ಬೆಂಗಳೂರು: ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ನಾನು ಜೆಡಿಎಸ್ ಬಿಟ್ಟು ಬಂದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಬಗ್ಗೆ ನಾವು ಜಾತಿ ನಿಂದನೆ ಮಾಡಿಲ್ಲ. ನಮ್ಮ ಪಕ್ಷದ ಕಾರ್ಯಕರ್ತರು ಯಾರಾದ್ರು ಜಾತಿ ನಿಂದನೆ ಮಾಡಿದ್ರೆ ನಾನು ಕ್ಷಮೆ ಕೇಳ್ತೀನಿ. ಹಾಲಮತದ ಸಮಾಜದ ವಿರುದ್ಧ ನಾವು ಯಾರೂ ಮಾತಾಡಿಲ್ಲ. ಸಿದ್ದರಾಮಯ್ಯ ಸಿಎಂ ಮಾಡಲು ಜೆಡಿಎಸ್ ಬಿಟ್ಟು ಬಂದೆ. ಬಾದಾಮಿಯಲ್ಲಿ ಗೆಲ್ಲಸಿದ್ದು ನಾನು. ಹೀಗಿರುವಾಗ ನಾನು ಯಾಕೆ ಅವರ ಜಾತಿ ಬಗ್ಗೆ ಮಾತಾಡಲಿ. ನಮ್ಮ ಸಮಾಜ ಸಣ್ಣ ಸಮಾಜ. ಸಿದ್ದರಾಮಯ್ಯ ಭಾಷೆಯಲ್ಲಿ ಉತ್ತರ ಕೊಡಲು ನಮಗೆ ಆಗಲ್ಲ. ರಾಜ್ಯಸಭೆ ಸೋಲು ನಮಗೆ ಸಿಕ್ಕಿರೋ ಜಯ. ಬಿಜೆಪಿ ಬಿ ಟೀಂ ಯಾರು ಅಂತ ಈ ಎಲ್ಲಾ ಗೊತ್ತಾಗಿದೆ. ನಮ್ಮ ಕೆಲಸ ನಾವು ಮುಂದೆ ಮಾಡ್ತೀವಿ ಎಂದರು.
Advertisement
Advertisement
ಇದೇ ವೇಳೆ ರಾಜ್ಯಸಭೆಯಲ್ಲಿ ಅಡ್ಡ ಮತದಾನದ ಕುರಿತು ಮಾತನಾಡಿದ ಅವರು, ಗುಬ್ಬಿ ಶ್ರೀನಿವಾಸ ಮತ್ತು ಶ್ರೀನಿವಾಸ ಗೌಡರನ್ನ ಉಚ್ಚಾಟನೆ ಮಾಡಲು ತೀರ್ಮಾನ ಮಾಡಲಾಗಿದೆ. ಕುಮಾರಸ್ವಾಮಿ ಅವರು ಬೆಂಗಳೂರಿನ ಹೊರಗೆ ಇದ್ದಾರೆ. ನಾಳೆ ಅವರ ಬಳಿ ಸಹಿ ಪಡೆದ ನಾಳೆ ಅಧಿಕೃತ ಆದೇಶ ಹೊರಡಿಸುತ್ತೇವೆ. ಇವರ ಸದಸ್ಯತ್ವ ರದ್ದು ಮಾಡಲು ಬುಧವಾರ ಸ್ಪೀಕರ್ ಗೆ ದೂರು ಕೊಡ್ತೀವಿ ಎಂದರು. ಇದನ್ನೂ ಓದಿ: ಸ್ಟಂಟ್ ಮಾಡಲು ಹೋಗಿ 50 ವರ್ಷದ ವ್ಯಕ್ತಿ ಸಾವು
Advertisement
Advertisement
