ಬೆಳಗಾವಿ: ಪಿಎಲ್‍ಡಿ ಬ್ಯಾಂಕ್ ಚುನಾವಣಾ ಪ್ರಕ್ರಿಯೆ ಆರಂಭವಾದ್ರೆ ಇತ್ತ ಜಾರಕಿಹೊಳಿ ಹಾಗೂ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ನಡುವಿನ ವಾರ್ ಕೂಡ ಮುಂದುವರಿದಿದೆ.
ರಮೇಶ್ ಜಾರಕಿಹೊಳಿ ಹೇಳಿಕೆ ಪ್ರತಿಕ್ರಿಯಿಸಿದ ಶಾಶಕಿ, ನಾನು ಸ್ಲಂನಲ್ಲೇ ಹುಟ್ಟಿರಬಹುದು. ಬೇರೆ ಯಾವುದೇ ಆಗಿರಬಹುದು. ಇದ್ಯಾವುದರ ಬಗ್ಗೆನೂ ನಾನು ಮಾತಾಡೋಕೆ ಹೋಗುವುದಿಲ್ಲ. ನಾನು ಸಂಸ್ಕೃತಿ ಎಲ್ಲೆ ಮೀರಿ ಹೋಗಿಲ್ಲ, ಹೋಗೊದು ಇಲ್ಲ ಅಂತ ಟಾಂಗ್ ನೀಡಿದ್ದಾರೆ.
Advertisement
Advertisement
`ಆ’ ರೀತಿ ಮಾತನಾಡುವುದರಿಂದ ನಾವೇನೋ ಸಾಧಿಸುತ್ತೇವೆ ಅಂತಾ ಭಾವಿಸೋದು ತಪ್ಪು. ನಾವು ಜವಾಬ್ದಾರಿ ಸ್ಥಾನದಲ್ಲಿದ್ದೇವೆ. ಏಕ ವಚನದಲ್ಲಿ ಮಾತನಡೋದು ತರವಲ್ಲ. ಯಾರು ಯಾರು ಏನೇನ್ ಮಾತಾಡ್ತಾರೋ ಅದನ್ನು ಆ ಭಗವಂತ ನೋಡಿಕೊಳ್ಳುತ್ತಾನೆ. ಮನಸ್ಸಿಗೆ ತುಂಬಾ ನೋವಾಗಿದೆ ಅಂತ ಹೆಬ್ಬಾಳ್ಕರ್ ಹೇಳಿದ್ದಾರೆ. ಇದನ್ನೂ ಓದಿ: ಲಕ್ಷ್ಮೀ ಹೆಬ್ಬಾಳ್ಕರ್ ನ ಹದ್ದು ಬಸ್ತುನಲ್ಲಿ ಇಡದಿದ್ದರೇ, ಉಗ್ರ ಕ್ರಮ ಕೈಗೊಳ್ತೀವಿ: ರಮೇಶ್ ಜಾರಕಿಹೊಳಿ
Advertisement
ರಮೇಶ್ ಜಾರಕಿಹೊಳಿ ಹೇಳಿದ್ದೇನು?:
ಆಕೆ ಸ್ಲಂನಲ್ಲಿದ್ದವಳು, ಆಕೆಯನ್ನು ರಾಜಕೀಯಕ್ಕೆ ತಂದು ಇಷ್ಟು ದೊಡ್ಡ ಮಟ್ಟದಲ್ಲಿ ಬೆಳೆಸಿದ್ದೇವೆ. ಆದ್ರೆ ಇಂದು ನಮ್ಮ ವಿರುದ್ಧವೇ ನೀಂತಿದ್ದನು ನೋಡಿ ಶಾಕ್ ಆಗಿದ್ದೇವೆ ಅಂತ ರಮೇಶ್ ಜಾರಕಿಹೊಳಿ ಗುರುವಾರ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಏಕವಚನದಲ್ಲಿಯೇ ಕಿಡಿಕಾರಿದ್ದರು.
Advertisement
ನಾನು ಲಕ್ಷ್ಮಿ ಹೆಬ್ಬಾಳ್ಕರ್‍ಗೆ ದೆಹಲಿ ತೋರಿಸಿದ್ದೆ. ಡಿಕೆಶಿ ನಾವು ಇಬ್ಬರು ಗೆಳೆಯರಾಗಿದ್ದು, 2004 ರಲ್ಲಿ ನಾವು ಶಿವಕುಮಾರ್ ಪರ ಬ್ಯಾಟಿಂಗ್ ಮಾಡಿದ್ದೆನು. ಅವರು ನನಗೆ ಸಚಿವರಾಗಲು ಸಹಾಯ ಮಾಡಿದ್ದರು. ಕೊಲ್ಹಾಪುರ ಮಹಾಲಕ್ಷ್ಮಿ ದೇವರ ಆಣೆ ನಾನು ಹೇಳಲು ಸಿದ್ಧ. ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಹದ್ದು ಬಸ್ತಿನಲ್ಲಿ ಇಡದಿದ್ದರೆ ನಾನು ಸತೀಶ್ ಜಾರಕಿಹೊಳಿ ಉಗ್ರ ನಿರ್ಧಾರ ಕೈ ಗೊಳ್ಳುತ್ತೇವೆ. ನಾವು ಬಹುಮತ ಪಡೆಯೋದು ದೊಡ್ಡದಲ್ಲ. ಆದ್ರೆ ಅವರು ಏನಾದ್ರು ಮಾಡಿದ್ರೆ ಜಾರಕಿಹೊಳಿ ಕುಟುಂಬಕ್ಕೆ ಕೆಟ್ಟ ಹೆಸರು ಬರುತ್ತೆ. ಚುನಾವಣೆ ವಿಚಾರದಲ್ಲಿ ಹಣಕಾಸಿನ ವ್ಯವಹಾರ ನಡೆದಿದೆ. ಸತೀಶ್ ಜಾರಕಿಹೊಳಿ ಅಪಮಾನ ಆದ್ರೆ ನಾನು ಅವರ ಜತೆಗೆ ಇರುತ್ತೇನೆ. ಶಾಸಕ ಸತೀಶ್ ಜಾರಕಿಹೊಳಿ ನಿರ್ಣಯಕ್ಕೆ ನಾನು ಬದ್ಧ ಅಂತ ಹೇಳಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv