ಲಂಡನ್: ತನ್ನ ಸಲಿಂಗಿ ಗೆಳೆಯನೊಂದಿಗೆ ಜೀವನ ನಡೆಸಲು ಪತ್ನಿಯನ್ನು ಕೊಲೆ ಮಾಡಿದ್ದ ಭಾರತದ ಮೂಲದ ಫಾರ್ಮಸಿಸ್ಟ್ ಗೆ ಇಂಗ್ಲೆಂಡ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಮಿತೇಶ್ ಪಟೇಲ್ (37) ಕೊಲೆಗೈದ ಪತಿಯಾಗಿದ್ದು, ಜೆಸ್ಸಿಕಾ (34) ಕೊಲೆಯಾದ ದುರ್ದೈವಿ. ಪತ್ನಿಯ ಹೆಸರಿನಲ್ಲಿದ್ದ 2 ಮಿಲಿಯನ್ ಪೌಂಡ್ (ಸುಮಾರು 17 ಕೋಟಿ ರೂ.) ವಿಮೆ ಹಣವನ್ನು ಪಡೆಯಲು ಸಂಚು ರೂಪಿಸಿದ್ದ ಮಿತೇಶ್ ಪಟೇಲ್ ಪತ್ನಿಯನ್ನೇ ಕೊಲೆ ಮಾಡಿದ್ದು, ಅದಕ್ಕೂ ಮುನ್ನ ಕೊಲೆ ಮಾಡಲು ಗೂಗಲ್‍ನಲ್ಲಿ ಸರ್ಚ್ ಮಾಡಿದ್ದ.
Advertisement
ತನ್ನ ಪತ್ನಿಯನ್ನು ಕೊಲೆ ಮಾಡಿದ್ದ ಮಿತೇಶ್ ಮನೆಯಲ್ಲಿ ಕಳ್ಳತನ ನಡೆದಿದೆ ಎಂದು ಸುಳ್ಳು ಹೇಳಿ ಪ್ರಕಣದ ದಿಕ್ಕು ತಪ್ಪಿಸಲು ಯತ್ನಿಸಿದ್ದ. ಆದರೆ ಪ್ರಕರಣದ ತನಿಖೆಯ ವೇಳೆ ಪೊಲೀಸರಿಗೆ ಮಿತೇಶ್ ಸಂಚು ತಿಳಿದುಬಂದಿದೆ.
Advertisement
Advertisement
ಸಿಕ್ಕಿ ಬಿದ್ದಿದ್ದು ಹೇಗೆ?
ಮಿತೇಶ್ ತನ್ನ ಪತ್ನಿಯನ್ನು ಕೊಲೆ ಮಾಡಲು ಗೂಗಲ್ ನಲ್ಲಿ ಸರ್ಚ್ ಮಾಡಿ ಮಾಹಿತಿ ಸಂಗ್ರಹಿಸಿದ್ದ. ಅಲ್ಲದೇ ಪತ್ನಿ ಹಾಗೂ ಆತನ ಬಳಕೆ ಮಾಡುತ್ತಿದ್ದ ಐಫೋನ್ ಹೆಲ್ತ್ ಆ್ಯಪ್ ಅಂದು ನಡೆದ ಘಟನೆ ಬಗ್ಗೆ ಮಾಹಿತಿ ಸಂಗ್ರಹಿಸಿತ್ತು. ಇದನ್ನೇ ಪ್ರಕರಣದ ಪ್ರಮುಖ ಸಾಕ್ಷಿಯಾಗಿ ನ್ಯಾಯಾಲಯಕ್ಕೆ ಸಲ್ಲಿಸಿದ ಪೊಲೀಸರು ಮಿತೇಶ್‍ಗೆ ಶಿಕ್ಷೆ ಆಗುವಂತೆ ಮಾಡಲು ಯಶಸ್ವಿಯಾಗಿದ್ದಾರೆ.
