ಬ್ರೇಕ್ ಅಪ್ ಆದ ಗೆಳೆಯನಿಗಾಗಿ 2 ವರ್ಷ ಕಾದಿದ್ದೆ: ನಟಿ ಅಂಕಿತಾ

Public TV
1 Min Read
Ankita Lokhande

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ (Sushant Singh Rajpu) ಅವರ ಮಾಜಿ ಗೆಳೆತಿ ಅಂಕಿತಾ ಲೋಖಂಡೆ (Ankita Lokhande) ನೆಚ್ಚಿನ ಗೆಳಯನ ಕುರಿತು ಹಲವಾರು ವಿಷಯಗಳನ್ನು ಮಾತನಾಡಿದ್ದಾರೆ. ಅದರಲ್ಲೂ ಅಗಲಿರುವ ಸುಶಾಂತ್ ನನ್ನು ತಾವು ಎಷ್ಟು ಪ್ರೀತಿಸುತ್ತಿದ್ದೆ ಎನ್ನುವುದನ್ನು ಅವರು ಹೇಳಿಕೊಂಡಿದ್ದಾರೆ.

Ankita Lokhande Sushant Singh Rajput

ಸುಶಾಂತ್ ನನ್ನ ಪ್ರಪಂಚವಾಗಿದ್ದ. ನಾನು ತುಂಬಾ ಅವನನ್ನು  ಪ್ರೀತಿ ಮಾಡಿದ್ದೆ. ಬ್ರೇಕ್ ಅಪ್ (Break Up)  ಆದ ನಂತರ ಬರೋಬ್ಬರಿ 2 ವರ್ಷಗಳ ಕಾಲ ನಾನು ಅವನಿಗಾಗಿ ಕಾದೆ. ನಮ್ ಬ್ರೇಕ್ ಅಪ್ ವಿಚಾರ ಯಾರ ಮುಂದೆಯೂ ಹೇಳಿರಲಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ. ಆದರೂ, ಅವರು ನನಗೆ ಸಿಗಲಿಲ್ಲ ಎನ್ನುವ ವಿಚಾರವನ್ನೂ ಅತ್ಯಂತ ನೋವಿನಿಂದ ಹೇಳಿಕೊಂಡಿದ್ದಾರೆ.

 

ಸುಶಾಂತ್ ಮತ್ತು ಅಂಕಿತಾ ಹಲವು ವರ್ಷಗಳ ಕಾಲ ಪ್ರೀತಿಸಿದವರು. ಲೀವ್ ಇನ್ ರಿಲೇಷನ್ ಶಿಪ್ ನಲ್ಲಿ ಇದ್ದವರು. ಆನಂತರ ಮುನಿಸಿಕೊಂಡು ದೂರವಾದರು. ಪ್ರೀತಿ ಅವರನ್ನು ಮತ್ತೆ ಒಂದಾಗೋಕೆ ಬಿಡಲಿಲ್ಲ. ಈ ನೋವನ್ನು ಅಂಕಿತಾ ಮಾಧ್ಯಮವೊಂದರ ಮುಂದೆ ಹೇಳಿಕೊಂಡಿದ್ದಾರೆ.

Share This Article