ಬಾಗಲಕೋಟೆ: ಪಹಲ್ಗಾಮ್ ದಾಳಿಯಲ್ಲಿ ಉಗ್ರರು (Pahalgam Terror Attack) ಹಿಂದೂಗಳನ್ನ ಹುಡುಕಿ ಹುಡುಕಿ ಕೊಂದ್ರು ಎಂಬ ಆರೋಪಕ್ಕೆ ಆಕ್ಷೇಪವೆತ್ತಿದ್ದ ಸಚಿವ ಆರ್‌ಬಿ ತಿಮ್ಮಾಪುರ (RB Timmapur), ಧರ್ಮ ನೋಡಿ ಹೊಡೆದಿಲ್ಲ ಎಂದು ನಾನು ಹೇಳಿಯೇ ಇಲ್ಲ ಎಂದು ಇದೀಗ ಯೂ ಟರ್ನ್ ಹೊಡೆದಿದ್ದಾರೆ.
ಬಾಗಲಕೋಟೆ (Bagalkote) ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಖಡಾಖಂಡಿತವಾಗಿ ಹಾಗೆ ಮಾಡಿಲ್ಲ ಎಂದು ಹೇಳಿಲ್ಲ. ನಾನು ನೋಡಿದ ಟಿವಿ ಚಾನೆಲ್‌ಗಳಲ್ಲಿ ಅದು ಬಂದಿರಲಿಲ್ಲ. ಹಾಗಾಗಿ ನಾನು ಸಂಶಯ ವ್ಯಕ್ತಪಡಿಸಿದ್ದೇನೆ ವಿನಃ ಹಿಂದೂಗಳನ್ನು ನೋಡಿ ಮಾಡಿಲ್ಲ ಎಂದು ನಾನು ಹೇಳಿಲ್ಲ. ನಾನು ಭಯೋತ್ಪಾದಕರ ಪರವಾಗಿಯೇ ಮಾತನಾಡಿದ್ದೇನೆ ಎಂಬ ರೀತಿ ಬಿಂಬಿತವಾಗಿದೆ. ನಾನು ಭಯೋತ್ಪಾದನೆಯನ್ನು ಖಂಡನೆ ಮಾಡುತ್ತೇನೆ ಎಂದರು. ಇದನ್ನೂ ಓದಿ: ಪಹಲ್ಗಾಮ್ ಉಗ್ರರ ದಾಳಿ – ಕೇಂದ್ರದ ನಿರ್ಧಾರಕ್ಕೆ ನಮ್ಮ ಸಹಕಾರವಿದೆ: ದೇವೇಗೌಡ
ಅಲ್ಲಿನ ಪ್ರವಾಸಿಗರಿಗೆ ರಕ್ಷಣೆ ಕೊಡೋದು ನಮ್ಮ ಧರ್ಮ. ಅದು ಪಾಲನೆಯಾಗಿಲ್ಲ ಎಂಬ ನೋವಿದೆ. ನಾವು ಎಲ್ಲರೂ ದೇಶದ ಪಕ್ಷ, ಪಂಗಡ, ರಾಜಕಾರಣ ತರದೇ ಎಲ್ಲರೂ ಒಗ್ಗಟ್ಟಾಗಿ ಎದುರಿಸಬೇಕೆ ವಿನಃ ಅದರಲ್ಲಿ ಸಣ್ಣಪುಟ್ಟ ವಿಷಯಗಳನ್ನ ತರುವುದು ದೇಶಕ್ಕೆ ಒಳ್ಳೆಯದಲ್ಲ. ಧರ್ಮ ನೋಡಿ ಹೊಡಿದಿಲ್ಲ ಎಂದು ನಾನು ಹೇಳಿಯೇ ಇಲ್ಲ. ನಾನು ಕಾರವಾರದ ಘಟನೆ ಬಗ್ಗೆ ಹೇಳಿದೆ. ಕಾರವಾರದಲ್ಲಿ ಹಿಂದೂ ಕೊಲೆ ಆಯ್ತು ಅಂದ್ರು, ನಂತರ ಸಹಜ ಸಾವು ಅಂತಾ ಬಂತು. ಹಾಗೆಯೇ ಇಂತಹದರಲ್ಲಿ ರಾಜಕಾರಣ ಬೇಡ ಅಂದಿದ್ದೆ. ನಾನು ನೋಡಿದ ಚಾನೆಲ್ ಪ್ರಕಾರ ನನಗೆ ಡೌಟ್ ಇದೆ ಅಂತಾ ಹೇಳಿದ್ದೆ ಎಂದು ತಿಳಿಸಿದರು. ಇದನ್ನೂ ಓದಿ: Kolar | ಮನೆಯಲ್ಲಿ ಬುದ್ಧಿವಾದ ಹೇಳಿದ್ದಕ್ಕೆ ವ್ಯಕ್ತಿ ನೇಣಿಗೆ ಶರಣು
