ಮೈಸೂರು: ಇಂತಹ ಕೆಟ್ಟ, ದುರಾಡಳಿತ, ಭ್ರಷ್ಟಾಚಾರದ ಸರ್ಕಾರವನ್ನು ಇದುವರೆಗೂ ನಾನು ನೋಡಿರಲಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಕಿಡಿಕಾರಿದರು.
ಮೈಸೂರಿನ ಶಾರದ ದೇವಿನಗರದ ತಮ್ಮ ನಿವಾಸದಲ್ಲಿ ಸಿದ್ದರಾಮಯ್ಯ ಅವರು ಸುದ್ದಿಗೋಷ್ಠಿ ನಡೆಸಿದ್ದು, ಬಿಜೆಪಿ ಅವರು ನಾಚಿಗೆಟ್ಟವರು. 40% ಕಮಿಷನ್ ಪಡೆದಿದೆ. ಈ ಕುರಿತು ಸ್ವತಃ ಕಾಂಟ್ರಾಕ್ಟರ್ ಗಳೇ ಪತ್ರ ಬರೆದಿದ್ದಾರೆ. ಆದರೆ ಪ್ರಧಾನಿ ನರೇಂದ್ರ ಮೋದಿ ನಾ ಕಾವುಂಗ, ಕಾನೇ ನಾ ದೂಂಗ(ಭ್ರಷ್ಟಚಾರ ಮಾಡಲ್ಲ, ಮಾಡಲು ಬಿಡುವುದಿಲ್ಲ) ಅಂತಾರೆ. ಕೊರೊನಾದಿಂದ ಮೃತಪಟ್ಟವರಿಗೆ ಪರಿಹಾರ ಕೊಟ್ರು ಎಂದ್ರು. ಅದರಲ್ಲು ಸುಳ್ಳು ಹೇಳಿ ಜನರಿಗೆ ಮೋಸ ಮಾಡಿದ್ರು ಎಂದು ಆಶ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಹೆಂಡ್ತಿ ಇಲ್ಲ ಅಂತ ಎರಡನೇ ಮದುವೆ- ಈಕೆಗೆ ಇವನು ನಾಲ್ಕನೆಯವನು!
Advertisement
Advertisement
ಈ ಸರ್ಕಾರ ಕೊರೊನಾ ಸಾವಿನ ಲೆಕ್ಕದಲ್ಲಿಯೂ ಸುಳ್ಳು ಹೇಳಿದ್ರು. ಇಡೀ ದೇಶದಲ್ಲಿ 50 ಲಕ್ಷ ಜನರು ಸತ್ರು. ಕರ್ನಾಟಕದಲ್ಲಿ ಸುಮಾರು ನಾಲ್ಕು ಲಕ್ಷ ಜನರು ಸತ್ರು. ವಾಕ್ಸಿನ್ ಕೊಡಿ ಅಂದ್ರೆ ಜಾಗಟೆ ಹೊಡಿರಿ, ಚಪ್ಪಾಳೆ ಹೊಡಿರಿ ಅಂದ್ರು. ಮೌಢ್ಯಗಳನ್ನ ಬಿತ್ತಿ ಸಾಕಷ್ಟು ಲಂಚ ಹೊಡೆದ್ರು. ಇವತ್ತು ಲಂಚ ಇಲ್ಲದೆ ಅಧಿಕಾರಿಗಳ ಟ್ರಾನ್ಸ್‍ಫರ್ ಇಲ್ಲ. ಎಲ್ಲ ಕಡೆ ಲಂಚ.. ಲಂಚ.. ಈ ಸರ್ಕಾರದವೇ ಲಂಚ. ವೈದ್ಯರು ಹೆಚ್ಚುವರಿ ಕೆಲಸ ಮಾಡಿದ್ರೆ ಹಣ ಕೊಡ್ತಿವಿ ಅಂದ್ರು. ಆ ಹಣವನ್ನು ಸಹ ಸರ್ಕಾರ ಕೊಟ್ಟಿಲ್ಲ. ಮಾತೆತ್ತಿದ್ರೆ ಖಜಾನೆ ಖಾಲಿ ಅಂತಾರೆ ಎಂದು ಕಿಡಿಕಾರಿದರು.