ಪಕ್ಷದ ವಿಪ್ ಉಲ್ಲಂಘನೆ ಮಾಡಿದ್ದಾರೆ. ಕಾಂಗ್ರೆಸ್-ಬಿಜೆಪಿ ಒಟ್ಟಾಗಿ ಅಡ್ಡ ಮತದಾನ ಮಾಡಿಸಿದ್ದಾರೆ. ಈಗ ಇರುವ ಸ್ಪೀಕರ್ ಸಂವಿಧಾನ ಬದ್ದವಾಗಿ ಕೆಲಸ ಮಾಡ್ತಾರೋ ಅನ್ನೋ ನಂಬಿಕೆ ಇದೆ. ಒಂದು ವೇಳೆ ಸ್ಪೀಕರ್ ಸರಿಯಾಗಿ ನಿರ್ಣಯ ಮಾಡದೇ ಹೋದ್ರೆ ಕೋರ್ಟ್ ಮೊರೆ ಹೋಗ್ತೀವಿ. ಗುಬ್ಬಿ ಶ್ರೀನಿವಾಸ ತಪ್ಪು ಮಾಡಿಲ್ಲ ಅಂದ್ರೆ ಅವತ್ತೆ ಹೇಳಬೇಕಿತ್ತು. ಮತ ಪತ್ರ ಮುಚ್ಚಿಕೊಂಡು ಯಾಕೆ ಮತ ಹಾಕಿದ್ರು? ಅಮೇಲೆ ಯಾಕೆ ಕುಮಾರಸ್ವಾಮಿ ಬಗ್ಗೆ ಮಾತಾಡಿದ್ರು. ಈಗ ಯಾಕೆ ಆಣೆ ಪ್ರಮಾಣ ಮಾಡ್ತಾರೆ ಎಂದು ಸಿಎಂ ಇಬ್ರಾಹಿಂ ವಾಗ್ದಾಳಿ ನಡೆಸಿದರು.
ಬಿಜೆಪಿಯಿಂದ ಪಠ್ಯ ಪುಸ್ತಕ ತಿರುಚೋ ಕೆಲಸ ಆಗಿದೆ. ಬಸವಣ್ಣರ ಪಠ್ಯಕ್ಕೆ ಎಲ್ಲಾ ಸ್ವಾಮೀಜಿಗಳು ವಿರೋಧ ಮಾಡಿದ್ದಾರೆ. ಸಾಣೇ ಹಳ್ಳಿ ಶ್ರೀಗಳನ್ನೇ ಸಮಿತಿ ಅಧ್ಯಕ್ಷರಾಗಿ ಬಸವಣ್ಣ ಪಠ್ಯ ರೆಡಿ ಮಾಡಿಸಿ. ಅವರೇ ಬಸವಣ್ಣ ಪುಸ್ತಕ ರೆಡಿ ಮಾಡಲಿ. ಬಿಜೆಪಿ ಇತಿಹಾಸ ತಿರುಚೋ ಕೆಲಸ ಮಾಡುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ಏನಿದು ಅನ್ಯಾಯ? ಏನು ಕ್ರೈಂ ಮಾಡಿದ್ದಾರೆ? ಅದು ರಾಷ್ಟ್ರದ ಆಸ್ತಿ, ಸ್ವಂತದ್ದಲ್ಲ: ಡಿಕೆಶಿ ಕೆಂಡಾಮಂಡಲ
ಕಾಂಗ್ರೆಸ್ ನವರು ಯಾಕೆ ಇಡಿ ದಾಳಿ ಬಗ್ಗೆ ಪ್ರತಿಭಟನೆ ಮಾಡುತ್ತಿದ್ದಾರೆ. ಇಲ್ಲಿ ನಮ್ಮ ಶಾಸಕರಿಂದ ಅಡ್ಡ ಮತದಾನ ಮಾಡಿಸಿಕೊಂಡಿದ್ದಾರೆ. ಇದು ಮಾತ್ರಾ ಸರಿನಾ.? ಇಲ್ಲಿ ಅಡ್ಡಮತದಾನ ಮಾಡಿಸಿ, ಅಲ್ಲಿ ಇಡಿ ದಾಳಿ ಬಗ್ಗೆ ಪ್ರತಿಭಟನೆ ಮಾಡೋಕೆ ಅವರಿಗೆ ಯಾವ ನೈತಿಕತೆ ಇದೆ. ಕಾಂಗ್ರೆಸ್ ಮೇಲೆ ಸಿಎಂ ಇಬ್ರಾಹಿಂ ವಾಗ್ದಾಳಿ ನಡೆಸಿದರು.