ರಾಮನಗರ: ಡಿಕೆಶಿ ನಮ್ಮ ನಾಯಕರು, ನೋಟಿಸ್ ಕೊಡಲಿ. ಅವರಿಗೆ ಕ್ರಮ ತೆಗೆದುಕೊಳ್ಳುವ ಅಧಿಕಾರವಿದೆ ಎಂದು ರಾಮನಗರ ಶಾಸಕ ಇಕ್ಬಾಲ್ ಹುಸೇನ್ (Iqbal Hussain) ಹೇಳಿದ್ದಾರೆ.
ರಾಮನಗರದಲ್ಲಿ (Ramanagar) ಮಾಧ್ಯಮದವರೊಂದಿಗೆ ಕೆಪಿಸಿಸಿ (KPCC) ಅಧ್ಯಕ್ಷರಿಂದ ನೋಟಿಸ್ ಜಾರಿಯಾಗಿರುವ ವಿಚಾರ ಕುರಿತು ಮಾತನಾಡಿದ ಅವರು, ಡಿಕೆಶಿ ನಮ್ಮ ನಾಯಕರು, ನೋಟಿಸ್ ಕೊಡಲಿ. ಅವರು ಕೆಪಿಸಿಸಿ ಅಧ್ಯಕ್ಷರು, ಯಾರ ಮೇಲೆ ಬೇಕಾದರೂ ಕ್ರಮ ತೆಗೆದುಕೊಳ್ಳುವ ಶಕ್ತಿಯಿದೆ. ನಾನು ನನ್ನ ಹೇಳಿಕೆಗೆ ಬದ್ಧವಾಗಿದ್ದೇನೆ. I Stand By My Words. ಶಿಸ್ತನ್ನು ಉಲ್ಲಂಘನೆ ಮಾಡಬಾರದು ಎಂದು ನೋಟಿಸ್ ಕೊಟ್ಟಿದ್ದಾರೆ. ನನ್ನ ಅಭಿಪ್ರಾಯವನ್ನು ನಾನು ಹೈಕಮಾಂಡ್‌ಗೆ ತಿಳಿಸಿದ್ದೇನೆ. ಇನ್ಮುಂದೆ ಹೇಳಿಕೆ ಕೊಡಲ್ಲ ಎಂದು ಹೇಳಿದ್ದೇನೆ ಎಂದರು.ಇದನ್ನೂ ಓದಿ: ಶಿವಕುಮಾರ್ ಸಿಎಂ ಆಗ್ತಾರೆ ಎಂದಿದ್ದ ಇಕ್ಬಾಲ್ ಹುಸೇನ್‌ಗೆ ವಾರ್ನಿಂಗ್ – ಡಿಕೆಶಿಯಿಂದ ನೋಟಿಸ್
ಬೇರೆಯವರಿಗೆ ನೋಟಿಸ್ ಯಾಕೆ ಕೊಟ್ಟಿಲ್ಲ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನನ್ನ ಹಾಗೆ ಮಾತನಾಡಿದ ಎಲ್ಲರಿಗೂ ಯಾಕೆ ನೋಟಿಸ್ ಕೊಟ್ಟಿಲ್ಲ ಎಂದು ಅವರನ್ನೇ ಕೇಳಿ. ನನಗೆ ನೋಟಿಸ್ ಕೊಟ್ಟಿದ್ದಾರೆ ನಾನು ಉತ್ತರ ಕೊಡುತ್ತೇನೆ. ದೇವರಾಜ ಅರಸು ಬಿಟ್ಟರೆ ಸಿದ್ದರಾಮಯ್ಯ ಐದು ವರ್ಷಗಳ ಕಾಲ ಉತ್ತಮ ಆಡಳಿತ ಕೊಟ್ಟಿದ್ದಾರೆ. ಅವರ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ನಾನು ಕೂಡಾ ಸಿದ್ದರಾಮಯ್ಯಗೆ ಬಹಳ ಹತ್ತಿರದವನು. ಆದರೆ ಬೇರೆಯವರಿಗೂ ಒಂದು ಅವಕಾಶ ಸಿಗಲಿ ಎಂದು ನಾನು ಹೇಳುತ್ತಿದ್ದೇನೆ. ಒಟ್ಟು ಏಳೂವರೆ ವರ್ಷ ಸಿದ್ದರಾಮಯ್ಯ ಅಧಿಕಾರ ಅನುಭವಿಸಿದ್ದಾರೆ. ಡಿಕೆಶಿ ಕಷ್ಟಪಟ್ಟು ಹೋರಾಟ ಮಾಡಿ, ಪಕ್ಷ ಕಟ್ಟಿದ್ದಾರೆ. ಇವತ್ತಿನ ಪರಿಸ್ಥಿತಿಯಲ್ಲಿ ಅವರಿಗೆ ಅವಕಾಶ ಸಿಕ್ಕರೆ ಪಕ್ಷದಲ್ಲಿ ಮತ್ತಷ್ಟು ಬೆಳವಣಿಗೆ ಆಗುತ್ತದೆ ಎಂದು ತಿಳಿಸಿದರು.
ಇನ್ನೂ ಈ ವಿಚಾರವಾಗಿ ನಾನು ಪದೇ ಪದೇ ಮಾತನಾಡಲ್ಲ. ಈಗಾಗಲೇ ನಾನು ಪಕ್ಷದ ಶಿಸ್ತು ಉಲ್ಲಂಘನೆ ಮಾಡಿದ್ದೇನೆ. ಬೇರೆಯವರಿಗೆ ನೋಟಿಸ್ ಕೊಡ್ತಾರೋ ಇಲ್ವೋ ಗೊತ್ತಿಲ್ಲ. ನನಗೆ ನೋಟಿಸ್ ಕೊಟ್ಟ ಬಗ್ಗೆ ಹಲವು ಶಾಸಕರು ಪೋನ್ ಮಾಡಿ ಮಾತನಾಡಿದ್ದಾರೆ. ನನ್ನ ನಿರ್ಧಾರಕ್ಕೆ ನಾನು ಬದ್ಧವಾಗಿದ್ದೇನೆ. ಸುರ್ಜೇವಾಲಾ ಬಳಿ ಇದನ್ನೇ ತಿಳಿಸಿದ್ದೇನೆ. ಅವರು ಇದು ಹೈಕಮಾಂಡ್‌ಗೆ ಬಿಟ್ಟ ವಿಚಾರ, ನೀವು ಮಾತನಾಡಬೇಡಿ ಎಂದಿದ್ದಾರೆ ಎಂದರು.ಇದನ್ನೂ ಓದಿ: