ಬೆಂಗಳೂರು: ಇಂದು ಅಪ್ಪಂದಿರ ದಿನಾಚರಣೆಯಾಗಿದೆ. ಹೀಗಾಗಿ ಮಕ್ಕಳು ತಮ್ಮ ತಮ್ಮ ತಂದೆಗೆ ಶುಭಾಶಯವನ್ನು ಕೋರುತ್ತಿದ್ದಾರೆ. ಇದೀಗ ನವರಸ ನಾಯಕ ಜಗ್ಗೇಶ್ ಕೂಡ ಅಪ್ಪಂದಿರ ದಿನ ತಂದೆಯ ಕೊನೆಯ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ.
ನಟ ಜಗ್ಗೇಶ್ ಸದಾ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದು, ತನ್ನ ಜೀವನದ ನೋವು, ಸಂತಸ, ಕಷ್ಟದ ದಿನವನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಿದ್ದಾರೆ. ಇದೀಗ ಅಪ್ಪಂದಿರ ದಿನದಂದು ತಮ್ಮ ತಂದೆಯ ಬಗ್ಗೆ ಮಾತನಾಡಿದ್ದಾರೆ.
Advertisement
ಅಪ್ಪ ಸಾಯುವ ಕೆಲದಿನದ ಹಿಂದೆ
ಅವರಿಗೆ ಸ್ನಾನಪೂಜೆ ಮಾಡಿಸಿದ ನಂತರ ನಾನು ತೆಗೆದ ಕಡೆ ವೀಡಿಯೋ!
ಇದರಲ್ಲಿ ಅಮ್ಮ ಕಾರುಬಳಿ ನಿಂತು ಅಪ್ಪನ ಕರೆದಳು ಎನ್ನುತ್ತಾರೆ!ಆಗ ಭ್ರಮೆ ಅನ್ನಿಸಿತು ಅವರು ಹೇಳಿದಂತೆ ತಿಂಗಳಲ್ಲಿ ತೀರಿಕೊಂಡರು!
ನನ್ನ ಯೌವ್ವನದಲ್ಲಿ ನೆತ್ತಿಮೇಲಿನ ಸೂರ್ಯನಂತೆ ಇದ್ದವ ಸಾವು ಸಮೀಪಿಸಿದಾಗ ಹುಣ್ಣಿಮೆ ಚಂದ್ರನಂತಾದ ಅಪ್ಪ!I miss u pic.twitter.com/H9tnvFBYIP
— ನವರಸನಾಯಕ ಜಗ್ಗೇಶ್ (@Jaggesh2) June 21, 2020
Advertisement
ಈ ಬಗ್ಗೆ ಟ್ವೀಟ್ ಮಾಡಿರುವ ಜಗ್ಗೇಶ್, “ಅಪ್ಪ ಸಾಯುವ ಕೆಲ ದಿನದ ಹಿಂದೆ ಅವರಿಗೆ ಸ್ನಾನ, ಪೂಜೆ ಮಾಡಿಸಿದ ನಂತರ ನಾನು ತೆಗೆದ ಕಡೆ ವಿಡಿಯೋ ಇದು. ಇದರಲ್ಲಿ ನಿಮ್ಮ ಅಮ್ಮ ಕಾರು ಬಳಿ ನಿಂತು ನನ್ನನ್ನು ಕರೆದಳು ಎನ್ನುತ್ತಾರೆ. ಆಗ ನನಗೆ ಭ್ರಮೆ ಅನ್ನಿಸಿತು. ಆದರೆ ಅವರು ಹೇಳಿದಂತೆ ತಿಂಗಳಲ್ಲಿ ತೀರಿಕೊಂಡರು. ನನ್ನ ಯೌವ್ವನದಲ್ಲಿ ನೆತ್ತಿ ಮೇಲಿನ ಸೂರ್ಯನಂತೆ ಇದ್ದವ ಸಾವು ಸಮೀಪಿಸಿದಾಗ ಹುಣ್ಣಿಮೆ ಚಂದ್ರನಂತಾದ.. ಅಪ್ಪಾ I miss u” ಎಂದು ಅಪ್ಪನ ಕೊನೆಯ ದಿನದ ಬಗ್ಗೆ ನೋವಿನಿಂದ ಹೇಳಿಕೊಂಡಿದ್ದಾರೆ.
Advertisement
2010 ಚಿತ್ರ..ಇಬ್ಬರು ನನ್ನಂತೆ ಸ್ವಾಭಿಮಾನಿಗಳು!
ನಾನು ಅಪ್ಪನಿಗೆ ಸಹಾಯ ಕೇಳಲಿಲ್ಲಾ!
ನನ್ನ ಮಕ್ಕಳು ನನ್ನ ಬಳಿ ಸಹಾಯ ಕೇಳದೆ ತಕ್ಕಮಟ್ಟಿಗೆ ಅವರ ಕಾಲಮೇಲೆ ನಿಂತರು!
ನಮ್ಮ ವಂಶವೆ ತಾತನಿಂದ ಮಕ್ಕಳವರೆಗು ಒಂದು ತರಹ
ಕೆಟ್ಟ ಸ್ವಾಭಿಮಾನಿ ಗುಣ!
ಧನ್ಯವಾದ https://t.co/2Xamfteazx
— ನವರಸನಾಯಕ ಜಗ್ಗೇಶ್ (@Jaggesh2) June 21, 2020
Advertisement
ಅಭಿಮಾನಿಯೊಬ್ಬರು ಜಗ್ಗೇಶ್ ತಮ್ಮ ಮಕ್ಕಳ ಜೊತೆ ಒಟ್ಟಿಗೆ ಇದ್ದಾಗ ಕ್ಲಿಕ್ಕಿಸಿದ ಫೋಟೋವೊಂದನ್ನು ಪೋಸ್ಟ್ ಮಾಡಿದ್ದರು. ಆಗ ಟ್ವೀಟ್ಗೆ “ಇದು 2010 ಫೋಟೋವಾಗಿದೆ. ಇಬ್ಬರು ನನ್ನಂತೆ ಸ್ವಾಭಿಮಾನಿಗಳು, ನಾನು ಅಪ್ಪನಿಗೆ ಸಹಾಯ ಕೇಳಲಿಲ್ಲಾ, ನನ್ನ ಮಕ್ಕಳು ನನ್ನ ಬಳಿ ಸಹಾಯ ಕೇಳದೆ ತಕ್ಕಮಟ್ಟಿಗೆ ಅವರ ಕಾಲ ಮೇಲೆ ನಿಂತರು. ನಮ್ಮ ವಂಶವೇ ತಾತನಿಂದ ಮಕ್ಕಳವರೆಗೂ ಒಂದು ತರಹ, ಕೆಟ್ಟ ಸ್ವಾಭಿಮಾನಿ ಗುಣ” ಎಂದು ಬರೆದು ಅಭಿಮಾನಿಗೆ ಧನ್ಯವಾದ ತಿಳಿಸಿದ್ದಾರೆ.