Advertisement
ಮೊಬೈಲ್ ನಲ್ಲಿ ಅಳವಡಿಸಿದ್ದ ಆ್ಯಪ್ ದಿನದಲ್ಲಿ ವ್ಯಕ್ತಿ ನಡೆದ ಪ್ರತಿ ಹೆಜ್ಜೆಯನ್ನು ಲೆಕ್ಕ ಮಾಡಿ ಸಂಗ್ರಹ ಮಾಡುತ್ತಿತ್ತು. ಅದರಂತೆ ಅಂದು ಪತ್ನಿಯನ್ನು ಕೊಲೆ ಮಾಡಿದ್ದ ಸಮಯದಲ್ಲಿನ ನಡೆದ ಉದ್ರಿಕ್ತ ಚಟುವಟಿಕೆಯ ಬಗ್ಗೆಯೂ ಮಾಹಿತಿಯನ್ನು ಸಂಗ್ರಹಿಸಿತ್ತು. ಮಿತೇಶ್ ಕೊಲೆಯನ್ನು ಕಳ್ಳ ಮಾಡಿದ್ದಂತೆ ಸಾಕ್ಷಿ ಸೃಷ್ಟಿ ಮಾಡಲು ಪ್ರಯತ್ನಿಸಿದ್ದ. ಇದರಂತೆ ಪತ್ನಿಯನ್ನು ಕೊಲೆ ಮಾಡಿ ಬಳಿಕ ಆಕೆಯ ಬಳಿ ಇದ್ದ ಮೊಬೈಲನ್ನು ಮನೆಯ ಹೊರ ಆವರಣದಲ್ಲಿ ಎಸೆದಿದ್ದ. ಕಳ್ಳ ಸ್ಥಳದಿಂದ ಪರಾರಿ ಆಗುವ ವೇಳೆ ಮೊಬೈಲ್ ಬಿದ್ದಿದೆ ಎಂದು ಪೊಲೀಸರನ್ನು ನಂಬಿಸುವುದು ಆತನ ಉದ್ದೇಶವಾಗಿತ್ತು.
ಕಳೆದ 6 ವರ್ಷಗಳ ಹಿಂದೆ ಮದುವೆಯಾಗಿದ್ದ ಮಿತೇಶ್ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದ ಸಲಿಂಗಿ ಸ್ನೇಹಿತನ ಜೊತೆ ಬಾಳಲು ಮುಂದಾಗಿದ್ದ. ಪತಿ ಬೇರೆ ಪುರುಷನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದು, ಆತ ಸಲಿಂಗಿ ಎನ್ನುವುದು ಜೆಸ್ಸಿಕಾಗೆ ತಿಳಿದಿತ್ತು. ಆದರೆ ಇದನ್ನು 6 ವರ್ಷಗಳಿಂದ ಹೊರ ಜಗತ್ತಿಗೆ ತಿಳಿಯದಂತೆ ಆಕೆ ಸಹಿಸಿಕೊಂಡು ಬಂದಿದ್ದಳು.
ಕೊಲೆ ಮಾಡಿದ್ದು ಹೇಗೆ?
ಗೂಗಲ್‍ನಲ್ಲಿ ಪತ್ನಿಯನ್ನು ಕೊಲೆ ಮಾಡುವುದು ಹೇಗೆ ಎಂದು ಮಾಹಿತಿ ಪಡೆದಿದ್ದ ಮಿತೇಶ್ ಪ್ಲಾಸ್ಟಿಕ್ ಬ್ಯಾಗ್ ಬಳಸಿ ತನ್ನ ಕೈಯಾರೆ ಪತ್ನಿಯನ್ನು ಉಸಿರುಗಟ್ಟಿಸಿ ಮೇ 14 ರಂದು ಕೊಲೆ ಮಾಡಿದ್ದ. ಜೆಸ್ಸಿಕಾ ಅಂದು ಮನೆಗೆ ಪ್ಲಾಸ್ಟಿಕ್ ಬ್ಯಾಗ್ ಹಿಡಿದು ಬಂದಿರುವುದು ಸಿಸಿಟಿವಿ ದೃಶ್ಯಗಳಲ್ಲಿ ದಾಖಲಾಗಿದೆ.