ಪಾಕ್ ಮೇಲೆ ಯುದ್ಧ ಬೇಕೋ ಬೇಡವೋ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಇದು ದೇಶದ ಪರಿಸ್ಥಿತಿ ಇದೆ. ನಮ್ಮ ದೇಶದ ಪ್ರಧಾನಿಗಳು ನಿರ್ಧರಿಸಲಿ. ನಾವೆಲ್ಲ ಬದ್ಧತೆ ತೋರಿಸಬೇಕಲ್ಲ. ಯುದ್ಧ ಎಷ್ಟರಮಟ್ಟಿಗೆ ಬೇಕು ಬೇಡಾ ಎಂದು ಯೋಚನೆ ಮಾಡಿ ಅಂತಾ ಹೇಳಿರಬೇಕೆ ವಿನಃ ಯುದ್ಧ ಬೇಡ ಅಂತಾ ಯಾರೂ ಹೇಳಲ್ಲ. ಬೇಹುಗಾರಿಕೆಯನ್ನ ಬಲಪಡಿಸಲಿ. ನಾಗರಿಕರು ಹಾಗೂ ಪ್ರವಾಸಿಗರ ಮೇಲೆ ಈ ರೀತಿ ಆದರೆ ಹೇಗೆ? ಈಗ ಹೋಗಿ ನಾವು ಹೊಡೆದು ಹಾಕಿದ್ದೇವೆ ಅಂದ್ರೆ ಹೇಗೆ?
ನಾನು ಈ ಹಿಂದೆಯೂ ಹೇಳಿದ್ದೆ, ಪುಲ್ವಾಮಾ ಏನಾಯ್ತು ಅಂತಾ ಹೇಳಿದ್ದೇನೆ. ಈ ದೇಶದ ವಿಚಾರದಲ್ಲಿ ಎಲ್ಲರೂ ಒಂದಾಗಿ ಕೆಲಸ ಮಾಡಬೇಕಿದೆ ವಿನಃ ರಾಜಕಾರಣ ಬೇಡ ಎಂದಿದ್ದೇನೆ. ಅದನ್ನ ಬಿಟ್ಟು ಸಣ್ಣಪುಟ್ಟ ವಿಚಾರಗಳನ್ನ ದೇಶಕ್ಕೆ ತೋರಿಸುವುದರಲ್ಲಿ ಅರ್ಥ ಇಲ್ಲ ಎಂದು ಹೇಳಿದರು. ಇದನ್ನೂ ಓದಿ: Pahalgam Terrorist Attack | ನಾಳೆ ಮೋದಿ ನೇತೃತ್ವದಲ್ಲಿ 2ನೇ ಸುತ್ತಿನ ಹೈವೋಲ್ಟೇಜ್ ಸಭೆ
ಸಿಎಂ (CM Siddaramaiah) ಎಎಸ್‌ಪಿ ಮೇಲೆ ಕೈ ಮಾಡಿದ ವಿಚಾರವಾಗಿ ಮಾತನಾಡಿದ ಅವರು, ಏಯ್ ನೀನ್ಯಾಕೆ ಹೀಗೆ ಮಾಡಿದೆ ಅಂದಿರಬೇಕು. ಅವರ ಮೇಲೆ ಕೈ ಮಾಡಿದ್ದು ಅಂತಾ ಯಾಕೆ ಹೇಳ್ತೀರಿ? ನೀವು ಕೈ ಮಾಡಿದ್ದಾರೆ ಅಂತಾ ಯಾಕೆ ಅಂದುಕೊಳ್ಳುತ್ತೀರಿ? ಹಿಂದೆ ಯಡಿಯೂರಪ್ಪನವರು ಐಎಎಸ್ ಅಧಿಕಾರಿಗಳ ಮೇಲೆ ಕೈ ಮಾಡಿದ್ದೂ ಗೊತ್ತಿದೆ. ಎಮೋಷನ್‌ನಲ್ಲಿ ಮಾಡಿದ್ದರೂ ಮಾಡಿರಬಹುದು. ಹಿಂದೆ ಯಡಿಯೂರಪ್ಪನವರು ಈ ರೀತಿ ಮಾಡಿಲ್ಲ ಎಂದು ವಿಜಯೇಂದ್ರ ಅವರು ಹೇಳಲಿ ನೋಡೋಣ ಎಂದರು. ಇದನ್ನೂ ಓದಿ: ಮಗುವಿನ ಕಾಲಿಗೆ ಪೆಟ್ಟು – ಮಗುಗೆ ಏನಾಗುತ್ತೋ ಅನ್ನೋ ಆತಂಕದಲ್ಲಿ 12ರ ಬಾಲಕ ಆತ್ಮಹತ್ಯೆ