ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಏರ್ ಸರ್ಜಿಕಲ್ ಸ್ಟ್ರೈಕ್ ಗೆ ಸಂಬಂಧಿಸಿದ ಹೇಳಿಕೆಯೊಂದು ಸಾಮಾಜಿಕ ಜಾಲತಾಣದಲ್ಲಿ ಮಿಂಚಿನಂತೆ ಹರಿದಾಡುತ್ತಿದೆ. ಇದೇ ಹೇಳಿಕೆಯನ್ನು ಅಸ್ತ್ರವಾಗಿ ಬಳಸಿಕೊಂಡು ಕಾಂಗ್ರೆಸ್ ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಿ ಮೋದಿಯವರ ಕಾಲೆಳೆದಿದೆ.
ಪುಲ್ವಾಮಾದಲ್ಲಿ ಭಯೋತ್ಪಾದಕರ ದಾಳಿಗೆ 44 ಸಿಆರ್ ಪಿಎಫ್ ಯೋಧರು ಹುತಾತ್ಮರಾದ ಬಳಿಕ ನಡೆದಿದ್ದ ಬಾಲಕೋಟ್ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಪ್ರಧಾನಿ ಮೋದಿ ಆಡಿರುವ ಮಾತು ಈಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ನ್ಯೂಸ್ ನೇಷನ್ ಹೆಸರಿನ ಹಿಂದಿ ನ್ಯೂಸ್ ಚಾನೆಲ್‍ಗೆ ನೀಡಿದ ಸಂದರ್ಶನದಲ್ಲಿ ಮೋದಿ ಸರ್ಜಿಕಲ್ ದಾಳಿ ಬಗ್ಗೆ ಮಾತಾಡಿದ್ದರು.
Advertisement
Advertisement
ವೈರಲ್ ಆಗಿರುವ ವಿಡಿಯೋದಲ್ಲಿ ಏನಿದೆ?
ದಾಳಿಯ ಮುನ್ನ ರಾತ್ರಿ 9 ಗಂಟೆಗೆ ರಿವ್ಯೂವ್ ಮಾಡಿದೆ. ಮತ್ತೊಮ್ಮೆ ರಾತ್ರಿ 12 ಗಂಟೆಗೆ ದಾಳಿಯ ಪ್ಲಾನ್ ನೋಡಿದೆ. ಅಂದು ರಾತ್ರಿ ಹೆಚ್ಚು ಮಳೆಯಾಗಿದ್ದರಿಂದ ನಮ್ಮ ರೇಡಾರ್ ಕೆಟ್ಟಿತ್ತು. ದಾಳಿಗೆ ವಾತಾವರಣ ಸಹಕರಿಸುತ್ತಿಲ್ಲ. ಹಾಗಾಗಿ ಸರ್ಜಿಕಲ್ ಸ್ಟ್ರೈಕ್ ದಾಳಿಯ ದಿನಾಂಕ ಬದಲಿಸೋಣ ಎಂಬ ಸಲಹೆ ನೀಡಿದರು. ದಾಳಿಯ ರಹಸ್ಯವನ್ನು ಎಲ್ಲಿಯೂ ಲೀಕ್ ಆಗಿರಲಿಲ್ಲ. ಒಂದು ವೇಳೆ ದಿನಾಂಕ ಮುಂದೂಡಿದ್ರೆ ದಾಳಿಯ ರಹಸ್ಯ ಲೀಕ್ ಆದ್ರೆ ಹೇಗೆ ಎಂಬ ಸಂಶಯ ಕಾಡಿತ್ತು. ಮೋಡಗಳಿಂದ ನಮ್ಮ ರಡಾರ್ ಕೆಲಸ ಮಾಡುತ್ತಿಲ್ಲ. ಹಾಗೆ ಶತ್ರುಗಳ ರಡಾರ್ ಸಹ ಕೆಲಸ ಮಾಡುತ್ತಿರಲ್ಲ. ಕೆಲವು ಸಾರಿ ಮೋಡಗಳು ಸಹಾಯ ಮಾಡುತ್ತವೆ. ನಾವು ರಡಾರ್ ನಿಂದ ಸಲೀಸಾಗಿ ತಪ್ಪಿಸಿಕೊಳ್ಳಬಹುದು. ಎಲ್ಲ ಅಧಿಕಾರಿಗಳು ಗೊಂದಲದಲ್ಲಿದ್ದಾಗ ಹೋಗಿ ದಾಳಿ ನಡೆಸಿ ಎಂದು ಅದೇಶಿಸಿದೆ ಎಂದರು.
Advertisement
FYI @narendramodi the radar to detect planes,cloud or no cloud has been there for decades. Even for the stealth ones. If not, other country’s planes would be crisscrossing the skies firing away at will ????
This is what happens when you’re stuck in the past. Get with it Uncle ji. https://t.co/sKYTAmz6jz
— Ramya/Divya Spandana (@divyaspandana) May 12, 2019
Advertisement
ದಟ್ಟ ಮೋಡದಲ್ಲೂ ರಡಾರ್‍ಗಳು ವಿಮಾನಗಳನ್ನು ಪತ್ತೆ ಹಚ್ಚುವ ಸಾಮಥ್ರ್ಯವನ್ನು ಹೊಂದಿರುತ್ತವೆ. ಮೋದಿಗಿಂತ ಭಾರತೀಯ ವಾಯುಸೇನೆಯ ಅಧಿಕಾರಿಗಳು ದಡ್ಡರೇ ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.ವಿಡಿಯೋವನ್ನು ರಿಟ್ವೀಟ್ ಮಾಡಿಕೊಂಡಿರುವ ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ರಮ್ಯಾ, 2014ರಿಂದಲೂ ಸುಳ್ಳು, ಮೂರ್ಖತನ ಮತ್ತು ಭ್ರಷ್ಟಾಚಾರದ ಹೊಸ ರಡಾರ್ ಹೊಂದಿದ್ದೇವೆ ಎಂದು ವ್ಯಂಗ್ಯ ಮಾಡಿದ್ರೆ, ಕಾಂಗ್ರೆಸ್ ತನ್ನ ಟ್ವಿಟರ್ ನಲ್ಲಿ ಐದು ವರ್ಷದ ಆಡಳಿತದಲ್ಲಿ ಸುಳ್ಳು ಹೇಳುತ್ತಾ ಬಂದಿದ್ದೀರಿ ಎಂದು ಬರೆದುಕೊಂಡಿದೆ.
Jumla hi fekta raha paanch saal ki sarkar mein,
Socha tha cloudy hai mausam,
Nahi aaunga radar mein. pic.twitter.com/xDeOg4Yq5K
— Congress (@INCIndia) May 12, 2019