ಚೆನ್ನೈ: ತಮಿಳು ನಟ ವಿಜಯ್ ಅವರಿಗೆ ಐಟಿ ಶಾಕ್ ನೀಡಿದ್ದು, ಸಿನಿಮಾ ಶೂಟಿಂಗ್ ಸೆಟ್‍ನಲ್ಲೇ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.
ಕಳೆದ ವರ್ಷ ಬಿಡುಗಡೆಯಾದ ‘ಬಿಗಿಲ್’ ಸಿನಿಮಾ ನಿರ್ಮಿಸಿದ್ದ ಎಜಿಎಸ್ ಸಿನಿಮಾ ಸಂಸ್ಥೆಯ ಕಚೇರಿಗಳಲ್ಲಿ ಶೋಧ ಕೈಗೊಂಡಿದೆ. ಸದ್ಯ ಐಟಿ ಅಧಿಕಾರಿಗಳು ಎಜಿಎಸ್ ಸಂಸ್ಥೆಗೆ ಸಂಬಂಧಿಸಿದ 20 ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಿದ್ದಾರೆ.
Advertisement
Advertisement
ದಾಳಿ ನಡೆದ ವೇಳೆ ವಿಜಯ್ ಅವರು ತಮಿಳುನಾಡಿನ ಕುಡಲೂರು ಜಿಲ್ಲೆಯ ನೈವೇಲಿಯಲ್ಲಿ ತಮ್ಮ ಮುಂಬರುವ ‘ಮಾಸ್ಟರ್’ ಸಿನಿಮಾ ಶೂಟಿಂಗ್‍ನಲ್ಲಿ ಬ್ಯುಸಿಯಾಗಿದ್ದರು. ಈ ವೇಳೆ ಐಟಿ ಅಧಿಕಾರಿಗಳು ಅಲ್ಲಿಯೇ ವಿಜಯ್ ಅವರ ವಿಚಾರಣೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಚಿತ್ರದ ಚಿತ್ರೀಕರಣವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.
Advertisement
ಕಳೆದ ವರ್ಷ ಬಿಡುಗಡೆಯಾಗಿದ್ದ ಬಿಗಿಲ್ ಸಿನಿಮಾ ಸೂಪರ್ ಹಿಟ್ ಆಗಿದ್ದು, ಚಿತ್ರದ ಕಲೆಕ್ಷನ್ 180 ಕೋಟಿ ರೂ. ಗಳಿಸಿತ್ತು. ಇದಕ್ಕೆ ಸಂಬಂಧಿಸಿದಂತೆ ಚಿತ್ರದ ಕಲೆಕ್ಷನ್ ಬಗ್ಗೆ ವಿವರಣೆ ಪಡೆಯಲು ಈ ಹಿಂದೆ ಐಟಿ ಇಲಾಖೆ ಸಮನ್ಸ್ ಜಾರಿ ಮಾಡಿತ್ತು.
Advertisement
ಮಧುರೈ ಮೂಲದ ಫೈನಾನ್ಶಿಯರ್ ಅನ್ಬು ಚೆಳಿಯಾನ್‍ನ ಆಸ್ತಿಪಾಸ್ತಿಗಳ ಶೋಧ ಕೈಗೊಂಡಿದೆ. ಬಿಗಿಲ್ ಸಿನಿಮಾ 180 ಕೋಟಿ ರೂ. ಗಳಿಕೆ ಮಾಡಿತ್ತು. ಸಿನಿಮಾಗಳಿಗೆ ಪಡೆದಿರುವ ಸಂಭಾವನೆ ಬಗ್ಗೆ ನಟ ವಿಜಯ್ ಅವರಿಗೆ ಐಟಿ ಪ್ರಶ್ನೆ ಕೇಳಿದೆ ಎಂದು ಮೂಲಗಳು ತಿಳಿಸಿವೆ.
ಐಟಿ ದಾಳಿ ಬಗ್ಗೆ ವಿಜಯ್ ಪ್ರತಿಕ್ರಿಯೆ ನೀಡಿ, ಕಳೆದ ವಾರ ಕೂಡ ಐಟಿ ಅಧಿಕಾರಿಗಳ ನನ್ನ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಿದ್ದರು. ನನ್ನ ಕುಟುಂಬ ಹಾಗೂ ಸಿಬ್ಬಂದಿ ಅಧಿಕಾರಿಗಳ ಶೋಧ ಕಾರ್ಯಕ್ಕೆ ಸಹಕರಿಸಿದ್ದಾರೆ. ಸದ್ಯ ವಿವರಣೆಯ ದಾಖಲೆಗಳನ್ನು ಅಧಿಕಾರಿಗಳಿಗೆ ನೀಡಲಾಗಿದೆ ಎಂದರು.