಸ್-ಕಾಂಗ್ರೆಸ್ಮಲ್ಲಿಕಾರ್ಜುನ ಖರ್ಗೆರಾಜಕೀಯಹೆಚ್‍ಡಿ ದೇವೇಗೌಡ
Share This Article
Facebook Whatsapp Whatsapp Telegram

Cinema news

trisha krishnan
ಶ್ರೀಮಂತ ಉದ್ಯಮಿಯನ್ನ ಮದ್ವೆಯಾಗಿ, 4 ಮಕ್ಕಳನ್ನು ಬೆಳೆಸುತ್ತಿದ್ದೇನೆ – ಸಿನಿಮಾ ನಿವೃತ್ತಿ ವದಂತಿಗೆ ನಟಿ ತ್ರಿಶಾ ಕೌಂಟರ್
Cinema Latest South cinema Top Stories
Rashmika Mandanna
ಕೊಡಗಿನಲ್ಲಿ ರಶ್ಮಿಕಾ – ವಿಜಯ್‌ ಡಿನ್ನರ್‌ ಪಾರ್ಟಿ; ಕೊಡವ ಶೈಲಿಯ ಭರ್ಜರಿ ಆತಿಥ್ಯ!
Cinema Kodagu Latest Main Post Sandalwood South cinema
Rashmika Mandanna Father
ರಶ್ಮಿಕಾಗೆ ಮದುವೆಯ ಉಡುಗೊರೆಯಾಗಿ ತಮ್ಮ ಮನೆಯನ್ನೇ ನೀಡಿದ ತಂದೆ ಮದನ್‌ ಮಂದಣ್ಣ
Cinema Districts Karnataka Kodagu Latest South cinema Top Stories
DARSHAN RENUKASWAMY
ರೇಣುಕಾಸ್ವಾಮಿ ಕೊಲೆ ಕೇಸ್‌ ಆಧರಿತ ಸಿನಿಮಾ ‘ಬಾಸ್’‌ ರಿಲೀಸ್‌ಗೆ ಕೋರ್ಟ್‌ ತಡೆಯಾಜ್ಞೆ
Bengaluru City Cinema Court Latest Sandalwood Top Stories

You Might Also Like

Bab al Mandab Strait India
Latest

ಹಾರ್ಮುಜ್ ಬಳಿಕ ಬಾಬ್ ಅಲ್-ಮಂಡೇಬ್ ಜಲಸಂಧಿ ಬಂದ್‌ ಭೀತಿ – ಭಾರತಕ್ಕೇನು ಪರಿಣಾಮ?

Public TV
By Public TV
2 minutes ago
WAR 1
Latest

ಇಸ್ರೇಲ್‌, ಇರಾನ್‌ ಯುದ್ಧ | ಯಾರಿಗೆ ಲಾಭ, ಯಾರಿಗೆ ನಷ್ಟ? – ವಿಶ್ವಬ್ಯಾಂಕ್‌ ಎಚ್ಚರಿಕೆ ಎನು?

Public TV
By Public TV
2 minutes ago
Donald Trump 2
Latest

ಅಮೆರಿಕ-ಇರಾನ್‌ ಮಧ್ಯೆ 2 ವಾರಗಳ ಕದನ ವಿರಾಮ ಘೋಷಣೆ

Public TV
By Public TV
14 minutes ago
IPL match Rain
Cricket

IPL 2026 | ರಾಜಸ್ಥಾನ ರಾಯಲ್ಸ್‌ Vs ಮುಂಬೈ ಇಂಡಿಯನ್ಸ್‌ ಪಂದ್ಯಕ್ಕೆ ಮಳೆ ಅಡ್ಡಿ

Public TV
By Public TV
37 minutes ago
Congress BJP
Bagalkot

ದಾವಣಗೆರೆ, ಬಾಗಲಕೋಟೆ ಉಪಚುನಾವಣೆಯ ಬಹಿರಂಗ ಪ್ರಚಾರ ಅಂತ್ಯ

Public TV
By Public TV
8 hours ago
ipl 2026 Vaibhav Sooryavanshi stuns Jasprit Bumrah with first ball six Mumbai Indiansace can only smile
Cricket

ಬುಮ್ರಾಗೆ 2 ಸಿಕ್ಸ್‌ – ಮತ್ತೆ 5 ಸಿಕ್ಸ್‌ ಸಿಡಿಸಿದ ಸೂರ್ಯವಂಶಿ

Public TV
By Public TV
8 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?