ಕನ್ನಡತಿ ಪವಿತ್ರಾ ಲೋಕೇಶ್ ಮತ್ತು ತೆಲುಗು ನಟ ನರೇಶ್ ಬಾಬು ಹೊಸ ವರ್ಷವನ್ನು ವಿಶೇಷ ರೀತಿಯಲ್ಲಿ ಆಚರಿಸಿದ್ದರು. ಸುಂದರವಾದ ವಿಡಿಯೋವೊಂದನ್ನು ಪೋಸ್ಟ್ ಮಾಡಿ, ಪ್ರೇಮಿಗಳ ಹೃದಯಕ್ಕೆ ಕಿಚ್ಚು ಹಚ್ಚಿದ್ದರು. ನಡುವಯಸ್ಸಿನ ಈ ಜೋಡಿ ತುಟಿಗೆ ಮುತ್ತಿಕ್ಕಿ ಹೊಸ ವರ್ಷವನ್ನು ಬರಮಾಡಿಕೊಂಡಿದ್ದರು. ಅಲ್ಲದೇ, ಅತೀ ಶೀಘ್ರದಲ್ಲೇ ಮದುವೆಯನ್ನೂ ಘೋಷಿಸುವುದಾಗಿ ತಿಳಿಸಿದ್ದರು.
Advertisement
ಅಸಲಿಯಾಗಿ ಈ ವಿಡಿಯೋ ಅವರ ಮದುವೆಗೆ ಸಂಬಂಧಿಸಿದ್ದಾ ಎನ್ನುವ ಪ್ರಶ್ನೆ ಮೂಡಿತ್ತು. ನರೇಶ್ ಬಾಬು ಅವರು ರಮ್ಯಾ ಅವರಿಂದ ಡಿವೋರ್ಸ್ ಪಡೆಯದೇ ಹೇಗೆ ಈ ರೀತಿಯ ವಿಡಿಯೋ ಮಾಡಲಿಕ್ಕೆ ಸಾಧ್ಯ? ಎನ್ನುವ ಚರ್ಚೆಯನ್ನೂ ಅದು ಹುಟ್ಟುಹಾಕಿತ್ತು. ಈ ರೀತಿ ಮಾಡಿದರೆ ಕಾನೂನು ಬಾಹೀರ ಅಲ್ಲವಾ ಎಂದು ಹಲವರು ಪ್ರಶ್ನೆಯನ್ನೂ ಕೇಳಿದ್ದರು. ಆದರೆ, ಆ ವಿಡಿಯೋ ಅವರ ಮದುವೆಗೆ ಸಂಬಂಧಿಸಿದ್ದು ಅಲ್ಲ ಎಂದು ಹೇಳಲಾಗುತ್ತಿದೆ. ಸಿನಿಮಾವೊಂದರ ಪ್ರಚಾರಕ್ಕಾಗಿ ಅವರು ಈ ರೀತಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಐದು ವರ್ಷದಲ್ಲಿ ಮೂರು ಸಾವಿರ ಕೋಟಿ ಹೂಡಿಕೆ: ಹೊಂಬಾಳೆ ಫಿಲ್ಮ್ಸ್ ಗೆ ಜೈ ಎಂದ ಚಿತ್ರೋದ್ಯಮ
Advertisement
Advertisement
ಸದ್ಯ ನರೇಶ್ ಬಾಬು ಮತ್ತು ಪವಿತ್ರಾ ಲೋಕೇಶ್ ಜೊತೆಯಾಗಿ ‘ಮಲ್ಲಿ ಪೆಳ್ಳಿ’ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮಲ್ಲಿ ಪಳ್ಳಿ ಎಂದರೆ ಮದುವೆ ಎಂದು ಅರ್ಥ. ಈ ಸಿನಿಮಾದ ಪ್ರಚಾರಕ್ಕಾಗಿ ಇಂಥದ್ದೊಂದು ವಿಡಿಯೋ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸುದ್ದಿ ತೆಲುಗು ಸಿನಿಮಾ ರಂಗದಲ್ಲಿ ಗುಸುಗುಸು ಪಿಸುಪಿಸು ಮಾತಿಗೂ ಕಾರಣವಾಗಿದೆ. ಡಿವೋರ್ಸ್ ಸಿಗದೇ ಇಂಥದ್ದೊಂದು ಸಾಹಸ ಮಾಡುವುದಕ್ಕೆ ಹೇಗೆ ಸಾಧ್ಯ? ಎಂದು ಪ್ರಶ್ನೆ ಮಾಡಲಾಗುತ್ತಿದೆ.
Advertisement
ಈ ವಿಡಿಯೋ ಏನೇ ಇರಲಿ ನರೇಶ್ ಬಾಬು ಮತ್ತು ಪವಿತ್ರಾ ಲೋಕೇಶ್ ಜೊತೆಯಾಗಿಯೇ ಬದುಕುತ್ತಿದ್ದಾರೆ ಎನ್ನುವುದಕ್ಕೆ ಈಗಾಗಲೇ ಹಲವು ಸಾಕ್ಷಿಗಳು ಸಿಕ್ಕಿವೆ. ಮೈಸೂರು ಲಾಡ್ಜ್ ವೊಂದರಲ್ಲಿ ಅವರಿಬ್ಬರೂ ಇರುವಂತಹ ವಿಷಯವೂ ಗುಟ್ಟಾಗಿ ಉಳಿದಿಲ್ಲ. ಆದರೆ, ಈ ವಿಡಿಯೋ ಕುರಿತಾಗಿ ಅವರೇ ಸ್ಪಷ್ಟನೆಯನ್ನು ನೀಡಬೇಕಿದೆ.