Advertisement
Advertisement
ಇಂತಹ ಕೆಟ್ಟ, ದುರಾಡಳಿತ, ಭ್ರಷ್ಟಾಚಾರದ ಸರ್ಕಾರವನ್ನು ಇದುವರೆಗೂ ನಾನು ನೋಡಿರಲಿಲ್ಲ. ನಾವು ತಪ್ಪು ಮಾಡಿದ್ದರೆ ನಮಗೂ ಶಿಕ್ಷೆ ಆಗಲಿ. ನಮ್ಮ ಸರ್ಕಾರದ ಅವಧಿಯಲ್ಲಿ ಲೋಪವಾಗಿದ್ದರೆ ಪತ್ತೆ ಮಾಡಿ. ಬಿಜೆಪಿ ಕಾಲದಲ್ಲಿ ಅಂಬಾನಿ ಏಷ್ಯಾದಲ್ಲೇ ನಂಬನ್ ಒನ್ ಶ್ರೀಮಂತ ಆಗಿದ್ದಾನೆ. ಬಡ ಬೋರೇಗೌಡ ಶ್ರೀಮಂತ ಆಗಿದ್ದಾನಾ? ಎಂದು ಪ್ರಶ್ನಿಸಿದರು. ಕಳೆದ ಮೂರೂವರೆ ವರ್ಷದಲ್ಲಿ ಬಡವರಿಗೆ ಒಂದೇ ಒಂದು ಮನೆ ವಿತರಣೆ ಮಾಡಿಲ್ಲ. ನಾನು ಸಿಎಂ ಆಗಿದ್ದಾಗ ವರ್ಷಕ್ಕೆ 3 ಲಕ್ಷ ಮನೆಗಳಂತೆ ಐದು ವರ್ಷದಲ್ಲಿ 15 ಲಕ್ಷ ಮನೆ ನೀಡಿದ್ದೇನೆ. ಯಾವುದೇ ಅಭಿವೃದ್ಧಿ ಕಾರ್ಯ ಮಾಡದಿದ್ದರೂ, ಅಭಿವೃದ್ಧಿಗೆ ವೋಟು ಕೊಡಿ ಎಂದು ಕೇಳುತ್ತಿದ್ದಾರೆ ಎಂದು ಟೀಕಿಸಿದರು. ಇದನ್ನೂ ಓದಿ: ಏಳಕ್ಕೆ ಏಳು ಜೆಡಿಎಸ್ ಶಾಸಕರಿದ್ದರೂ ಮಂಡ್ಯ ಅಭಿವೃದ್ಧಿಯಾಗಿಲ್ಲ ಯಾಕೆ: ಸಿದ್ದರಾಮಯ್ಯ
ಇತ್ತೀಚೆಗೆ ಸುರಿದ ಮಳೆಯಿಂದ 6 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದರೂ, ಇದುವರೆಗೂ ಸರ್ವೇ ಮಾಡಿಸಿಲ್ಲ, ಸೂಕ್ತ ಪರಿಹಾರ ಕೊಟ್ಟಿಲ್ಲ. ರಾಜ್ಯದಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಈ ವಿಚಾರ ಹೇಳಿದರೆ ಅದಕ್ಕೂ ರಾಜಕೀಯ ಬಣ್ಣ ಕಟ್ಟುತ್ತಾರೆ ಎಂದು ತಿರುಗೇಟು ನೀಡಿದರು.
ಈ ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್, ಪರಿಷತ್ ಅಭ್ಯರ್ಥಿ ತಿಮ್ಮಯ್ಯ ಸೇರಿ ಹಲವರ ಉಪಸ್ಥಿತರಿದ್ದು, ಡಿ.10ಕ್ಕೆ ಮತದಾನ ಇದೆ ಎಲ್ಲರು ಮತದಾನ ಮಾಡಿ ಎಂದು ಮನವಿ ಮಾಡಿಕೊಂಡರು.