ಚಾರ್ ಮಿನಾರ್, ತಾಜ್‍ಮಹಲ್‍ನಂಥಾ ಪ್ರೇಮಕಾವ್ಯಗಳನ್ನು ಕಟ್ಟಿ ಕೊಟ್ಟ ಆರ್ ಚಂದ್ರು ನಿರ್ದೇಶನ ಮಾಡಿರುವ ಚಿತ್ರ ಐ ಲವ್ ಯೂ. ರಿಯಲ್ ಸ್ಟಾರ್ ಉಪೇಂದ್ರ ಮತ್ತು ಚಂದ್ರು ಕಾಂಬಿನೇಷನ್ನಿನ ಎರಡನೇ ಚಿತ್ರವಾಗಿ ಸದ್ದು ಮಾಡಿದ್ದ ಐ ಲವ್ ಯೂ ಟೀಸರ್, ಟ್ರೈಲರ್ ಮೂಲಕವೇ ಸೃಷ್ಟಿಸಿದ್ದ ಸಂಚಲನ ಸಣ್ಣದೇನಲ್ಲ. ಯಾವುದೇ ಚಿತ್ರ ಬಿಡುಗಡೆ ಪೂರ್ವದಲ್ಲಿ ಹೀಗೆ ಹವಾ ಕ್ರಿಯೇಟ್ ಮಾಡಿ ಅದಕ್ಕೆ ತಕ್ಕುದಾದ ಕಂಟೆಂಟ್ ಹೊಂದಿದ್ದರೆ ಗೆಲುವೆಂಬುದು ಗ್ಯಾರೆಂಟಿ. ಐ ಲವ್ ಯೂ ಕೂಡಾ ಅದೇ ಹಾದಿಯಲ್ಲಿದೆ.
Advertisement
ಭರ್ಜರಿ ಓಪನಿಂಗ್ ಪಡೆದುಕೊಂಡಿದ್ದ ಐ ಲವ್ ಯೂ ಅದೇ ಓಘದೊಂದಿಗೆ ವಾರವನ್ನು ದಾಟಿಕೊಂಡಿದೆ. ನೋಡುಗರೆಲ್ಲರ ಕಡೆಯಿಂದ ಕೇಳಿ ಬರುತ್ತಿರೋ ಒಳ್ಳೆ ಅಭಿಪ್ರಾಯಗಳೇ ಥೇಟರುಗಳನ್ನು ತುಂಬಿಸುತ್ತಿವೆ. ಹೀಗೆ ಬಾಯಿಂದ ಬಾಯಿಗೆ ಹರಡಿಕೊಳ್ಳುತ್ತಿರೋ ಸದಭಿಪ್ರಾಯಗಳೇ ಹೌಸ್ ಫುಲ್ ಪ್ರದರ್ಶನಗಳಿಗೂ ಕಾರಣವಾಗಿದೆ. ಕರ್ನಾಟಕದ ಅಷ್ಟೂ ಸೆಂಟರುಗಳಲ್ಲಿ ಐ ಲವ್ ಯೂ ಖದರ್ ದಿನದಿಂದ ದಿನಕ್ಕೆ ಏರುಗತಿ ಕಾಣಿಸುತ್ತಿದೆ. ಈ ವಾತಾವರಣ ಗಮನಿಸಿದರೆ ಸದರಿ ಚಿತ್ರ ಶತದಿನ ಪೂರೈಸಿಕೊಂಡು ಈ ವರ್ಷದ ಸೂಪರ್ ಹಿಟ್ ಚಿತ್ರವಾಗಿ ದಾಖಲಾಗುವ ಎಲ್ಲ ಲಕ್ಷಣಗಳೂ ಕಾಣಿಸುತ್ತಿವೆ.
Advertisement
Advertisement
ಐ ಲವ್ ಯೂ ಈ ವರ್ಷದ ಒಂದೊಳ್ಳೆ ಸಿನಿಮಾವಾಗಿ ಈಗಾಗಲೇ ದಾಖಲಾಗಿದೆ. ಉಪೇಂದ್ರ, ರಚಿತಾ ರಾಮ್ ಮತ್ತು ಸೋನು ಗೌಡ ಜೋಡಿ ಪ್ರೇಕ್ಷಕರನ್ನು ಸಂತೃಪ್ತಗೊಳಿಸಿದೆ. ಗಾಢವಾದ ಪ್ರೇಮ ಕಥೆ, ಅದರೊಂದಿಗೆ ಹೊಸೆದುಕೊಂಡಿರೋ ಸಾಂಸಾರಿಕ ಸಂಬಂಧಗಳ ಮೌಲ್ಯ ಸಾರುವ ಸನ್ನಿವೇಶಗಳೊಂದಿಗೆ ಎಲ್ಲ ವರ್ಗದ ಪ್ರೇಕ್ಷಕರನ್ನೂ ಐ ಲವ್ ಯೂ ಥೇಟರಿನತ್ತ ಸೆಳೆಯುತ್ತಿವೆ. ಉಪ್ಪಿ, ಚಂದ್ರು ಎಂಬ ಅಭಿಮಾನದಾಚೆಗೂ ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಸೆಳೆಯುವಲ್ಲಿಯೂ ಈ ಚಿತ್ರ ಯಶ ಕಂಡಿದೆ.
Advertisement
ಕಲೆಕ್ಷನ್ನಿನಲ್ಲಿಯೂ ಈಗಾಗಲೇ ದಾಖಲೆ ಬರೆದಿರೋ ಐ ಲವ್ ಯೂ ಈ ವರ್ಷವನ್ನು ಒಂದೊಳ್ಳೆ ಫೀಲ್ ನೀಡೋ ಮೂಲಕ ಸಂಪನ್ನವಾಗಿಸಿದೆ. ಖಂಡಿತವಾಗಿಯೂ ಈ ಚಿತ್ರ ಶತದಿನ ಸಂಭ್ರಮ ಆಚರಿಸಿಕೊಳ್ಳೋದು ಗ್ಯಾರೆಂಟಿ ಎಂಬ ಮಾತುಗಳು ಪ್ರೇಕ್ಷಕರ ವಲಯದಿಂದಲೇ ಕೇಳಿ ಬರುತ್ತಿವೆ.