ಐವಿಎಫ್ ಚಿಕಿತ್ಸೆ ಪಡೆದಿದ್ದ ದಂಪತಿ: ಪತಿ ಮಿತೇಶ್ ಸಲಿಂಗಿ ಎಂದು ಗೊತ್ತಾದ ಬಳಿಕ ಜೆಸ್ಸಿಕಾ ಮಕ್ಕಳನ್ನು ಪಡೆಯಲು ಮೂರು ಬಾರಿ ಐವಿಎಫ್ ಚಿಕಿತ್ಸೆ ಪಡೆದ್ದರು. ಶೇಖರಿಸಿಟ್ಟ ಅಂಡಾಣು ಹಾಗೂ ವೀರ್ಯಾಣುಗಳನ್ನು ಕೃತಕವಾಗಿ ಗರ್ಭಾಶಯಕ್ಕೆ ವರ್ಗಾಯಿಸುವ ಈ ಚಿಕಿತ್ಸೆ ಪ್ರಯೋಜನಕ್ಕೆ ಬಂದಿರಲಿಲ್ಲ. ನಾಲ್ಕನೇ ಬಾರಿಗೆ ಇಬ್ಬರ ವೀರ್ಯವನ್ನು ಶೇಖರಿಸಿ ಲ್ಯಾಬ್ ನಲ್ಲಿ ಇಡಲಾಗಿತ್ತು. ಬಳಿಕ ಮಿತೇಶ್ ಪತ್ನಿಯನ್ನು ಕೊಲೆ ಮಾಡಲು ತೀರ್ಮಾನಿಸಿದ್ದ.
ಪತಿ ಎಲ್ಲಾ ವರ್ತನೆಗಳು ಜೆಸ್ಸಿಕಾಗೆ ತಿಳಿಯುತ್ತಿತ್ತು. ಪತಿ ತನ್ನ ಸಲಿಂಗಿ ಸ್ನೇಹಿತನೊಂದಿಗೆ ಸೆಕ್ಸ್ ಮಾಡುವುದು ಬಗ್ಗೆ ಆತನ ಮೊಬೈಲ್ ನಲ್ಲಿದ್ದ ಸಂದೇಶಗಳ ಮೂಲಕ ತಿಳಿದಿದ್ದಳು. ಅಲ್ಲದೇ ಪತಿ ತನ್ನ ಗೆಳೆಯರನ್ನು ಮನೆಗೆ ಕರೆದುಕೊಂಡು ಬಂದು ಕಾಂಡೋಮ್ ಬಳಸಿ ಸೆಕ್ಸ್ ಮಾಡಿದ್ದ ಎನ್ನುವುದು ಪೊಲೀಸ್ ತನಿಖೆ ವೇಳೆ ಬೆಳಕಿಗೆ ಬಂದಿತ್ತು.
ಇಂಗ್ಲೆಂಡ್‍ನ ಮಿಡಲ್ಸ್ ಬರೊ ಪಟ್ಟಣದಲ್ಲಿ ಪತ್ನಿಯೊಂದಿಗೆ ನೆಲೆಸಿದ್ದ ಮಿತೇಶ್ ಹಿಂದೂ ಧರ್ಮದ ವ್ಯಕ್ತಿಯಾಗಿದ್ದರೂ ಸಂಪ್ರದಾಯಗಳಿಂದ ಸದಾ ದೂರ ಇರಲು ಬಯಸುತ್ತಿದ್ದ. ಆದರೆ ಪತ್ನಿಯ ಅಂತಿಮ ವಿಧಿ ವಿಧಾನಗಳನ್ನು ಹಿಂದೂ ಧರ್ಮದ ಪ್ರಕಾರ ನಡೆಸಲು ಗೂಗಲ್ ಮಾಡಿದ್ದ ಎಂದು ತಿಳಿದು ಬಂದಿದೆ.
Mitesh Patel has been convicted of the murder of his wife, Jessica Patel, who was found dead in #Middlesbrough on 14th May.
Following a thorough investigation by Cleveland Police, an extensive package of evidence was put before the court.
Read more:https://t.co/xlZ8HAQFSd pic.twitter.com/AwRbao2x04
— Cleveland Police (@ClevelandPolice) December 5, 2018
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv