ಬೆಂಗಳೂರು: ನಾನೇನು ಊಟ ಮಾಡ್ಕೊಂದು, ಕಡುಬು ತಿನ್ನೋಕೆ ರಾಜಕೀಯ (Politics) ಮಾಡ್ತಿದ್ದೀನಾ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಪ್ರಶ್ನಿಸಿದ್ದಾರೆ.
Advertisement
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಗ್ಯಾರಂಟಿ (Congress Guarantee) ಘೋಷಣೆಗಳ ವಿರುದ್ಧ ಕಿಡಿ ಕಾರಿದ್ದಾರೆ. ನನ್ನ ಅಸ್ತಿತ್ವವೇ ಹೊರಟೋಗಿದೆ. ಚುನಾವಣೆಯಲ್ಲಿ ನನ್ನ ಅಸ್ತಿತ್ವವನ್ನು ಕುಂಟಿತಗೊಳಿಸಿದ್ದು ಇದೇ ಗ್ಯಾರಂಟಿ ಅಲ್ಲವೇ? ಆವತ್ತು ರಸ್ತೆಯಲ್ಲಿ ನಿಂತು ನನಗೂ ಫ್ರೀ, ನಿನಗೂ ಫ್ರೀ, ಹೇ ಕಾಕಾ ಪಾಟೀಲ್ ನಿನಗೂ ಫ್ರೀ ಅಂತಾ ಕೂಗಿ ಹೇಳಿದವರು ಇವರೇ ಅಲ್ಲವೇ? ಯಾವ ಆಧಾರದ ಮೇಲೆ ಗ್ಯಾರಂಟಿ ಘೋಷಣೆ ಮಾಡಿದ್ರು. ಈಗ ಹೇಳಿದ ಮೇಲೆ ಕೊಡಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಅಧಿಕಾರಕ್ಕೆ ಬಂದ್ಮೇಲೆ ಬಿಜೆಪಿ ಕಾರ್ಯಕರ್ತರು ಅಪಾಯದಲ್ಲಿದ್ದಾರೆ – ಪ್ರತಾಪ್ ಸಿಂಹ
Advertisement
Advertisement
ನಿದ್ಯೋಗಿಗಳಿಗೆ ಮೂರು ಸಾವಿರ ರೂ. ಕೊಡ್ತೀನಿ ಅಂದಿದ್ರು, ಈಗ 2022-23ನೇ ಸಾಲಿನಲ್ಲಿ ಪಾಸಾದವರಿಗೆ ಅಂತಿದ್ದಾರೆ. ಕಾಂಗ್ರೆಸ್ ಗ್ಯಾರಂಟಿ ನಂಬಿ ಹೊಟ್ಟೆಗೆ ಇಟ್ಟಿಲ್ಲದವನು ಕಾಂಗ್ರೆಸ್‌ಗೆ (Congress) ವೋಟ್ ಹಾಕಿದ್ದಾನೆ, ಅವನಿಗೆ ಕೊಡಬೇಕು. ಇದೆಲ್ಲವನ್ನು ಮುಂದಿಟ್ಟುಕೊಂಡೇ ರಾಜಕೀಯ ಮಾಡ್ತಿರೋದು. ಅದು ಬಿಟ್ಟು ನಾನೇನು ಊಟ ಮಾಡ್ಕೊಂಡು, ಕಡುಬು ತಿನ್ನೋಕೆ ರಾಜಕೀಯ ಮಾಡ್ತಿದ್ದೀನಾ? ಜನತೆಯ ಸಮಸ್ಯೆ ಹಾಗೂ ಜನರಿಗೆ ಆಗುವ ದ್ರೋಹದ ಬಗ್ಗೆ ನನ್ನ ಧ್ವನಿ ಇರಬೇಕು. ಅದಕ್ಕಾಗಿ ನಾವು ಹೋರಾಟ ಮಾಡ್ತೀವಿ ಎಂದು ಹೇಳಿದ್ದಾರೆ. ಇದನ್ನೂ ಓದಿ: The Kerala Story: ದಾವಣಗೆರೆಯಲ್ಲಿ ಶಾಲಾ, ಕಾಲೇಜು ವಿದ್ಯಾರ್ಥಿನಿಯರಿಗೆ ಉಚಿತ ಸಿನಿ ಪ್ರದರ್ಶನ