ಹಾಸನ: ಸಿದ್ದರಾಮೋತ್ಸವಕ್ಕೆ ಅನ್ಯಪಕ್ಷಗಳ ಶಾಸಕರು ವಾಹನ ವ್ಯವಸ್ಥೆ ಮಾಡಿದ್ರು ಎಂಬ ಸುದ್ದಿ ಹರಿದಾಡಿತ್ತು. ಇದಕ್ಕೆ ಪುಷ್ಠಿ ನೀಡುವಂತಹ ಹೇಳಿಕೆಯನ್ನು ಅರಸಿಕೆರೆಯ ಜೆಡಿಎಸ್ ಶಾಸಕ ಶಿವಲಿಂಗೇಗೌಡ ನೀಡಿದ್ದಾರೆ.
ಹೌದು. ನಾನು ವಾಹನ ವ್ಯವಸ್ಥೆ ಮಾಡಿದ್ದು ಸತ್ಯ ಎಂದಿದ್ದಾರೆ. ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ನಾನು ಉಪಯೋಗ ಪಡೆದಿದ್ದೇನೆ. ಕೆಲವರು ಬಂದು ಸಹಾಯ ಕೇಳಿದಾಗ, ಬಸ್ ವ್ಯವಸ್ಥೆ ಮಾಡಿಸಿದ್ದೇನೆ ಎಂದಿದ್ದಾರೆ. ನಾನು ಜೆಡಿಎಸ್ ಜೊತೆ ಭಿನ್ನಾಭಿಪ್ರಾಯ ಹೊಂದಿರೋದು ಎಲ್ಲರಿಗೂ ಗೊತ್ತಿದೆ ಎಂದು ಶಿವಲಿಂಗೇಗೌಡ ಹೇಳಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿಂದು 1,608 ಮಂದಿಗೆ ಕೊರೊನಾ – ಇಬ್ಬರು ಸಾವು
Advertisement
Advertisement
ಸಿದ್ದರಾಮೋತ್ಸವ ಅಪಘಾತ- ಸಾವಿನ ಸಂಖ್ಯೆ 3ಕ್ಕೆ: ಸಿದ್ದರಾಮೋತ್ಸವ ವೇಳೆ ಸಂಭವಿಸಿದ ಅಪಘಾತಗಳಲ್ಲಿ ಮೃತಪಟ್ಟವರ ಸಂಖ್ಯೆ ಮೂರಕ್ಕೇರಿದೆ. ಸಿದ್ದರಾಮೋತ್ಸವಕ್ಕೆ ತೆರಲಿದ್ದ ಮಂಡ್ಯದ ಅರಳಕುಪ್ಪೆಯ ಸ್ವಾಮಿಗೌಡ ಅಪಘಾತದಲ್ಲಿ ಮೃತಪಟ್ಟಿರೋದು ತಡವಾಗಿ ಬೆಳಕಿಗೆ ಬಂದಿದೆ. ದಾವಣಗೆರೆಯಿಂದ ವಾಪಸ್ ಆಗದ ಕಾರಣ ಕುಟುಂಬಸ್ಥರು ನಾಪತ್ತೆ ಕೇಸ್ ದಾಖಲಿಸಿದ್ರು. ಇದನ್ನೂ ಓದಿ: ಮುಂದಿನ ಕಾಮನ್‌ವೆಲ್ತ್ ಗೇಮ್ಸ್ ಎಲ್ಲಿ-ಯಾವಾಗ? – ಇಲ್ಲಿದೆ ಡೀಟೈಲ್ಸ್
Advertisement
Advertisement
ದಾವಣಗೆರೆ ಪೊಲೀಸರು ತನಿಖೆ ನಡೆಸಿದಾಗ, ಜಿಲ್ಲಾಸ್ಪತ್ರೆ ಶವಾಗಾರದಲ್ಲಿ ಸ್ವಾಮಿಗೌಡನ ಶವ ಪತ್ತೆಯಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಶವ ಹಸ್ತಾಂತರಿಸಲಾಗಿದೆ. ಕಲಬುರಗಿಯ ಸಾವಳಗಿಯಿಂದ ಸಿದ್ದರಾಮೋತ್ಸವಕ್ಕೆ ತೆರಳಿದ್ದ 70 ವರ್ಷದ ಬಸಣ್ಣ ನಾಪತ್ತೆಯಾಗಿದ್ದಾರೆ. ಅಪ್ಪನ ಫೋಟೋ ಹಿಡಿದು ಮೂವರು ಮಕ್ಕಳು ದಾವಣಗೆರೆಯಲ್ಲಿ ಹುಡುಕಾಟ ನಡೆಸಿದ್ದಾರೆ.