ಬಾಲಿವುಡ್ ನಟ ರಣ್‌ವೀರ್ ಸಿಂಗ್ ನಗ್ನ ಫೋಟೋಶೂಟ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದರು. ಬಳಿಕ ರಣ್‌ವೀರ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ಮುಂದೆ ನಟ ರಣ್‌ವೀರ್ ಹಾಜರಾಗಿದ್ದಾರೆ.
ಹಿಂದಿ ಚಿತ್ರರಂಗದಲ್ಲಿ ನಂಬರ್ ಒನ್ ಸ್ಟಾರ್‌ಗಳಲ್ಲಿ ಒಬ್ಬರಾಗಿರುವ ರಣ್‌ವೀರ್ ಸಿಂಗ್ ಬೆತ್ತಲೆ ಫೋಟೋಶೂಟ್ ಪ್ರಕರಣ ಠಾಣೆ ಮೆಟ್ಟಿಲೇರುವಂತೆ ಮಾಡಿದೆ. ರಣ್‌ವೀರ್ ಬೆತ್ತಲೆ ಫೋಟೋಗೆ ಸಾಕಷ್ಟು ಜನ ಧ್ವನಿ ಎತ್ತಿದ್ದರು. ಆದರೆ ಬಾಲಿವುಡ್‌ನ ಸಾಕಷ್ಟು ಸ್ಟಾರ್ಸ್ ರಣ್‌ವೀರ್ ಸಿಂಗ್ ಪರ ನಿಂತು ಧ್ವನಿಗೂಡಿಸಿದ್ದರು.
ನಗ್ನ ಫೋಟೋಶೂಟ್ ವಿವಾದದ ಬೆನ್ನಲ್ಲೇ ರಣ್‌ವೀರ್ ಸಿಂಗ್ ಮೇಲೆ ಪ್ರಕರಣ ದಾಖಲಾಗಿತ್ತು. ಮುಂಬೈ ಎನ್.ಜಿ.ಓ ಸಂಸ್ಥೆಯೊಂದು ನಟ ದೂರು ದಾಖಲಿಸಿತ್ತು. ಇದೊಂದು ಮಹಿಳೆಯರಿಗೆ ಅವಮಾನ ಎಂದು ಪ್ರಕರಣ ದಾಖಲಾಗಿತ್ತು. ಇನ್ನು ಆಗಸ್ಟ್ 22ರಂದು ಪೊಲೀಸರ ಮುಂದೆ ಹಾಜರಾಗುವಂತೆ ಸೂಚಿಸಿದ್ದರು. ಶೂಟಿಂಗ್ ನಿಮಿತ್ತ ರಣ್‌ವೀರ್ ಗೈರಾಗಿದ್ದರು. ಈಗ ಸೋಮವಾರ (ಆಗಸ್ಟ್ 29)ರಂದು ಮುಂಬೈ ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ. ಇದನ್ನೂ ಓದಿ:ನಟ ಕಮಾಲ್ ಖಾನ್ ಗೆ 14 ದಿನಗಳ ನ್ಯಾಯಾಂಗ ಬಂಧನ: ಕಣ್ಣೀರಿಟ್ಟ ಖಾನ್
ರಣ್‌ವೀರ್ ಸಿಂಗ್ ಮುಂಬೈ ಪೊಲೀಸ್ ಠಾಣೆಗೆ ಆಗಮನಿಸಿ, ಬೆತ್ತಲೆ ಫೋಟೋಶೂಟ್ ಕುರಿತು ಹೇಳಿಕೆ ನೀಡಿದ್ದಾರೆ. ನಾನು ವಿವಾದಾತ್ಮಕ ಫೋಟೋಶೂಟ್ ಅಪ್‌ಲೋಡ್ ಮಾಡಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. ಬೆತ್ತಲೆ ಫೋಟೋಶೂಟ್‌ನಿಂದ ನನಗೆ ತೊಂದರೆ ಉಂಟಾಗುತ್ತದೆ ಎಂದು ತಿಳಿದಿರಲಿಲ್ಲ ಎಂದು ನಟ ಹೇಳಿಕೆ ನೀಡಿದ್ದಾರೆ.
Live Tv
[brid partner=56869869 player=32851 video=960834 autoplay=true]