ಬೆಂಗಳೂರು: ಸ್ಯಾಂಡಲ್‍ವುಡ್ ಕ್ರೇಜಿ ಕ್ವೀನ್ ರಕ್ಷಿತಾ ಅವರು ಮಾಧ್ಯಮಗಳ ಮೇಲೆ ಗರಂ ಆಗಿದ್ದ ವಿಚಾರವಾಗಿ ಪ್ರತಿಕ್ರಿಯಿಸಿ ನಾನು ಎಂದಿಗೂ ಮಾಧ್ಯಮಗಳನ್ನು ಗೌರವಿಸುತ್ತೇನೆ ಆದ್ರೆ ಮನಸ್ಸಿಗೆ ಬೇಸರವಾಗಿ ಅವರ ಮೇಲೆ ರೇಗಾಡಿಬಿಟ್ಟೆ ಎಂದು ಹೇಳಿದ್ದಾರೆ.
ಈ ಬಗ್ಗೆ ತಮ್ಮ ಫೇಸ್‍ಬುಕ್‍ನಲ್ಲಿ ರಕ್ಷಿತಾ ಬರೆದುಕೊಂಡಿದ್ದಾರೆ. ಶನಿವಾರದಂದು ಮಾಧ್ಯಮಗಳು ನಿರ್ದೇಶಕ ಪ್ರೇಮ್ ಅವರ ಚಿತ್ರದ ಬಗ್ಗೆ ರಕ್ಷಿತಾ ಅವರಿಗೆ ಪ್ರಶ್ನಿಸಿದಕ್ಕೆ ಅವರು ಕೋಪಗೊಂಡು ರೇಗಾಡಿದ್ದರು. ಈ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ರಕ್ಷಿತಾ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಮಾಧ್ಯಮಗಳನ್ನು ನಾನು ಗೌರವಿಸುತ್ತೇನೆ. ಆದ್ರೆ ಕೆಲವರು ನನ್ನ ಹಾಗೂ ಪ್ರೇಮ್ ಅವರ ಭಾವನೆಗಳನ್ನು ಹಾಗೂ ಕೆಲಸಗಳನ್ನು ಲೇವಡಿ ಮಾಡಿದ್ದು ಬಹಳ ನೋವಾಗಿದೆ. ಆದ್ದರಿಂದ ಮಾಧ್ಯಮಗಳ ಮೇಲೆ ಬೇಸರ ಹೊರಹಾಕಿದೆ ಎಂದಿದ್ದಾರೆ. ಅಲ್ಲದೆ ಈ ವಿಚಾರವಾಗಿ ತಮಗೆ ಬೆಂಬಲಿಸಿದ ಜನರಿಗೆ ಧನ್ಯವಾದಗಳನ್ನು ಸಹ ತಿಳಿಸಿದ್ದಾರೆ. ಇದನ್ನೂ ಓದಿ: ಪತಿ ಸಿನಿಮಾದ ಬಗ್ಗೆ ಪ್ರಶ್ನೆ ಮಾಡಿದಕ್ಕೆ ಮಾಧ್ಯಮದ ಮೇಲೆ ರಕ್ಷಿತಾ ಗರಂ
Advertisement
Advertisement
ಮಾಧ್ಯಮಗಳ ವಿರುದ್ಧ ಮಾತನಾಡಿದ್ದಕ್ಕೆ ನನ್ನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಮಾಡಿ ಅದಕ್ಕೆ ನನ್ನನ್ನು ಜನ ಟ್ಯಾಗ್ ಮಾಡುತ್ತಿದ್ದಾರೆ. ಆದ್ರೆ ನನ್ನನ್ನು ಬೆಳೆಸಿದ್ದು ಕರ್ನಾಟಕದ ಜನರು ಹಾಗೂ ಜವಬ್ದಾರಿಯುತ ಹಿರಿಯ ಪತ್ರಕರ್ತರು ಹಾಗೂ ಮಾಧ್ಯಮಗಳು. ಇವರೆಲ್ಲರನ್ನು ನಾನು ಸದಾ ಗೌರವಿಸುತ್ತೇನೆ. ನನ್ನ ಸ್ನೇಹಿತರಲ್ಲಿ ಬಹಳಷ್ಟು ಜನ ಪತ್ರಕರ್ತರಿದ್ದಾರೆ. ಅವರು ನನ್ನ ಕುಟುಂಬದವರಂತೆ ಹಾಗೂ ತನ್ನ ಆತ್ಮೀಯರು ಕೂಡ. ಅವರು ನನ್ನ ಆಲೋಚನೆಯನ್ನು ಹಾಗೂ ವ್ಯಕ್ತಿತ್ವವನ್ನು ಎಂದಿಗೂ ಗೌರವಿಸಿದ್ದಾರೆ ಎಂದು ಹೇಳಿದ್ದಾರೆ.
Advertisement
Advertisement
ಆದ್ರೆ ಯಾವಾಗ ಜನರು ನನ್ನ ಹಾಗೂ ಪ್ರೇಮ್ ಅವರ ಕೆಲಸಗಳ ಮೇಲೆ ಲೇವಡಿ ಮಾಡಿ ಪ್ರಶ್ನಿಸಿದಾಗ ನಮ್ಮ ಭಾವನೆಗಳಿಗೆ ನೋವಾಗಿದೆ. ವೈಯಕ್ತಿಕವಾಗಿ ಇದನ್ನೆಲ್ಲ ಯಾಕೆ ನಾನು ಸಹಿಕೊಳ್ಳಬೇಕು? ನಾನು ತುಂಬಾ ಮೃದು ಸ್ವಭಾವದವಳು. ನಾನು ಎಂದಿಗೂ ಯಾರನ್ನೂ ನೋಯಿಸಲು ಇಷ್ಟಪಡಲ್ಲ. ನಾನು ಪ್ರತಿಯೊಬ್ಬ ಪ್ರಜೆಯನ್ನೂ ಗೌರವಿಸುತ್ತೆನೆ. ಕೆಲವೊಮ್ಮೆ ಮನುಷ್ಯನಾಗಿ ಮನುಷ್ಯತ್ವವನ್ನು ತಿಳಿಯುವುದು ಬಹಳ ಮುಖ್ಯ. ಯಾವುದೇ ಮಾಧ್ಯಮಗಳಾದ್ರೂ ಸರಿ ನನ್ನ ಜೀವನದಲ್ಲಿ ವಿಶೇಷ ಸ್ಥಾನ ಪಡೆದಿದೆ. ನನ್ನೊಂದಿಗೆ ಸದಾ ಇದೆ. ನಾನು ಮಾಧ್ಯಮಗಳನ್ನು ಗೌರವಿಸುತ್ತೇನೆ, ಅವರು ಕೂಡ ನನ್ನನ್ನು ಗೌರವಿಸುತ್ತಾರೆ. ನನ್ನ ಭಾವನೆಗಳನ್ನು ಅರ್ಥಮಾಡಿಕೊಂಡು ನನಗೆ ಸಾಥ್ ನೀಡಿದ್ದಕ್ಕೆ ಸಮಸ್ತ ಕರ್ನಾಟಕ ಜನತೆಗೆ ಪ್ರೀತಿಯಿಂದ ಧನ್ಯವಾದಗಳು ಎಂದು ತಮ್ಮ ಫೇಸ್‍ಬುಕ್ ಖಾತೆಯಲ್ಲಿ ರಕ್ಷಿತಾ ಅವರು ಬರೆದುಕೊಂಡಿದ್ದಾರೆ.
https://www.facebook.com/raks5/posts/10210739070352909
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv