ಧರ್ಮಶಾಲಾ: ನಾನು ಮನೆಯಲ್ಲಿ ಕುಳಿತು ಸುಮ್ಮನೆ ಹಾಕಿದ ಫೋಟೋ ಧೋನಿ ಅವರ ವಿಚಾರದಲ್ಲಿ ಇಷ್ಟು ದೊಡ್ಡ ಸುದ್ದಿಯಾಗುತ್ತದೆ ಎಂದು ನನಗೆ ಗೊತ್ತಿರಲಿಲ್ಲ ಎಂದು ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ವಿರಾಟ್ ಕೊಹ್ಲಿ ಅವರು ಸೆಪ್ಟೆಂಬರ್ 12 ರಂದು 2016ರ ಟ್ವೆಂಟಿ-20 ಐಸಿಸಿ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಧೋನಿ ಅವರ ಜೊತೆ ಇರುವ ಫೋಟೋವನ್ನು ಟ್ವೀಟ್ ಮಾಡಿ ಇದು ನಾನು ಎಂದಿಗೂ ಮರೆಯಲಾಗದ ಪಂದ್ಯ ಎಂದು ಬರೆದುಕೊಂಡಿದ್ದರು. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಧೋನಿ ನಿವೃತ್ತಿ ಹೊಂದುತ್ತಾರೆ. ಅದಕ್ಕೆ ವಿರಾಟ್ ಈ ರೀತಿ ಫೋಟೋ ಹಾಕಿದ್ದಾರೆ ಎಂದು ಸುದ್ದಿಯಾಗಿತ್ತು.
Advertisement
A game I can never forget. Special night. This man, made me run like in a fitness test ???? @msdhoni ???????? pic.twitter.com/pzkr5zn4pG
— Virat Kohli (@imVkohli) September 12, 2019
Advertisement
ಈಗ ಈ ವಿಚಾರ ಬಗ್ಗೆ ಸ್ಪಷ್ಟನೆ ನೀಡಿರುವ ಕೊಹ್ಲಿ, ನಾನು ಪೋಸ್ಟ್ ಮಾಡಿರುವ ಫೋಟೋದಲ್ಲಿ ಆ ರೀತಿಯ ಮಾಹಿತಿ ಇರಲಿಲ್ಲ. ನನಗೆ ಗೊತ್ತಿಲ್ಲ ಏಕೆ ಆ ಫೋಟೋ ಅಷ್ಟೊಂದು ದೊಡ್ಡ ಸುದ್ದಿಯಾಗಿತ್ತು? ನಾನು ಮನೆಯಲ್ಲಿ ಕುಳಿತು ಸುಮ್ಮನೆ ಹಾಕಿದ ಫೋಟೋ ಇಷ್ಟು ದೊಡ್ಡ ಸುದ್ದಿಯಾಗಿದೆ ಎಂದರೆ ನನಗೆ ನಂಬಲು ಆಗುತ್ತಿಲ್ಲ ಎಂದು ಹೇಳಿದ್ದಾರೆ.
Advertisement
ನಾನು ಆ ಫೋಟೋವನ್ನು ಹಾಕುವಾಗ ನನ್ನ ಮನಸ್ಸಿನಲ್ಲಿ ಏನೂ ಇರಲಿಲ್ಲ. ನಾನು ಸುಮ್ಮನೇ ಹಾಕಿದ್ದು, ಆದರೆ ಅದು ಬೇರೆ ರೂಪ ಪಡೆದು ದೊಡ್ಡ ಸುದ್ದಿಯಾಗಿದೆ. ಇದರಿಂದ ನನಗೆ ತಿಳಿದಿದ್ದು ಏನೆಂದರೆ ನಾವು ಯೋಚಿಸಿದಕ್ಕೂ ವಿಭಿನ್ನವಾಗಿ ಜನರು ಯೋಚಿಸುತ್ತಾರೆ ಮತ್ತು ಅವರು ಯಾವುದು ಸತ್ಯ ಅಲ್ಲವೋ ಈ ಜಾಗಕ್ಕೆ ನಮ್ಮನ್ನು ಕರೆದುಕೊಂಡು ಹೋಗುತ್ತಾರೆ. ನಾನು ಆಟದ ಬಗ್ಗೆ ಏನನ್ನೂ ಹೇಳಿಲ್ಲ. ನಾನು ಸುಮ್ಮನೆ ಏನೋ ಬರೆದಿದ್ದೆ ಎಂದು ಹೇಳಿದ್ದಾರೆ. ಇದನ್ನು ಓದಿ:ಧೋನಿ ವೃತ್ತಿ ಜೀವನದ ವಿಶೇಷ ದಿನ ಸೆ.14- ನೆಟ್ಟಿಗರಿಂದ ಪ್ರಶಂಸೆ
Advertisement
ನಡೆದಿದ್ದೇನು?
2016ರ ಟ್ವೆಂಟಿ-20 ಐಸಿಸಿ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದ ಫೋಟೋವನ್ನು ಟ್ವೀಟ್ ಮಾಡಿದ್ದ ವಿರಾಟ್ ಕೊಹ್ಲಿ, ಇದು ನಾನು ಎಂದಿಗೂ ಮರೆಯಲಾಗದ ಪಂದ್ಯ. ಅದು ವಿಶೇಷ ರಾತ್ರಿ. ಈ ವ್ಯಕ್ತಿ, ಫಿಟ್‍ನೆಸ್ ಟೆಸ್ಟ್ ಗೆ ಓಡುವಂತೆ ನನ್ನನ್ನು ಓಡಿಸಿದರು ಎಂದು ಧೋನಿ ಜೊತೆ ಇರುವ ಫೋಟೋ ಹಾಕಿ ಬರೆದುಕೊಂಡಿದ್ದರು. ಈ ವಿಚಾರ ಬೇರೆ ರೂಪ ಪಡೆದು ಧೋನಿ ಅವರು ನಿವೃತ್ತಿ ಘೋಷಣೆ ಮಾಡುತ್ತಾರೆ ಎಂದು ಸುದ್ದಿಯಾಗಿತ್ತು.
Its called rumours !
— Sakshi Singh ????????❤️ (@SaakshiSRawat) September 12, 2019
ಈ ವಿಚಾರವಾಗಿ ಸ್ಪಷ್ಟನೆ ನೀಡಿದ್ದ ಧೋನಿ ಪತ್ನಿ ಸಾಕ್ಷಿ ಧೋನಿ ಅವರು, ಇದನ್ನು ವದಂತಿ ಅಂತ ಕರೆಯಬಹುದು ಎಂದು ಟ್ವೀಟ್ ಮಾಡಿದ್ದರು. ಇದಕ್ಕೂ ಮುನ್ನ ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದ ಬಿಸಿಸಿಐ ಆಯ್ಕೆ ಸಮಿತಿಯ ಮುಖ್ಯಸ್ಥ ಎಂಎಸ್‍ಕೆ ಪ್ರಸಾದ್ ಅವರು, ಇಂತಹ ಬೆಳವಣಿಗೆಯ ಬಗ್ಗೆ ಬಿಸಿಸಿಐಗೆ ಯಾವುದೇ ಮಾಹಿತಿ ಲಭಿಸಿಲ್ಲ. ಇದು ಗಾಳಿ ಸುದ್ದಿ ಎಂದು ಸ್ಪಷ್ಟನೆ ನೀಡಿದ್ದರು.