ನವದೆಹಲಿ: ಮಾಜಿ ಕೇಂದ್ರ ಸಚಿವ ಪಿ ಚಿದಂಬರಂಗೆ ಸಿಬಿಐ ಶಾಕ್ ನೀಡಿದರೆ, ಆರ್‍ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್‍ಗೆ ಆದಾಯ ತೆರಿಗೆ ಇಲಾಖೆ ಭರ್ಜರಿ ಶಾಕ್ ನೀಡಿದೆ.
ಲಾಲೂ ಪ್ರಸಾದ್ ಯಾದವ್ ಅವರಿಗೆ ಸಂಬಂಧ ಇದೆ ಎಂದು ಹೇಳಲಾಗುತ್ತಿರುವ 1 ಸಾವಿರ ಕೋಟಿ ರೂ. ಬೇನಾಮಿ ಭೂಮಿ ಖರೀದಿ ಒಪ್ಪಂದಕ್ಕೆ ಸಂಬಂಧಿಸಿದಂತೆ ಐಟಿ ಅಧಿಕಾರಿಗಳು ದೆಹಲಿ ಎನ್‍ಸಿಆರ್ ವ್ಯಾಪ್ತಿಯಲ್ಲಿ ದಾಳಿ ನಡೆಸಿದ್ದಾರೆ.
Advertisement
ರಿಯಲ್ ಎಸ್ಟೇಟ್ ಎಜೆಂಟ್ ಮತ್ತು ಉದ್ಯಮಿಗಳ ನಿವಾಸ, ಕಚೇರಿಯ ಸೇರಿದಂತೆ 22 ಕಡೆಯಲ್ಲಿ ಈ ದಾಳಿ ನಡೆದಿದೆ. 100 ಮಂದಿ ತೆರಿಗೆ ಅಧಿಕಾರಿಗಳು, ಮತ್ತು ಪೊಲೀಸರ ತಂಡ ಇಂದು ಬೆಳಗ್ಗೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿದೆ.
Advertisement
ಬಿಹಾರದ ಬಿಜೆಪಿ ಘಟಕ ಕೆಲ ದಿನಗಳ ಹಿಂದೆ ಲಾಲೂ ಪ್ರಸಾದ್ ಯಾದವ್ ರೈಲ್ವೇ ಸಚಿವರಾಗಿದ್ದ ವೇಳೆ ತಮ್ಮ ಮಕ್ಕಳಿಗಾಗಿ 1000 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಅಕ್ರಮವಾಗಿ ಖರೀದಿಸಿದ್ದಾರೆ ಎಂದು ಆರೋಪಿಸಿ ದಾಖಲೆಗಳನ್ನು ಬಿಡುಗಡೆ ಮಾಡಿತ್ತು. ಈ ಸಂಬಂಧ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಲಾಲೂ ವಿರುದ್ಧ ನಿಖೆ ನಡೆಸಬೇಕೆಂದು ಆಗ್ರಹಿಸಿತ್ತು.
Advertisement
ಬಿಜೆಪಿಯನ್ನು ಪ್ರಶ್ನೆ ಮಾಡಿದ ರಾಜಕೀಯ ನಾಯಕರ ಮಾನವನ್ನು ಹರಾಜು ಹಾಕಲು ಕೇಂದ್ರ ಸರ್ಕಾರ ಮುಂದಾಗುತ್ತಿದೆ ಎಂದು ಲಾಲೂ ಪ್ರಸಾದ್ ಯಾದವ್ ಸೋಮವಾರ ಹೇಳಿದ್ದರು.
Advertisement
ಇದನ್ನೂ ಓದಿ: ಈ ಐಡಿಯಾ ಮಾಡಿದ್ರೆ 2019ರಲ್ಲಿ ಬಿಜೆಪಿ ಸೋಲುತ್ತೆ.. ಏನಿದು ಲಾಲೂ ಐಡಿಯಾ?
Beware egoist & fascist BJP leaders! Before threatening Lalu, Look at ur face in mirror. There are millions of thousands of Lalu's in Bihar
— Lalu Prasad Yadav (@laluprasadrjd) May 14, 2017
BJP is targeting those leaders who are questioning them repeatedly. BJP sponsored channels r indulged in character assassination of them pic.twitter.com/v834xXJ1sB
— Lalu Prasad Yadav (@laluprasadrjd) May 15, 2017
I-T dept conducts raids,surveys at 22 locations in Delhi, Gurgaon on charges of #benami land deals worth Rs 1,000 cr involving #LaluPrasad.
— Press Trust of India (@PTI_News) May 16, 2017