ನನ್ನ ಕೊನೆ ಚುನಾವಣೆ ಹುಟ್ಟೂರಿನಲ್ಲಿ ಆಗಬೇಕೆಂಬ ಆಸೆ: ಸಿದ್ದರಾಮಯ್ಯ

Public TV
1 Min Read
SIDDARAMAIAH 1 2

ಮೈಸೂರು: ನನ್ನ ಕೊನೆ ಚುನಾವಣೆ ಹುಟ್ಟೂರುನಲ್ಲಿ ಆಗಬೇಕೆಂಬ ಆಸೆ. ವರುಣಾ ಜೊತೆಗೆ ಕೋಲಾರ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ. ಕೋಲಾರ ಕ್ಷೇತ್ರದ ಜನರಿಂದ ಹೆಚ್ಚು ಒತ್ತಡ ಬರುತ್ತಿದೆ. ಈ ಬಾರಿ ಎರಡು ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವ ಬಗ್ಗೆ ಸಿದ್ದರಾಮಯ್ಯ (Siddaramaiah) ಸ್ಪಷ್ಟಪಡಿಸಿದರು.

ಎಚ್‍ಡಿ ಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ಬಿಜೆಪಿ (BJP) ಮತ್ತು ಜೆಡಿಎಸ್ (JDS) ಮ್ಯಾಚ್ ಫಿಕ್ಸ್ ಮಾಡಿಕೊಂಡಿತ್ತು. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಮಾಡಿಕೊಂಡರೂ ಅಚ್ಚರಿ ಇಲ್ಲ ಎಂದು ಹೇಳಿದರು. ಇದನ್ನೂ ಓದಿ: ಹಿಂದೂ ಸಂಘಟನೆಗಳ ಪ್ರತಿಭಟನೆ ವೇಳೆ ಕುರಾನ್ ಜಿಂದಾಬಾದ್ ಘೋಷಣೆ – ಯುವಕನ ಬಂಧನ

SIDDARAMAIAH 5

ವರುಣಾ ಕ್ಷೇತ್ರ (Varuna Constituency) ಸಿದ್ದರಾಮಯ್ಯಗೆ ಲಕ್ಕಿ ಕ್ಷೇತ್ರ ವಿಚಾರದ ಕುರಿತು ಮಾತನಾಡಿ, ವರುಣಾ ಕ್ಷೇತ್ರದಿಂದ ಗೆದ್ದಾಗಲೇ ನಾನು ಸಿಎಂ ಆಗಿದ್ದು. ಯಾವುದೇ ಒಂದು ಕ್ಷೇತ್ರ ಲಕ್ಕಿ ಅಂತ ಇಲ್ಲ. ವರುಣಾ ನನ್ನ ಹುಟ್ಟೂರು. ವರುಣಾ ಹೋಬಳಿ ಕಾರಣಕ್ಕೆ ವರುಣಾ ಕ್ಷೇತ್ರ ಅಂಥಾ ಕರೆಯುತ್ತಿದ್ದಾರೆ ಎಂದರು.

ಹೈಕಮಾಂಡ್ ಗಳ ಜೊತೆ ಮಾತನಾಡಿದ್ದೇನೆ ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರದ ಕುರಿತು ಪ್ರತಿಕ್ರಿಯಿಸಿ, ನಮ್ಮ ಹೈಕಮಾಂಡ್ ಜೊತೆಗೆ ಯಾರೂ ಮಾತನಾಡಿಲ್ಲ. ಈ ಬಾರಿ ನಾವು ಯಾರ ಜೊತೆಯೂ ಮಾತುಕತೆ ಮಾಡಲ್ಲ. ಕಾಂಗ್ರೆಸ್ ಏಕಾಂಗಿಯಾಗಿ ಅಧಿಕಾರಕ್ಕೆ ಬರುತ್ತೆ ಎಂದು ತಿರುಗೇಟು ನೀಡಿದರು.

Share This Article