ಬೆಂಗಳೂರು: ಕಿರುತೆರೆ ನಟ ಶೈನ್ ಶಟ್ಟಿ ಬಿಗ್ ಬಾಸ್-7ರ ಟೈಟಲ್ ಗೆದ್ದಿದ್ದಾರೆ. ಗ್ರ್ಯಾಂಡ್ ಫಿನಾಲೆಯಲ್ಲಿ ಕುರಿ ಪ್ರತಾಪ್ ಮತ್ತು ವಾಸುಕಿ ವೈಭವರನ್ನು ಹಿಂದಿಕ್ಕಿ ಶೈನ್ ಮಿಂಚಿದ್ದಾರೆ. 50 ಲಕ್ಷ ರೂ., ಪ್ರಶಸ್ತಿ ಮೊತ್ತದ ಜೊತೆಗೆ 11 ಲಕ್ಷ ರೂ. ಹೆಚ್ಚುವರಿಯಾಗಿ ಗೆದ್ದಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಶೈನ್, ಈ ಕ್ಷಣ ನಾನು ಖುಷಿಯಲ್ಲಿ ತೇಲಾಡುತ್ತಿದ್ದೇನೆ. ನನ್ನ ಇಷ್ಟು ವರ್ಷ ಶ್ರಮಕ್ಕೆ ಹಾಗೂ ಪ್ರಯತ್ನಕ್ಕೆ ಒಂದು ಫಲ ಸಿಕ್ಕಿದೆ. ದೇವರು ಕೊಡಬೇಕಾದರೆ ಎಲ್ಲವನ್ನು ಕೊಡುತ್ತಾರೆ ಎನ್ನುವಂತ ಫೀಲಿಂಗ್ ನಲ್ಲಿ ನಾನಿದ್ದೇನೆ ಎಂದು ಗೆಲುವಿನ ಅನುಭವವನ್ನು ಹಂಚಿಕೊಂಡಿದ್ದಾರೆ.
Advertisement
Advertisement
ಟಾಪ್ 3ಗೆ ಬಂದಾಗ ವಾಸುಕಿ ಅವರು ಗೆಲ್ಲುತ್ತಾರೆ ಎಂದು ಅಂದುಕೊಂಡಿದ್ದೆ. ಈಗ ಅಂತಾ ಅಲ್ಲ ಮೊದಲಿನಿಂದಲೂ ವಾಸುಕಿ ವಿನ್ ಆಗುತ್ತಾರೆ ಎಂದು ಅಂದುಕೊಂಡಿದ್ದೆ. ಕುರಿ ಪ್ರತಾಪ್ ಹಾಗೂ ನಾನು ಫೈನಲ್ಗೆ ಬಂದಾಗ ನನ್ನಲ್ಲಿ ಒಂದು ಸಣ್ಣ ಆಶಾಕಿರಣ ಬಂತು. ನಾನು ಆಗಬಹುದು ಎಂದುಕೊಂಡೆ. ಬಳಿಕ ಅವರಿಗೆ ತುಂಬಾ ಅಭಿಮಾನಿಗಳು ಇದ್ದಾರೆ, ಎನ್ ಆಗುತ್ತೋ ಏನೋ ಎಂದುಕೊಂಡಿದ್ದೆ ಎಂದು ಶೈನ್ ಪ್ರತಿಕ್ರಿಯಿಸಿದ್ದಾರೆ.
Advertisement
Advertisement
ನಾನು ಎದ್ದ ತಕ್ಷಣ ಮೈಕ್ ಎಲ್ಲಿ ಎಂದು ಹುಡುಕುತ್ತಿದ್ದೇನೆ. ನಾನು ಬಿಗ್ಬಾಸ್ ಮನೆಯನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಬಿಗ್ ಬಾಸ್ನಲ್ಲಿ ಬೆಳಗ್ಗೆ ಹಾಡು ಹಾಕಿದ ತಕ್ಷಣ ನಾನು ಡ್ಯಾನ್ಸ್ ಮಾಡುತ್ತಿದ್ದೆ. ಬೆಳಗ್ಗೆ ಎದ್ದು ನಾನು ಡ್ಯಾನ್ಸ್ ಮಾಡುವಾಗ ಇಡೀ ದಿನಕ್ಕೆ ಎನರ್ಜಿ ಸಿಗುತ್ತಿತ್ತು. ಅಲ್ಲದೆ ಬಿಗ್ಬಾಸ್ ರೇಡಿಯೋವನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಒಟ್ಟಿನಲ್ಲಿ ನಾನು ಇಡೀ ಬಿಗ್ಬಾಸ್ ಅನ್ನೇ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದರು.
ನನ್ನ ಎಲ್ಲಾ ಅಭಿಮಾನಿಗಳಿಗೆ ನಾನು ತುಂಬು ಹೃದಯದ ಧನ್ಯವಾದ ಹೇಳಲು ಇಷ್ಟಪಡುತ್ತೇನೆ. ಇಷ್ಟು ವರ್ಷದ ಪ್ರಯತ್ನಕ್ಕೆ, ಇಷ್ಟು ವರ್ಷದ ಛಲ ಇಟ್ಟುಕೊಂಡು ಮುಂದೆ ಬಂದಿದ್ದಕ್ಕೆ ಒಂದು ಸಾರ್ಥಕತೆಯನ್ನು ನೀವು ವೋಟ್ ಮಾಡುವ ಮೂಲಕ ನನಗೆ ನೀಡಿದ್ದೀರಾ. ದೇವರು ತುಂಬಾನೇ ಕಷ್ಟ, ನೋವು ಕೊಡುತ್ತಾನಂತೆ. ಆ ಕಷ್ಟಗಳನ್ನು ತಡೆದುಕೊಂಡು ಮುಂದೆ ಹೋದರೆ ದೇವರು ನಮಗೆ ಗೆಲುವು ಸಿಗುತ್ತೆ ಎಂದು ಹೇಳುತ್ತಾರೆ. ಆ ಗೆಲುವು ನನಗೆ ಅಭಿಮಾನಿಗಳ ವೋಟ್ಗಳಿಂದ ಸಿಕ್ಕಿದೆ. ನನಗೆ ವೋಟ್ ಮಾಡಿದ ಎಲ್ಲರಿಗೂ ಧನ್ಯವಾದಗಳು ಎಂದು ಶೈನ್ ತಿಳಿಸಿದ್ದಾರೆ.