ನೀನಾಸಂ ಸತೀಶ್ ನಟನೆಯ ದಿ ರೈಸ್ ಆಫ್ ಅಶೋಕ (The Rise of Ashoka) ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಿದೆ. ಏಳೋ ಏಳೋ ಮಹಾದೇವ ಗೀತೆ ರಿಲೀಸ್ ಆಗಿದ್ದು, ಹಾಡಿನ ವೇದಿಕೆಯಲ್ಲಿ ಇಡೀ ಚಿತ್ರತಂಡ ಹಾಜರಾಗಿತ್ತು.
ಈ ವೇಳೆ ನಟ ನೀನಾಸಂ ಸತೀಶ್ (Sathish Ninasam) ಭಾವುಕವಾಗಿ ಮಾತನಾಡಿದರು. ಅಯೋಗ್ಯ ಲೆಕ್ಕ ಅಲ್ಲಾ ನನಗೆ ಮನೇಲಿ ಮಲಗಿದ್ದರು ಜನ ಆ ಸಿನಿಮಾ ನೋಡ್ತಾರೆ. ಅಯೋಗ್ಯ ಬ್ರಾಂಡ್ ಕ್ರಿಯೇಟ್ ಮಾಡಿದೆ. ಪ್ಯಾನ್ ಇಂಡಿಯಾ (Pan India) ಮಾಡೋ ಹುಚ್ಚ ಅಂತಾರೆ? ಒಂದು ಕೆಜಿಎಫ್, ಒಂದು ಕಾಂತಾರ ಮಾಡಬೇಕು ಅನ್ನೋ ಆಸೆ ನನಗಿದೆ. ಒಂದು ರೂಪಾಯಿ ನಾನು ಸೈನಿಂಗ್ ದುಡ್ಡು ತಗೊಂಡಿಲ್ಲ. ನಾಳೆ ಶೂಟಿಂಗ್ ಮಾಡಬೇಕು ಅಂತ ಹೋದ್ರೆ ನಿರ್ದೇಶಕ ಆತ್ಮಹತ್ಯೆ ಮಾಡ್ಕೊಂಡಿದ್ರು. ಅಲ್ಲಿಂದ ಜವಾಬ್ದಾರಿ ಜಾಸ್ತಿ ಆಯ್ತು ಎಂದಿದ್ದಾರೆ. ಇದನ್ನೂ ಓದಿ: ರಿಷಾ ಪ್ರಕಾರ ಬಿಗ್‌ಬಾಸ್ ಟಾಪ್ 5 ಸ್ಪರ್ಧಿಗಳು ಇವರು!
ಇಷ್ಟೆಲ್ಲ ಮಾಡಿ ಈ ಸಿನಿಮಾ ಶೂಟಿಂಗ್ ಶುರು ಆದಮೇಲೆ ನನ್ನ ಅಣ್ಣಗೆ ಆಕ್ಸಿಡೆಂಟ್ ಆಗುತ್ತೆ. ಮೂರು ವರ್ಷ ರಾತ್ರಿ ಕಣ್ಣೀರು ಹಾಕಿ ಸಿನಿಮಾ ಕಂಪ್ಲೀಟ್ ಮಾಡಿದ್ದೇವೆ. ನನ್ನ ಶತ್ರುಗಳು ಈ ಸಿನಿಮಾ ನೋಡಿ ಹೆಮ್ಮೆ ಪಡ್ತಾರೆ. ಒಂದು ಸಿನಿಮಾಗೆ 50 ಲಕ್ಷ ರೂ. ತಗೊಂಡು 6 ಸಿನಿಮಾ ಮಾಡಬೋದಿತ್ತು ಮೂರು ವರ್ಷದಲ್ಲಿ, ಆದ್ರೆ ಮಾಡ್ಲಿಲ್ಲ ಸರ್ವಸ್ವವು ನಮಗೆ ರೈಸ್ ಆಫ್ ಅಶೋಕ ಆಗಿತ್ತು ಎಂದಿದ್ದಾರೆ.
ರೈಸ್ ಆಫ್ ಅಶೋಕ ಸಿನಿಮಾ ಅದ್ಭುತವಾಗಿ ಮೂಡಿಬಂದಿದೆ ಅಂದ್ರೆ ಎಲ್ಲಾ ಟೆಕ್ನಿಷಿಯನ್ಸ್ ಹಾಗೂ ಕಲಾವಿದರು, ನಿರ್ಮಾಪಕರು ಹಾಗೂ ನಿರ್ದೇಶಕ ವಿನೋದ್ ದೊಂಡಾಳೆ ಅವರ ಕುಟುಂಬದ ಸಾಥ್ ಮುಖ್ಯವಾಯ್ತು. ನಿರ್ದೇಶಕರು ಈ ದಿನ ನಮ್ಮ ಜೊತೆ ಇಲ್ಲ ಅನ್ನೋ ನೋವಿದೆ. ಅವರ ಕನಸಿನಂತೆ ಸಿನಿಮಾ ಮಾಡಿದ್ದೀವಿ ಅನ್ನೋ ಹೆಮ್ಮೆ ಇದೆ. ಅವರು ಮೇಲಿಂದಲೇ ನೋಡಿ ಹರಸುತ್ತಾರೆ ಎಂದಿದ್ದಾರೆ ನೀನಾಸಂ ಸತೀಶ್.

