ನಾಳೆ ರಾಕಿಂಗ್ ಸ್ಟಾರ್ ಯಶ್ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಈ ಬಾರಿಯಾದ್ರೂ ಯಶ್ ವೈಯಕ್ತಿಕವಾಗಿ ನಮ್ಮನ್ನು ಭೇಟಿಯಾಗಬಹುದೇ ಎಂದು ಅವರ ಅಭಿಮಾನಿಗಳು ಕಾದು ಕುಳಿತಿದ್ದರು. ಇದೀಗ ಯಶ್ ಕೊನೆ ಘಳಿಗೆಯಲ್ಲಿ ತಮ್ಮ ನಿಲುವನ್ನ ಸೋಶಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ. ಅಭಿಮಾನಿಗಳಿಗೆ ನಾಳೆಯ ತಮ್ಮ ಕಾರ್ಯಕ್ರಮ ಏನು ಅನ್ನೋದ್ರ ಕುರಿತಾಗಿ ಸಂದೇಶ ರವಾನಿಸಿದ್ದಾರೆ.
ಯಶ್‌ರನ್ನು ವೈಯಕ್ತಿಕವಾಗಿ ಭೇಟಿಯಾಗಲು ಕಾದಿದ್ದ ಅಭಿಮಾನಿಗಳಿಗೆ ಈ ವರ್ಷವೂ ನಿರಾಸೆ ಉಂಟಾಗಿದೆ. ಇದೇ ಮಾತನ್ನ ಹೇಳಿರುವ ಯಶ್, ನನ್ನನ್ನು ನಂಬಿ, ನನಗೆ ಗೊತ್ತು ನೀವೆಲ್ಲ ಅನೇಕ ವರ್ಷಗಳಿಂದ ನನ್ನನ್ನ ಭೇಟಿಯಾಗೋಕೆ ಕಾಯ್ತಿದ್ದೀರಿ ಅಂತ. ಆದರೆ ಈ ಬಾರಿ ಕೂಡ ಎಷ್ಟೇ ಪ್ರಯತ್ನ ಪಟ್ರೂ ನಿಮಗೆ ಸಿಗೋದಕ್ಕೆ ಆಗುತ್ತಿಲ್ಲ. ಈ ವರ್ಷವಾದ್ರೂ ಟ್ರೈ ಮಾಡೋಣ ಅನ್ಕೊಂಡೆ. ಆದರೆ ಟಾಕ್ಸಿಕ್ ಚಿತ್ರವನ್ನು ಮಾರ್ಚ್ 19ಕ್ಕೆ ರಿಲೀಸ್ ಮಾಡ್ಬೇಕಿರುವ ಕಾರಣಕ್ಕೆ ಕೆಲಸದಲ್ಲಿ ಸಂಪೂರ್ಣ ಮಗ್ನನಾಗಿದ್ದೇನೆ ಎಂದಿದ್ದಾರೆ.
ಶೀಘ್ರದಲ್ಲೇ ಇನ್ನೂ ದೊಡ್ಡ ರೀತಿಯಲ್ಲಿ ಭೇಟಿಯಾಗುತ್ತೇನೆ, ಜೊತೆಗೆ ನೀವು ನನಗೆ ಕಳಿಸುವ ಪ್ರತಿ ಶುಭಾಶಯ ಹಾಗೂ ಪ್ರತಿ ಪ್ರೀತಿಯ ತುಣುಕನ್ನೂ ನಾನು ಸ್ವೀಕರಿಸುತ್ತೇನೆ ಎಂದು ಅಭಿಮಾನಿಗಳಿಗೆ ಯಶ್ ಸಂದೇಶ ರವಾನಿಸಿದ್ದಾರೆ.

