ಬೀದರ್: ಇಬ್ಬರಿಗೂ ಕೈಮುಗಿದು ಪ್ರಾರ್ಥನೆ ಮಾಡುತ್ತೇನೆ, ಇಲ್ಲಿಗೆ ಡಾಗ್ ವಾರ್ ನಿಲ್ಲಿಸಿ ಬಿಡಿ ಪ್ಲಿಸ್ ಎಂದು ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಅವರಿಗೆ ಜೆಡಿಎಸ್ (JDS) ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ (CM Ibrahim) ವ್ಯಂಗ್ಯವಾಗಿ ಮನವಿ ಮಾಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಎರಡು ರಾಷ್ಟ್ರೀಯ ಪಕ್ಷಗಳಿಗೆ ತಲೆ ಕೆಟ್ಟಿದೆ. ಸಿಎಂ ಬಸವರಾಜ ಬೊಮ್ಮಾಯಿ ವಯಸ್ಸಿನಲ್ಲಿ ಸಣ್ಣವರು, ಸಿದ್ದರಾಮಯ್ಯ ದೊಡ್ಡವರಿದ್ದಾರೆ. ಹೀಗಾಗಿ ನಾನು ಮನವಿ ಮಾಡುತ್ತೆನೆ, ಎಲೆಕ್ಷನ್‌ಗೆ ಇನ್ನು 4 ತಿಂಗಳು ಇದೆ. ಪ್ರಣಾಳಿಕೆಗೆ ನಾವು ಏನು ಮಾಡಬೇಕು ಎಂಬುದನ್ನು ನೋಡೋಣ, ಚುನಾವಣೆಗೆ ಗಮನ ಕೊಡೋಣ ಎಂದರು.
Advertisement
Advertisement
ಬಿಜೆಪಿ-ಕಾಂಗ್ರೆಸ್ ನಡುವೆ ವಾರ್ ನಡೆಯುತ್ತಿದ್ದು, ಕಾಂಗ್ರೆಸ್ ಒಳಗಡೆಯೂ ಕೂಡಾ ವಾರ್ ನಡೆಯುತ್ತಿದೆ. ಇನ್ನೂ 2 ರಾಷ್ಟ್ರೀಯ ಪಕ್ಷಗಳು ಸಿಎಂ ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ. ನಾವು ಸಿಎಂ ಹಾಗೂ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದೇವೆ. ನೀವು ಡಾಗ್ ವಾರ್ ಮಾಡುತ್ತಿದ್ದೀರಲ್ಲಾ? ನಿಮ್ಮ ಸಿಎಂ ಯಾರು ಎಂದು ಹೇಳಿ ನೋಡೋಣ. ಚುನಾವಣೆಗೆ 4 ತಿಂಗಳು ಉಳಿದಿದ್ದು, ಬಿಜೆಪಿ ಲಗೇಜ್ ಕಟ್ಟಿಕೊಳ್ಳುತ್ತಿದೆ ಎಂದು ಇಬ್ರಾಹಿಂ ಟಾಂಗ್ ನೀಡಿದರು. ಇದನ್ನೂ ಓದಿ: ನನ್ನನ್ನ `ಟಗರು’ ಅಂತಾರೆ, ನಾನು ಯಾರಿಗೆ ಗುಮ್ಮಿದ್ದೇನೆ – ಸಿದ್ದು ಪ್ರಶ್ನೆ
Advertisement
Advertisement
ಮೀಸಲಾತಿ ಕೊಟ್ಟವರಿಗೆ, ತಗೆದುಕೊಂಡವರಿಗೆ ಇಬ್ಬರಿಗೂ ಅದರ ಬಗ್ಗೆ ಗೊತ್ತಿಲ್ಲ. ಇದು ಇತಿಹಾಸದಲ್ಲೇ ಮೊದಲ ಬಾರಿಗೆ ಮೀಸಲಾತಿ ನೀಡಿದ್ದು. ಇದು ಎಲೆಕ್ಷನ್ ಗಿಮಿಕ್ ಆಗಿದೆ ಎಂದು ಸಿಎಂ ಇಬ್ರಾಹಿಂ ಎರಡು ರಾಷ್ಟ್ರೀಯ ಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ನಾಯಿಮರಿ ಹೇಳಿಕೆಯನ್ನು ಸಮರ್ಥಿಸಿಕೊಂಡ ಸಿದ್ದರಾಮಯ್ಯ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k