Cinema
ಚಿತ್ರದಲ್ಲಿ ಸಂಪೂರ್ಣ ಬೆತ್ತಲಾಗಿದ್ದೇಕೆ – ಸ್ಪಷ್ಟನೆ ಕೊಟ್ಟ ಅಮಲಾ ಪೌಲ್

ಚೆನ್ನೈ: ಬಹುಭಾಷಾ ನಟಿ ಅಮಲಾ ಪೌಲ್ ಅವರು ತಮಿಳಿನಲ್ಲಿ ನಟಿಸಿದ `ಅದಾಯಿ’ ಚಿತ್ರದ ಟೀಸರ್ ನಲ್ಲಿ ಸಂಪೂರ್ಣ ಬೆತ್ತಲಾಗಿ ಕಾಣಿಸಿಕೊಂಡಿದ್ದರು. ಆದರೆ ಈಗ ಅವರು ಚಿತ್ರಕ್ಕಾಗಿ ಬೆತ್ತಲಾಗಿದ್ದೇಕೆ ಎಂಬುದರ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ನಾನು ವಿಭಿನ್ನ ಪಾತ್ರದಲ್ಲಿ ನಟಿಸಿದ್ದೇನೆ. ನಶೆಯಲ್ಲಿ ನಾಪತ್ತೆಯಾಗುವ ಮಗಳ ಪಾತ್ರದಲ್ಲಿ ನಟಿಸಿದ್ದೇನೆ. ಈ ರೀತಿಯ ಪಾತ್ರ ಮಾಡುವುದಕ್ಕೂ ಒಂದು ಕಾರಣ ಇದೆ. ಈ ಚಿತ್ರದ ಮೊದಲು ನಾನು ಅತ್ಯಾಚಾರ ಸಂತ್ರಸ್ತೆ, ಹೋರಾಟ ಮಾಡುವ ಮಹಿಳೆ, ತಂಗಿ ಹಾಗೂ ತಾಯಿಯ ಪಾತ್ರದಲ್ಲಿ ನಟಿಸಿ ಬೋರ್ ಆಗಿತ್ತು. ಇದರಿಂದಾಗಿ ನನಗೆ ಬೋರ್ ಆಗಿ ಸಿನಿಮಾ ರಂಗವನ್ನು ಬಿಡಲು ಮುಂದಾಗಿದ್ದೆ. ಚಿತ್ರದಲ್ಲಿ ಇದು ವಿಶೇಷ ಪಾತ್ರ ಅನಿಸಿದ್ದಕ್ಕೆ ಅಭಿನಯಿಸಲು ಒಪ್ಪಿಕೊಂಡೆ ಎಂದು ಹೇಳಿದರು.
ಒಂದು ದಿನ ನನಗೆ ‘ಅದಾಯಿ’ ಚಿತ್ರದಲ್ಲಿ ಕೆಲಸ ಮಾಡುವ ಅವಕಾಶ ದೊರೆಯಿತು. ನಾನು ಮೊದಲು ಈ ಚಿತ್ರದ ಸ್ಕ್ರಿಪ್ಟ್ ಓದಿದೆ. ವಿಶೇಷ ಎಂದರೆ ಈ ಚಿತ್ರ ತೆಲುಗು, ತಮಿಳು ಹಾಗೂ ಹಿಂದಿಯಲ್ಲಿ ಬಿಡುಗಡೆ ಆಗುತ್ತಿದೆ. ಹಾಗಾಗಿ ಈ ಸಿನಿಮಾ ಮಾಡಲು ನಾನು ಒಪ್ಪಿಕೊಂಡೆ. ಬಳಿಕ ನಿರ್ದೇಶಕ ರತ್ನ ಕುಮಾರ್ ಚಿತ್ರದ ಕತೆ ಬಗ್ಗೆ ಹೇಳಿ ಈ ಚಿತ್ರದಲ್ಲಿ ನಗ್ನ ದೃಶ್ಯ ಇದೆ. ಈ ಸೀನ್‍ಗಾಗಿ ವಿಶೇಷ ಕಾಸ್ಟ್ಯೂಮ್ ಧರಿಸಬಹುದು ಎಂದು ಅವರು ಹೇಳಿದರು ಎಂದು ಅಮಲಾ ಹೇಳಿದ್ದಾರೆ.
ನಾನು ನಿರ್ದೇಶಕರಿಂದ ಯಾವುದೇ ವಿಶೇಷ ಕಾಸ್ಟ್ಯೂಮ್ ಪಡೆಯಲು ನಿರಾಕರಿಸಿದೆ. ಅಲ್ಲದೆ ಈ ಬೆತ್ತಲೆ ದೃಶ್ಯ ಚಿತ್ರೀಕರಿಸಲು ಒಪ್ಪಿಕೊಂಡೆ. ನಾನು ಒತ್ತಡದಲ್ಲಿ ಇದ್ದಾಗ ಈ ದೃಶ್ಯ ಮಾಡುತ್ತೇನೆ ಎಂದು ಒಪ್ಪಿಕೊಂಡೆ. ಅಲ್ಲದೆ ಸಿನಿಮಾ ಸೆಟ್‍ನಲ್ಲಿ ಏನಾಗಬಹುದು ಎಂದು ನೋಡಲು ಕಾತುರದಿಂದ ಕಾಯುತ್ತಿದ್ದೆ. ಬೆತ್ತಲೆ ದೃಶ್ಯ ಚಿತ್ರೀಕರಿಸುವಾಗ ಸಿನಿಮಾ ಸೆಟ್‍ನಲ್ಲಿ ಕೇವಲ 15 ಮಂದಿ ಇದ್ದರು. ಅಲ್ಲಿದ್ದ ಸಿಬ್ಬಂದಿ ಒಳ್ಳೆಯವರು ಆಗಿರದೇ ಇದ್ದರೆ ಆ ದೃಶ್ಯ ಚೆನ್ನಾಗಿ ಬರುತ್ತಿರಲಿಲ್ಲ ಎಂದು ತಿಳಿಸಿದ್ದಾರೆ.
ಅಮಲಾ ಅವರು ಬೆತ್ತಲಾಗಿ ಟೀಸರ್‍ನಲ್ಲಿ ಕಾಣಿಸಿಕೊಂಡಿದ್ದಕ್ಕೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ಮತ್ತೆ ಕೆಲವರು ಅವರನ್ನು ಟೀಕಿಸಿ ಆಕ್ರೋಶ ಹೊರ ಹಾಕಿದ್ದರು. ಟೀಕೆಗಳಿಗೆ ಪ್ರತಿಕ್ರಿಯಿಸಿದ ಅಮಲಾ, ನಾನು ಪ್ರಾಮಾಣಿಕತೆಯಿಂದ ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಈ ಸಿನಿಮಾ ಬಹಳ ಚೆನ್ನಾಗಿ ಇರಲಿದೆ ಎಂದು ಹೇಳಿದರು.
'Freedom is what you do with what's been done to you.' Presenting #Aadai a Tamil film that breaks the shackles of the status quo. Starring the bold, beautiful & badass @Amala_ams. Directed by @MrRathna produced by @vstudiosoffl@thisisoorka @vijaykartik_khttps://t.co/yvfV17ezcG
— Karan Johar (@karanjohar) June 18, 2019
