DistrictsKarnatakaKolarLatestLeading NewsMain Post

ಕ್ರಿಶ್ಚಿಯನ್ ಸಮುದಾಯದ ಪರವಾಗಿ ನಾನಿರುತ್ತೇನೆ – ಸಿದ್ದರಾಮಯ್ಯ

ಕೋಲಾರ: ನನ್ನ ಸರ್ಕಾರದಲ್ಲಿ (Government) ನಾನು ಎಂದೂ ಭೇದ-ಭಾವ ಮಾಡಿಲ್ಲ, ಮುಂದೆಯೂ ಮಾಡಲ್ಲ. ನನ್ನ 5 ವರ್ಷ ಆಡಳಿತ ನೋಡಿದ್ದೀರಿ, ಸಂವಿಧಾನದ (Constitution Of Indian) ಅಡಿಯಲ್ಲಿ ನಾವೆಲ್ಲ ಕೆಲಸ ಮಾಡಬೇಕು. ನಾನು ಕ್ರಿಶ್ಚಿಯನ್ ಸಮುದಾಯದ (Christian Community) ಅಭಿವೃದ್ಧಿ ಪರವಾಗಿ ನಾವಿರುತ್ತೇನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಭರವಸೆ ನೀಡಿದ್ದಾರೆ.

ಕೋಲಾರದ ಮೆಥೋಡಿಸ್ಟ್ ಚರ್ಚ್‌ಗೆ (Church) ಭೇಟಿ ನೀಡಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಕೋಲಾರದಲ್ಲಿ ಸ್ಪರ್ಧೆ ಮಾಡುವಂತೆ ನನ್ನ ಮೇಲೆ ಒತ್ತಡ ಇದೆ. ನಾನೂ ಈಗ ಬಾದಾಮಿ ಕ್ಷೇತ್ರದ ಶಾಸಕನಾಗಿದ್ದೇನೆ. ವರುಣಾ, ಬಾದಾಮಿಯಿಂದಲೂ ಸ್ಪರ್ಧೆಗೆ ಮನವಿಯಿದೆ. ನಾನು ಕೋಲಾರದ ಜನತೆಗೆ ಅಬಾರಿಯಾಗಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: ಕೋಲಾರ ಎಂಟ್ರಿ ಬೆನ್ನಲ್ಲೇ ಗುಂಪು ರಾಜಕೀಯ- ಸಿದ್ದರಾಮಯ್ಯ ಮೇಲೆ ಮುನಿಯಪ್ಪ ಮುನಿಸು

ನಾನು 5 ವರ್ಷ ಮುಖ್ಯಮಂತ್ರಿ (Chief Minister) ಆಗಿದ್ದೆ. ಎಲ್ಲ ವರ್ಗದ ಜನರನ್ನ ಸಮಾನವಾಗಿ ಕಂಡಿದ್ದೆ, ಬಡವರ ಪರವಾಗಿದ್ದೆ. ನಾನು ಧರ್ಮದ ಆಧಾರದಲ್ಲಿ ಕೆಲಸ ಮಾಡಿಲ್ಲ. ಈ ದೇಶ ಬಹುತ್ವದ ದೇಶ, ಮನುಷ್ಯರ ಮತ್ತೊಬ್ಬ ಮನುಷ್ಯರನ್ನ ಪ್ರೀತಿಸಬೇಕು. ಆದ್ರೆ ಬಿಜೆಪಿ (BJP) ಧರ್ಮದ ಆಧಾರದಲ್ಲಿ ರಾಜಕೀಯ ಮಾಡ್ತಿದೆ. ಕಾಂಗ್ರೆಸ್ (Congress) ಸರ್ವಧರ್ಮದಲ್ಲಿ ಸಮಾನತೆ ಕಾಣುತ್ತಿದೆ ಎಂದರು. ಇದನ್ನೂ ಓದಿ: ಟಿಕೆಟ್ ಸಿಗದ್ದಕ್ಕೆ ಟವರ್ ಹತ್ತಿ ಬೆದರಿಕೆ ಹಾಕಿದ ಆಪ್ ಮುಖಂಡ

ನಾನು ನಾಮಿನೇಷನ್ ಹಾಕಬೇಕು ಅಂದಾಗ ಮತ್ತೆ ಚರ್ಚ್ ಗೆ ಬರುತ್ತೇನೆ ಎಂದರು. ಈ ವೇಳೆ ಸ್ಪರ್ಧೆ ಮಾಡಲೇಬೇಕು ಎಂದು ಮುಖಂಡರು ಸಿದ್ದರಾಮಯ್ಯ ಅವರಿಗೆ ಒತ್ತಾಯಿಸಿದರು.

Live Tv

Leave a Reply

Your email address will not be published. Required fields are marked *

Back to top button