ರಾಯ್ಪುರ್: ನನಗೆ ಬೆಂಬಲ ಕೊಡಿ.. ನಾನು ನಿಮಗೆ ಹಿಂದೂ ರಾಷ್ಟ್ರ (Hindu Nation) ಕೊಡುತ್ತೇನೆ ಎಂದು ಬಾಗೇಶ್ವರ ಧಾಮ (Bageshwar Dham) ಮುಖ್ಯಸ್ಥ ಧೀರೇಂದ್ರ ಶಾಸ್ತ್ರಿ (Dhirendra Shastri) ಹೇಳಿದ್ದಾರೆ. ಹಿಂದೂಗಳು ಬೆಂಬಲ ನೀಡಿ ಎಂದು ಕೇಳಿಕೊಂಡಿದ್ದಾರೆ.
ನೇತಾಜಿ ಸುಭಾಷ್ ಚಂದ್ರ ಬೋಸ್ (Netaji Subhash Chandra Bose) ಅವರು “ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ. ನೀವು ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ನೀಡುತ್ತೇನೆ” ಎಂಬ ಘೋಷಣೆ ನೀಡಿದ್ದರು. ಆದರೆ ಇಂದು ನಾವು ಹಿಂದೂ ರಾಷ್ಟ್ರ ಮಾಡಬೇಕಾಗಿದೆ. ಇಂದು ನಾನು ಒಂದು ಘೋಷಣೆಯನ್ನು ನೀಡುತ್ತೇನೆ. ನೀವು ನನ್ನನ್ನು ಬೆಂಬಲಿಸಿ, ನಾನು ನಿಮಗೆ ಹಿಂದೂ ರಾಷ್ಟ್ರವನ್ನು ನೀಡುತ್ತೇನೆ ಎಂದು ಶಾಸ್ತ್ರೀ ಹಿಂದೂಗಳಿಗೆ ಕರೆ ನೀಡಿದ್ದಾರೆ. ಇದನ್ನೂ ಓದಿ: ಹೈದರಾಬಾದ್ ವಿವಿ ಕ್ಯಾಂಪಸ್ನಲ್ಲಿ ಮೋದಿ ಕುರಿತ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನ – ತನಿಖೆಗೆ ಆದೇಶ
ಇದನ್ನು ಸಾಧಿಸಲು ಸನಾತನ ಧರ್ಮದ ಎಲ್ಲಾ ಜನರು ಒಗ್ಗೂಡಬೇಕು. ಒಟ್ಟಾಗಿ ಮುಂದೆ ಬರಬೇಕು. ಮೊದಲ ಪವಾಡವೆಂದರೆ ಇಂದು ಭಾರತದ ಹಿಂದೂಗಳು ಒಂದಾಗುತ್ತಿದ್ದಾರೆ. ಎರಡನೇ ಪವಾಡವನ್ನು ಬಾಗೇಶ್ವರ ಧಾಮದಲ್ಲಿ ನೋಡಬೇಕು. ನೀವೇ ಬಂದು ನೋಡಬೇಕು ಎಂದು ತಿಳಿಸಿದ್ದಾರೆ.
ಮೂರನೆಯ ಪವಾಡ ಏನೆಂದರೆ, ನಿಮ್ಮಲ್ಲಿ ಸನಾತನದ ಒಂದು ತುಣುಕಾದರೂ ಇದ್ದರೆ, ನೀವು ನನ್ನನ್ನು ಬೆಂಬಲಿಸಿ. ನಾನು ನಿಮಗೆ ಹಿಂದೂ ರಾಷ್ಟ್ರವನ್ನು ನೀಡುತ್ತೇನೆ. ನಾನು ರಾಜಕಾರಣಿಯಾಗಲು ಬಯಸುವುದಿಲ್ಲ. ನಾನು ಯಾವುದೇ ಪಕ್ಷವನ್ನು ಹೊಂದುವುದಿಲ್ಲ. ನಾನು ಯಾವುದೇ ಪಕ್ಷವನ್ನು ಬೆಂಬಲಿಸುವುದಿಲ್ಲ. ನಾವು ನಮ್ಮ ಸನಾತನವಾದಿಗಳನ್ನು ಒಗ್ಗೂಡಿಸುವ ಬಗ್ಗೆ ಮಾತ್ರ ಮಾತನಾಡಬೇಕಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಗಣರಾಜ್ಯೋತ್ಸವಕ್ಕೆ ಒಂದೇ ವಾರದಲ್ಲಿ ಕರ್ನಾಟಕದ ಟ್ಯಾಬ್ಲೋ ರೆಡಿ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k