ನಾನು ಈಗ ತಲೆ ತಗ್ಗಿಸಬೇಕಿದೆ: ಭವಾನಿ ರೇವಣ್ಣ

Public TV
1 Min Read
BHAVANI REVANNA

ಹಾಸನ: ವರ್ಸ್ಟ್ ಎಂದರೆ ಹೊಳೆನರಸೀಪುರ, ನಾನು ಈಗ ತಲೆ ತಗ್ಗಿಸಬೇಕಿದೆ ಎಂದು ಭವಾನಿ ರೇವಣ್ಣ ಬಹಿರಂಗ ವೇದಿಕೆಯಲ್ಲಿ ಹೇಳಿಕೊಂಡ ಘಟನೆ ಹಾಸನದಲ್ಲಿ ನಡೆದಿದೆ.

ಕಳೆದ ವರ್ಷದ ಎಸ್‍ಎಸ್‍ಎಲ್‍ಸಿ ಫಲಿತಾಂಶದಲ್ಲಿ ಹಾಸನ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನ ಬಂದಿತ್ತು. ಇದಕ್ಕೆ ಕಾರಣಕರ್ತರಾದ ಶಿಕ್ಷಕರಿಗೆ ಅಭಿನಂದನೆ ಸಲ್ಲಿಸಲು ಹಾಸನದ ಜ್ಞಾನಾಕ್ಷಿ ಕಲ್ಯಾಣ ಮಂಟಪದಲ್ಲಿ ಸಭೆ ಕರೆಯಲಾಗಿತ್ತು.

bhavni revanna

ಸಭೆಯಲ್ಲಿ ಮಾತನಾಡುತ್ತಾ ಸಂತಸ ವ್ಯಕ್ತಪಡಿಸಿದ ಭವಾನಿ ರೇವಣ್ಣ, ಹಾಸನ ಜಿಲ್ಲೆಗೆ ಹೊಳೆನರಸೀಪುರ ತಾಲೂಕು ಏಳನೇ ಸ್ಥಾನದಲ್ಲಿರುವುದನ್ನು ಹೇಳಿ ಬೇಸರ ವ್ಯಕ್ತಪಡಿಸಿದರು. ಹಾಸನ ಜಿಲ್ಲೆ ಇಡೀ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆಯಲು ಕೇವಲ ಭವಾಣಿ ರೇವಣ್ಣ ಮಾತ್ರ ಕಾರಣಾನಾ ಎಂದು ಕೆಲವರು ಮಾತನಾಡಿದರು. ಆದರೆ ಆ ರೀತಿ ನಾನು ಎಲ್ಲೂ ಹೇಳಿಲ್ಲ. ಈ ಬಾರಿಯೂ ಹಾಸನ ಜಿಲ್ಲೆ ಪ್ರಥಮ ಸ್ಥಾನ ಪಡೆಯಬೇಕು. ಆ ನಿಟ್ಟಿನಲ್ಲಿ 50 ಅಂಶಗಳ ಕಾಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಈ ಕಾಯಕ್ರಮದ ನಂತರ ಭವಾನಿ ರೇವಣ್ಣ ಶಿಕ್ಷಕರಿಗೆ ತಾವೇ ಊಟ ಬಡಿಸುವ ಮೂಲಕ ಔತಣಕೂಟದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

Share This Article
Leave a Comment

Leave a Reply

Your email address will not be published. Required fields are marked *