-1985ರಲ್ಲಿ ಲಾಟರಿಯಲ್ಲಿ ನನಗೆ ಸೈಟ್ ಬಂದಿದೆ ಎಂದ ಶಾಸಕ
ಮೈಸೂರು: ನನ್ನಂಥ ರಾಜಕಾರಣಿ (Politician) ಈ ರಾಜ್ಯದಲ್ಲಿ ಮಾತ್ರವಲ್ಲ, ದೇಶದಲ್ಲೇ ಯಾರೂ ಇಲ್ಲ. ನಾನು ಯಾವುದೇ ಭ್ರಷ್ಟಾಚಾರ (Corruption) ಮಾಡಿಲ್ಲ. ಸಾಲ ಮಾಡಿಕೊಂಡು ರಾಜಕಾರಣ ಮಾಡಿದ್ದೇನೆ ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ, ಶಾಸಕ ಜಿ.ಟಿ ದೇವೇಗೌಡ (GT Deve Gowda) ಹೇಳಿದ್ದಾರೆ.
ಮೈಸೂರಿನಲ್ಲಿ (Mysuru) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಗರಾಭಿವೃದ್ಧಿ ಸಚಿವರು ಜಿ.ಟಿ ದೇವೇಗೌಡರಿಗೆ ಮುಡಾ ಸೈಟ್ (MUDA Site) ಕೊಟ್ಟಿದ್ದೇವೆ ಎಂದು ಹೇಳಿದ್ದಾರೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ, ಗೃಹ ಮಂಡಳಿಯಲ್ಲಿ ನಾನು ಒಂದೇ ಒಂದು ನಿವೇಶನ ಪಡೆದಿಲ್ಲ. ನಾನು ಯಾವುದೇ ಚೌಟ್ರಿ, ಹೋಟೆಲ್, ವಿದ್ಯಾಸಂಸ್ಥೆ, ವಾಣಿಜ್ಯ ಕಟ್ಟಡ ಯಾವುದನ್ನೂ ಕಟ್ಟಿಲ್ಲ. ನನ್ನ ಸ್ವಂತ ಊರಲ್ಲಿ ಒಂದಿಷ್ಟು ಕೃಷಿ ಭೂಮಿ ಖರೀದಿ ಮಾಡಿದ್ದೇನೆ. ಅಲ್ಲಿ ಕೃಷಿ ಮಾಡುತ್ತಿದ್ದೇನೆ ಅಷ್ಟೇ ಎಂದು ಹೇಳಿದ್ದಾರೆ. ಇದನ್ನೂ ಓದಿ: ಎರಡು ಜಡೆ ಹಾಕದ್ದಕ್ಕೆ ವಿದ್ಯಾರ್ಥಿನಿಯರ ಕೂದಲಿಗೆ ಕತ್ತರಿ!
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಒಂದೇ ಒಂದು ನಿವೇಶನ ಪಡೆದಿಲ್ಲ. ಪ್ರಾಮಾಣಿಕವಾಗಿ ರಾಜಕೀಯ ಮಾಡಿದ್ದೇನೆ. 1985ರಲ್ಲಿ ಗೋವಿಂದರಾಜು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾಗ ಸೈಟ್‌ಗೆ ಅರ್ಜಿ ಹಾಕಿದ್ದೆ. ಆಗ ಲಾಟರಿಯಲ್ಲಿ ಒಂದು ಸೈಟ್ ಬಂದಿದೆ. ನಗರಾಭಿವೃದ್ಧಿ ಪ್ರಾಧಿಕಾರದ ಮಂತ್ರಿಗಳು ಜವಾಬ್ದಾರಿಯಿಂದ ಇಲಾಖೆ ನಡೆಸಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಮಾದಗಳ್ಳಿ, ಈರನಗೆರೆ ಜಮೀನು ವಿಚಾರದಲ್ಲಿ ರೈತರಿಗೆ ಪರಿಹಾರ ಕೊಡುವಂತೆ ಪತ್ರ ಕೊಟ್ಟಿದ್ದೇನೆ. ರೈತರು ಕೇಳಿದ್ದಕ್ಕೆ ಪತ್ರ ಕೊಟ್ಟಿದ್ದೆ ಅಷ್ಟೇ. ಸಚಿವರು ನಾನು ಕೊಟ್ಟ ಶಿಫಾರಸು ಪತ್ರ ನೋಡಿ ನನಗೆ ಸೈಟ್ ಕೊಟ್ಟಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: Paris Olympics 2024: ಚಿನ್ನಕ್ಕೆ ಗುರಿಯಿಟ್ಟ ಶೂಟರ್ – ಚೀನಾಗೆ ಮೊದಲ ಚಿನ್ನದ ಪದಕ
