2ನೇ ಮದುವೆ ನನಗೆ ಬೇಕಿತ್ತಾ ಅಂತಾರೆ ಮಠದ ಗುರುಪ್ರಸಾದ್

Public TV
1 Min Read
Guruprasad

ರಾಜು ಜೇಮ್ಸ್ ಬಾಂಡ್ (Raju James Bond)  ಚಿತ್ರದ ‘ಬೇಕಿತ್ತಾ… ಬೇಕಿತ್ತಾ..’ (Bekitta) ಹಾಡಿನ ಬಗ್ಗೆ ಹೇಳ್ತಾ, ನಿರ್ದೇಶಕ ಮಠ ಗುರುಪ್ರಸಾದ್ (Guruprasad) ತಮ್ಮ ಮೊದಲ ಮದುವೆ, ಡಿವೋರ್ಸ್, ಎರಡನೇ ಮದುವೆ ಮತ್ತು ಮಗು ಬಗ್ಗೆ ಬಾಯಿ ಬಿಟ್ಟಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗ್ತಿದೆ.

Raju James Bond 1

ರಾಜು ಜೇಮ್ಸ್ ಬಾಂಡ್ ಚಿತ್ರದ ಮೊದಲ ಹಾಡು (Song) ಬೇಕಿತ್ತಾ ಬೇಕಿತ್ತಾ. ಇತ್ತೀಚೆಗಷ್ಟೇ ರಿಲೀಸ್ ಆಗಿದೆ. ಆಗ್ಲೇ ಅರ್ಧ ಮಿಲಿಯನ್ ವೀವ್ಸ್ ಪಡೆದುಕೊಂಡಿದೆ‌. ಅನೂಪ್ ಸೀಳಿನ್ ಸಂಗೀತ, ನಿರ್ದೆಶಕ ದೀಪಕ್ ಮಧುವನಹಳ್ಳಿ ಸಾಹಿತ್ಯ ಬರೆದಿದ್ದಾರೆ. ಟಗರು ಖ್ಯಾತಿಯ ಅಥೋನಿ ದಾಸನ್ ಹಾಡಿದ್ದಾರೆ..ಲವ್ವು ನೋವಿನ ಎಣ್ಣೆ‌ ಹಾಡು ಇದಾಗಿದ್ದು ಕೇಳೋದಕ್ಕೆ ಕ್ಯಾಚಿಯಾಗಿದೆ.

Raju James Bond 3

ಅನೂಪ್ ಸೀಳಿನ್ ಕಂಪೋಸಿಷನ್ ‌ದೀಪಕ್ ಲಿರಿಕ್ಸ್ ಹಾಗೂ ಅಥೋನಿದಾಸನ್ ವಾಯ್ಸು ಎಲ್ಲವೂ ಪರ್ಫೆಕ್ಟ್ ಆಗಿ ಮ್ಯಾಚಿಂಗ್ ಆಗಿದೆ. ಫಸ್ಟ್ ಟೈಂ ನಟ ಗುರುನಂದನ್ ವಿರಾಗಿ ವೇಷದಲ್ಲಿ ಕಾಣಿಸಿಕೊಂಡಿದ್ದು ಈ ಹಾಡು ಅವರಿಗೆ ಪಕ್ಕಾ ಹೇಳಿ ಮಾಡಿಸಿದಂತಿದೆ. ಇದನ್ನೂ ಓದಿ:‘ದೇವರ ಆಟ ಬಲ್ಲವರಾರು’ ಎನ್ನುತ್ತಾ 3 ವರ್ಷಗಳ ನಂತರ ಬಣ್ಣ ಹಚ್ಚಿದ ಸಿಂಧೂ ಲೋಕನಾಥ

Raju James Bond 2

ಈ ಹಾಡು ನೋಡಿ ನಿರ್ದೇಶಕ ಮಠ ಗುರುಪ್ರಸಾದ್ ಖುದ್ದು ಈ ಹಾಡಿನ ಬಗ್ಗೆ ವಿಶೇಷವಾಗಿ ಮಾತನಾಡಿದ್ದಾರೆ. ಈ ಹಾಡು ನನ್ನ ಬದುಕಿಗೆ ಹತ್ತಿರವಾಗಿದೆ ಎನ್ನುತ್ತಾ ತಮ್ಮ ಬದುಕಿನ ಮೊದಲ ಮದುವೆ ಡಿವೋರ್ಸ್, ಎರಡನೇ ಮದುವೆ ಮತ್ತು ಮಗು ಎಲ್ಲವನ್ನೂ ಹೇಳಿದ್ದಾರೆ. ಮಂಜುನಾಥ್ ವಿಶ್ಚಕರ್ಮ ನಿರ್ಮಾಣದ ಈ ಚಿತ್ರದಲ್ಲಿ ಗುರುನಂದನ್, ಮೃದುಲಾ, ರವಿಶಂಕರ್, ಅಚ್ಚುತ್, ಚಿಕ್ಕಣ್ಣ, ಸಾಧುಕೋಕಿಲಾ ಮುಂತಾದವರು ನಟಿಸಿದ್ದಾರೆ.

 

ಸದ್ಯ ಬೇಕಿತ್ತಾ ಬೇಕಿತ್ತಾ ಹಾಡಿನಿಂದ ಸದ್ದು ಮಾಡ್ತಿರೋ ರಾಜು ಜೇಮ್ಸ್ ಬಾಂಡ್ ಚಿತ್ರ ಸದ್ಯದಲ್ಲೇ ಪ್ರೇಕ್ಷಕರೆದುರಿಗೆ ಬರಲಿದೆಯಂತೆ. ರಾಜು ಸೀರಿಸ್ ಮೂಲಕ ಸಖತ್ ಫೇಮಸ್ ಆಗಿರುವ ಗುರುನಂದನ್ ಈ ಸಿನಿಮಾದ ಮೂಲಕ ಮತ್ತಷ್ಟು ನಿರೀಕ್ಷೆ ಮೂಡಿಸಿದ್ದಾರೆ.

Share This Article