ಅಪ್ಪಿಕೊಂಡ ತಕ್ಷಣವೇ ಮೋದಿ ಮೆಡಿಕಲ್ ಟೆಸ್ಟ್ ಮಾಡ್ಸಿಕೊಳ್ಬೇಕಿತ್ತು – ರಾಗಾ ಅಪ್ಪುಗೆಗೆ ಸುಬ್ರಮಣಿಯನ್ ಸ್ವಾಮಿ ಲೇವಡಿ

Public TV
2 Min Read
RAGA SWAMI

ನವದೆಹಲಿ: ಲೋಕಸಭೆಯಲ್ಲಿ ಶುಕ್ರವಾರ ಅವಿಶ್ವಾಸ ನಿರ್ಣಯ ಮಂಡನೆಗೂ ಮೊದಲು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಅಪ್ಪಿಕೊಂಡಿರುವುದಕ್ಕೆ ಬಿಜೆಪಿ ರಾಜ್ಯಸಭೆ ಸದಸ್ಯ ಸುಬ್ರಮಣಿಯನ್ ಸ್ವಾಮಿ ವಿವಾದಾತ್ಮಕ ಟ್ವಿಟ್ ಮಾಡಿದ್ದಾರೆ.

ಅಪ್ಪಿಕೊಳ್ಳುವ ರಾಹುಲ್ ಗಾಂಧಿಗೆ ನಮೋ ಬಿಡಬಾರದಿತ್ತು. ರಷ್ಯಾ, ಉತ್ತರಕೊರಿಯಾದವರು ಇದೇ ರೀತಿ ಅಪ್ಪಿಕೊಳ್ಳುವ ತಂತ್ರ ಉಪಯೋಗಿಸ್ತಾರೆ. ಅಪ್ಪಿಕೊಳ್ಳುವ ತಂತ್ರ ಬಳಸಿ ವಿಷದ ಇಂಜೆಕ್ಷನ್ ಚುಚ್ತಾರೆ. ರಾಹುಲ್ ಅಪ್ಪಿಕೊಂಡ ತಕ್ಷಣವೇ ಮೋದಿ ಮೆಡಿಕಲ್ ಟೆಸ್ಟ್ ಮಾಡಿಸಿಕೊಳ್ಳಬೇಕಿತ್ತು. ಪುಷ್ಕರ್ ಕೈಯಲ್ಲಿದ್ದ ಇಂಜೆಕ್ಷನ್ ಗುರುತಿನಂತೆ ತಮಗೂ ಇಂಜೆಕ್ಷನ್ ಆಗಿದ್ಯಾ ಅಂತ ಚೆಕ್ ಮಾಡಿಸಿಕೊಳ್ಳಬೇಕಿತ್ತು ಅಂತ ಲೇವಡಿ ಮಾಡಿದ್ದಾರೆ.

ಮೋದಿಯನ್ನು ಅಪ್ಪಿಕೊಂಡ್ರು ರಾಹುಲ್:
ಅವಿಶ್ವಾಸ ಗೊತ್ತುವಳಿ ಚರ್ಚೆಯ ವೇಳೆ ರಾಹುಲ್ ಗಾಂಧಿಯವರು ಸಚಿವರಾದ ಅನಂತಕುಮಾರ್ ಹೆಗ್ಡೆ ಸಂವಿಧಾನ ಬದಲಿಸುವ ಮಾತುಗಳನ್ನು ಆಡುತ್ತಾರೆ. ಸ್ವಲ್ಪ ಸಮಯ ಕಲಾಪ ಮುಂದೂಡಿದಾಗ ನಿಮ್ಮ ಸಂಸದರೇ ನನ್ನ ಬಳಿ ಬಂದು ತುಂಬಾ ಚೆನ್ನಾಗಿ ಮಾತನಾಡಿದ್ದೀರಿ ಅಂತ ಕೈ ಕುಲುಕಿದರು. ಪ್ರಧಾನಿ ಮೋದಿಯವರನ್ನು ಸೋಲಿಸಲು ಅವರ ಪಕ್ಷದಲ್ಲಿಯೇ ಷಡ್ಯಂತ್ರ ರಚಿತವಾಗಿದೆ. ಬಿಜೆಪಿ, ಆರ್ ಎಸ್‍ಎಸ್ ಗಳಿಗೆ ನಾನು ತುಂಬಾ ಆಭಾರಿಯಾಗಿದ್ದೇನೆ. ನನಗೆ ಹಿಂದೂಸ್ತಾನ್, ಭಾರತ, ಹಿಂದೂ, ನನ್ನ ಧರ್ಮದ ಬಗ್ಗೆ ಹೇಳಿಕೊಟ್ಟಿದ್ದೀರಿ. ನಾನು ಈ ವಿಷಯಕ್ಕಾಗಿ ನಿಮಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಹೇಳುತ್ತಾ ನೇರವಾಗಿ ಮೋದಿಯವರ ಬಳಿ ತೆರಳಿ ಅಪ್ಪಿಕೊಂಡು, ಕೈ ಕುಲುಕಿ ಬರುವ ಮೂಲಕ ಲೋಕಸಭೆಯಲ್ಲಿ ಅಚ್ಚರಿ ಮೂಡಿಸಿದ್ದರು.

modi rahul hug

ಎನ್‍ಡಿಎಗೆ ವಿಶ್ವಾಸ ಮತ:
ದೇಶಾದ್ಯಂತ ಕುತೂಹಲ ಮೂಡಿಸಿದ್ದ ಅವಿಶ್ವಾಸ ನಿರ್ಣಯ ಮಂಡನೆ ಶುಕ್ರವಾರ ಲೋಕಸಭೆಯಲ್ಲಿ ನಡೆದಿದ್ದು, ನಿರೀಕ್ಷೆಯಂತೆ ಪ್ರತಿಪಕ್ಷಗಳಿಗೆ ಸೋಲಾಗಿದೆ. ವಿಶ್ವಾಸಮತ ಸಾಧಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರ ಯಶಸ್ವಿಯಾಗಿದೆ. ಬಹುಮತ ಸಾಬೀತಿಗೆ 226 ಮತ ಬೇಕಾಗಿತ್ತು. ಆದರೆ ಎನ್‍ಡಿಎ ಪರ 325 ಮತಗಳು ಚಲಾವಣೆಯಾದವು. ಕಾಂಗ್ರೆಸ್ ಮೈತ್ರಿಕೂಟದ ಪರವಾಗಿ ಕೇವಲ 126 ಮತ ಚಲಾವವಣೆಯಾದವು. ಇನ್ನು ಈ ವೇಳೆ ಸದನದಲ್ಲಿ ಒಟ್ಟು 451 ಸದಸ್ಯರು ಹಾಜರಿದ್ದು, ಸುಮಾರು ಒಂದೂವರೆ ಗಂಟೆಗೂ ಹೆಚ್ಚು ಕಾಲ ಮಾತನಾಡಿದ ಮೋದಿ, ರಾಹುಲ್ ಗಾಂಧಿಯ ಎಲ್ಲಾ ಆರೋಪಕ್ಕೆ ಕೌಂಟರ್ ಕೊಟ್ಟಿದ್ದರು.

Share This Article
Leave a Comment

Leave a Reply

Your email address will not be published. Required fields are marked *