ಕಲೆಕ್ಷನ್ ಮಾಡಲು ಜೊತೆಗಿಟ್ಟುಕೊಂಡವರು ನೀಡಿದ ಮಾಹಿತಿ ನೋಡಿ ಸಚಿವರು ಸುಳ್ಳು ಆರೋಪ ಮಾಡಿದ್ದಾರೆ. ನಗರಾಭಿವೃದ್ಧಿ ಸಚಿವರ ಇಂತಹ ನಡವಳಿಕೆಯಿಂದ ಸಿಎಂಗೆ ಕಪ್ಪು ಮಸಿ ಬಿದ್ದಿದೆ. ನನಗೆ ಏಳು ದಿವಸದೊಳಗೆ ಸಚಿವರು ಈ ವಿಚಾರದಲ್ಲಿ ಸ್ಪಷ್ಟೀಕರಣ ಕೊಡಬೇಕು. ಇಲ್ಲದೇ ಇದ್ದರೆ ನಾನೇ ಸಚಿವರಿಗೆ ನೋಟಿಸ್ ಕೊಡುತ್ತೇನೆ. ಸಚಿವರು ನನಗೆ ಸೈಟ್ ಕೊಟ್ಟಿರುವ ಬಗ್ಗೆ ದಾಖಲೆ ಬಿಡುಗಡೆ ಮಾಡಬೇಕು. ಮಾತಾಡೋರೆಲ್ಲ ಸತ್ಯ ಹರಿಶ್ಚಂದ್ರರು ಆಗಿದ್ದಾರೆ. 50 ವರ್ಷದಲ್ಲಿ ನನ್ನ ಕುಟುಂಬದ ಆಸ್ತಿ ಎಷ್ಟಿದೆ. ನಿನ್ನೆ ಮೊನ್ನೆ ಶಾಸಕರಾದವರ ಆಸ್ತಿ ಎಷ್ಟಿದೆ? ಎಂಬ ಬಗ್ಗೆ ಧಮ್ ಇದ್ದರೆ ತನಿಖೆ ಮಾಡಿಸಿ. ಒಂದು ವಾರದಲ್ಲಿ ಸ್ಪಷ್ಟೀಕರಣ ಕೊಡದೇ ಇದ್ದರೆ ಸಚಿವರ ವಿರುದ್ಧ ಕಾನೂನಾತ್ಮಕ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಒಂದೂವರೆ ವರ್ಷದಲ್ಲಿ ಮನೆ ಮುರುಕರು ಯಾರು ಅಂತ ಜನರಿಗೆ ಗೊತ್ತಾಗಿದೆ: ಬೊಮ್ಮಾಯಿ ಕಿಡಿ
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನ ತಪ್ಪಿದ ಕುರಿತು ಪ್ರತಿಕ್ರಿಯಿಸಿ, ಎಲ್ಲರೂ ಒಕ್ಕಲಿಗರೇ ಆಗುತ್ತಾರೆಂದು ಕುರುಬ ಸಮುದಾಯದವರಿಗೆ ಸ್ಥಾನ ನೀಡಲಾಗಿದೆ. ರಾಷ್ಟ್ರೀಯ ಅಧ್ಯಕ್ಷರು, ರಾಜ್ಯಾಧ್ಯಕ್ಷರು ಒಕ್ಕಲಿಗರೇ ಆಗಿದ್ದಾರೆ. ಈಗ ಜೆಡಿಎಸ್ ಶಾಸಕಾಂಗ ಪಕ್ಷ ಸ್ಥಾನ ನೀಡಿದರೆ ಹೇಗೆ? ಎಲ್ಲಾ ಸಮುದಾಯಕ್ಕೂ ಸಾಮಾಜಿಕ ನ್ಯಾಯ ನೀಡಬೇಕು. ಹಾಗಾಗಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕನಾಗಿ ಅಹಿಂದ ಸಮುದಾಯಕ್ಕೆ ಸೇರುವ ಕುರುಬ ಸಮುದಾಯಕ್ಕೆ ನೀಡಿದ್ದಾರೆ. ನಾನೇ ಅವರನ್ನು ಅಭಿನಂಧಿಸಿದ್ದೇನೆ. ಇದರಲ್ಲಿ ನನಗೆ ಯಾವ ಬೇಸರವೂ ಇಲ್ಲ. ನನಗೆ ಯಾಕೆ ತಪ್ಪಿತು ಎಂದು ಈಗ ಹೋಗಿ ನಾನು ಕೇಳಲು ಆಗುತ್ತಾ? ಈಗ ಕುಮಾರಸ್ವಾಮಿ ಕೇಂದ್ರ ಮಂತ್ರಿ. ಅವರನ್ನ ಯಾಕೆ, ಏನು ಎಂದು ಪ್ರಶ್ನೆ ಮಾಡಲು ಸಾಧ್ಯನಾ? ಕುಮಾರಸ್ವಾಮಿ ದೊಡ್ಡವರು ಎಂದು ಮಾರ್ಮಿಕವಾಗಿ ಉತ್ತರಿಸಿದರು. ಇದನ್ನೂ ಓದಿ: ಮಾತನಾಡುವ ವೇಳೆ ಮೈಕ್ ಮ್ಯೂಟ್ – ಮಮತಾ ಆರೋಪ ಸುಳ್ಳೆಂದ ಪಿಐಬಿ ಫ್ಯಾಕ್ಟ್ ಚೆಕ್