ನವದೆಹಲಿ: ಶ್ರದ್ದಾ ವಾಕರ್ (Shraddha Walkar) ಹತ್ಯೆಯನ್ನು ನಾನೇ ಮಾಡಿದ್ದು, ಅವಳು ನನ್ನ ಬಿಟ್ಟು ಹೋಗುವ ಭೀತಿಯಲ್ಲಿ ಈ ಹತ್ಯೆ ನಡೆದುಹೋಗಿದೆ ಎಂದು ಅಫ್ತಾಬ್ ಅಮೀನ್ ಪೂನವಾಲಾ (Aftab) ತಪ್ಪೊಪ್ಪಿಕೊಂಡಿದ್ದಾನೆ. ಫಾಲಿಗ್ರಾಫ್ ಪರೀಕ್ಷೆಯಲ್ಲಿ ತಪ್ಪೊಪ್ಪಿಕೊಂಡ ಬಳಿಕ ಈಗ ಮಂಪರು ಪರೀಕ್ಷೆಯಲ್ಲೂ (Narco Test) ಅಫ್ತಾಬ್ ಹತ್ಯೆಯನ್ನು ಒಪ್ಪಿಕೊಂಡಿದ್ದಾನೆ.
ಮುಂಬೈ ಮೂಲದ ಯುವತಿ ಶ್ರದ್ದಾ ವಾಕರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಆರೋಪಿ ಅಫ್ತಾಬ್ ಅಮೀನ್ ಪೂನವಾಲಾನನ್ನು ಮಂಪರು ಪರೀಕ್ಷೆಗೆ ಒಳಪಡಿಸಲಾಯಿತು. ಬೆಳಗ್ಗೆ 10 ರಿಂದ ಮಧ್ಯಾಹ್ನ 03 ಗಂಟೆವರೆಗೂ ನಡೆದ ಪರೀಕ್ಷೆಯಲ್ಲಿ ಹತ್ಯೆಯ ಬಗೆಗಿನ ಹಲವು ಪ್ರಶ್ನೆಗಳಿಗೆ ಅಫ್ತಾಬ್ ಉತ್ತರಿಸಿದ್ದಾನೆ. ಇದನ್ನೂ ಓದಿ: ಲೂಧಿಯಾನ ಕೋರ್ಟ್ ಸ್ಫೋಟದ ಆರೋಪಿ, ಭಯೋತ್ಪಾದಕ ಹರ್‌ಪ್ರೀತ್ ಸಿಂಗ್ ಬಂಧನ
Advertisement
Advertisement
ಹಣಕಾಸಿನ ವಿಚಾರಗಳಿಗೆ ನನ್ನ ಮತ್ತು ಶ್ರದ್ಧಾ ನಡುವೆ ಜಗಳಗಳಿತ್ತು. ದೆಹಲಿಗೆ ಬಂದ ಬಳಿಕ ಅವಳು ನನ್ನನ್ನು ಶಾಶ್ವತವಾಗಿ ಬಿಟ್ಟು ಹೋಗುವುದಾಗಿ ಹೇಳಿದಳು. ಡ್ರಗ್ಸ್ ಸೇವಿಸಿದ್ದ ನಾನು ನಶೆಯಲ್ಲಿ ಅವಳನ್ನು ಹತ್ಯೆ ಮಾಡಿದ್ದೇನೆ ಎಂದು ಅಫ್ತಾಬ್ ತಪ್ಪೊಪ್ಪಿಕೊಂಡಿದ್ದಾನೆ. ಶ್ರದ್ಧಾ ಹತ್ಯೆಯ ಬಳಿಕ ಅವಳ ಫೋನ್, ಬಟ್ಟೆ ಹಾಗೂ ದೇಹವನ್ನು ತುಂಡರಿಸಿದ ಗರಗಸವನ್ನು ಎಸೆದಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾನೆ.
Advertisement
ಆದರೆ ಶ್ರದ್ದಾ ತಲೆಯನ್ನು ಎಲ್ಲಿ ಎಸೆಯಲಾಗಿದೆ ಎಂಬುದಕ್ಕೆ ಸ್ಪಷ್ಟ ಉತ್ತರ ಸಿಕ್ಕಿಲ್ಲ ಎನ್ನಲಾಗಿದೆ. ಈ ಬಗ್ಗೆ ಪ್ರಶ್ನಿಸಿದಾಗ ಅಫ್ತಾಬ್ ನಿಖರವಾಗಿ ಸ್ಥಳ ಪತ್ತೆ ಹಚ್ಚುವಲ್ಲಿ ವಿಫಲವಾದ ಎಂದು ಮೂಲಗಳು ಹೇಳಿವೆ. ಮಂಪರು ಪರೀಕ್ಷೆ ವೇಳೆ ನೀಡಿದ ಬಹುತೇಕ ಮಾಹಿತಿ ಭೌತಿಕ ಸಾಕ್ಷ್ಯಗಳೊಂದಿಗೆ ಸಾಮ್ಯತೆ ಹೊಂದುತ್ತಿದ್ದು, ಮತ್ತಷ್ಟು ಮಾಹಿತಿಯನ್ನು ಪರಿಶೀಲಿಸಬೇಕಿದೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ. ಇದನ್ನೂ ಓದಿ: “ಬ್ರಾಹ್ಮಣ ಭಾರತ್ ಛೋಡೋ” – ಜೆಎನ್‍ಯು ಕ್ಯಾಂಪಸ್ ಗೋಡೆಗಳ ಮೇಲೆ ವಿವಾದಾತ್ಮಕ ಬರಹ
Advertisement
ಫಾಲಿಗ್ರಾಫ್ ಮತ್ತು ಮಂಪರು ಪರೀಕ್ಷೆಯಲ್ಲಿ ನೀಡುವ ಹೇಳಿಕೆಗಳಿಗೆ ಕಾನೂನಿನ ಮಾನ್ಯತೆ ಇಲ್ಲದಿದ್ದರೂ ಸತ್ಯವನ್ನು ಅರಿಯುವ ದೃಷ್ಟಿಯಿಂದ ಈ ಪರೀಕ್ಷೆಗಳನ್ನು ಪೊಲೀಸರು ನಡೆಸಿದ್ದಾರೆ. ಅಫ್ತಾಬ್ ಎರಡು ಪರೀಕ್ಷೆಯಲ್ಲೂ ತಪ್ಪೊಪ್ಪಿಕೊಂಡಿದ್ದು, ಹತ್ಯೆಯ ಬಳಿಕ ನಡೆದ ಹಲವು ಘಟನೆಗಳನ್ನು ವಿವರಿಸಿದ್ದಾನೆ. ಈ ಮಾಹಿತಿ ಆಧಾರದ ಮೇಲೆ ಪೊಲೀಸರು ಭೌತಿಕ ಸಾಕ್ಷ್ಯಗಳನ್ನು ಸಂಗ್ರಹಿಸಿ ನ್ಯಾಯಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲು ಸಿದ್ಧತೆ ನಡೆಸುತ್ತಿದ್ದಾರೆ.