ಕಳೆದ ವಾರ ಬಿಗ್‌ಬಾಸ್ (Bigg Boss Kannada 12) ಮನೆಯಿಂದ ಹೊರ ಬಂದ ಕಂಟೆಸ್ಟೆಂಟ್ ಜಾನ್ವಿ (Jhanvi) ಈ ಸೀಸನ್‌ನಲ್ಲಿ ಗೆಲ್ಲುವ ಸ್ಪರ್ಧಿ ಯಾರು ಅನ್ನೋ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ. ಅಶ್ವಿನಿ ಗೌಡ (Ashwini Gowda) ಬಗ್ಗೆ ಉತ್ತಮ ಅಭಿಪ್ರಾಯ ಹಂಚಿಕೊಂಡಿರುವ ಜಾನ್ವಿ `ನನಗೆ ಅಶ್ವಿನಿ ಗೆಲ್ಲಬೇಕು ಎಂಬ ಆಸೆ ಇದೆ. ಆದರೆ ಈ ಸೀಸನ್‌ನಲ್ಲಿ ಗೆಲ್ಲೋದು ಗಿಲ್ಲಿನಟ’ ಎಂದಿದ್ದಾರೆ.
ಪಬ್ಲಿಕ್ ಟಿವಿ ಜೊತೆಗಿನ ಸಂದರ್ಶನದಲ್ಲಿ ಜಾನ್ವಿ ತಮ್ಮ ಅಭಿಪ್ರಾಯ ಹಂಚಿಕೊಂಡು ಯಾಕೆ ಗಿಲ್ಲಿ ಗೆಲ್ಲುತ್ತಾರೆ ಎಂಬ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಅಸಲಿಗೆ ಗಿಲ್ಲಿಯೇ ಯಾಕೆ ಗೆಲ್ಲೋ ಕಂಟೆಸ್ಟೆಂಟ್ ಎನ್ನುವ ವಿಚಾರ ಹೇಳಿರುವ ಜಾನ್ವಿ, `ಪ್ರತಿ ಸೀಸನ್‌ನಲ್ಲೂ ಒಬ್ಬ ಕಂಟೆಸ್ಟೆಂಟ್‌ಗೆ ಫಾಲೋವಿಂಗ್ ದೊಡ್ಡ ಗುಂಪು ಹುಟ್ಟಿಕೊಳ್ಳುತ್ತೆ. ಈ ಸೀಸನ್‌ನಲ್ಲಿ ಆ ಗುಂಪು ಗಿಲ್ಲಿಕಡೆ (Gilli Nata) ಇದೆ. ಜನರ ಅಪಾರ ಪ್ರೀತಿ ಗಿಲ್ಲಿಗೆ ಹೋಗಿದೆ. ಹೀಗಾಗಿ ಜನರ ವೋಟ್‌ನಿಂದಾಗಿ ಗಿಲ್ಲಿಯೇ ಗೆಲ್ಲೋ ಸಾಧ್ಯತೆ ಇದೆ’ ಎಂದಿದ್ದಾರೆ ಜಾನ್ವಿ.
ಕನ್ನಡದ ಬಿಗ್‌ಬಾಸ್‌ನಲ್ಲಿ ಕಳೆದ ಸೀಸನ್‌ನಲ್ಲಿ ನಟಿ ಶ್ರುತಿ ಹೊರತಾಗಿ ಇನ್ನೋರ್ವ ಮಹಿಳಾ ಕಂಟೆಸ್ಟೆಂಟ್ ಇದುವರೆಗೂ ಗೆದ್ದಿಲ್ಲ. ಅಶ್ವಿನಿಯವರಿಗೆ ಗೆಲ್ಲೋ ಸಾಮರ್ಥ್ಯ ಇದೆ. ಆದರೆ ಅಶ್ವಿನಿ ಗೆಲ್ಲಲ್ಲ, ಗೆಲ್ಲೋದು ಗಿಲ್ಲಿ ಎಂದಿದ್ದಾರೆ ಜಾನ್ವಿ. ಪಬ್ಲಿಕ್ ಟಿವಿಗೆ ಗಿಲ್ಲಿ ವಿಚಾರವಾಗಿ ಜಾನ್ವಿ ನೀಡಿರುವ ಸಂದರ್ಶನ ವೈರಲ್ ಆಗಿದೆ.

