ಚಿಕ್ಕಮಗಳೂರು: ಪ್ರಧಾನಿ ಮೋದಿ ನನ್ನನ್ನು ಯಾಕೆ ಹೊಗಳಿದ್ದು ಯಾಕೆ ಅಂತಾ ಗೊತ್ತಿದೆ ಅಂತಾ ಜೆಡಿಎಸ್ ರಾಷ್ಟ್ರಾಧ್ಯಕ್ಷ ಹೆಚ್.ಡಿ.ದೇವೇಗೌಡರು ಜಿಲ್ಲೆಯ ಕಡೂರಿನಲ್ಲಿ ನಡೆದ ಸಮಾವೇಶದಲ್ಲಿ ತಿಳಿಸಿದ್ದಾರೆ.
ಪ್ರಧಾನಿ ಮೋದಿ ನನ್ನನು ಮೊದಲು ಹೊಗಳಿ, ನಂತರ ಜೆಡಿಎಸ್ ಗೆ ವೋಟ್ ಹಾಕ್ಬೇಡಿ ಅಂತಾ ಅಂದ್ರು. ಒಬ್ಬ ಕನ್ನಡಿಗ ಪ್ರಧಾನ ಮಂತ್ರಿ ಸ್ಥಾನದಲ್ಲಿದ್ದರು, ಮತ್ತೊಮ್ಮೆ ನಮ್ಮ ರಾಜ್ಯದ ನಾಯಕ ಪ್ರಧಾನಿ ಆಗುವ ಸಾಧ್ಯತೆಗಳು ಕಡಿಮೆ ಇವೆ. ಈ ಹಿನ್ನೆಲೆಯಲ್ಲಿ ಒಬ್ಬ ಮಾಜಿ ಪ್ರಧಾನಿಗಳ ಬಗ್ಗೆ ಅಗೌರವದಿಂದ ಮಾತನಾಡಬೇಡಿ ಅಂತಾ ಕಾಂಗ್ರೆಸ್ ನಾಯಕರಿಗೆ ತಿಳಿಸುವದಕ್ಕಾಗಿ ನನ್ನನ್ನು ಹೊಗಳಿದ್ದಾರೆ ಅಂತಾ ಸ್ಪಷ್ಟನೆ ನೀಡಿದ್ರು.
Advertisement
Advertisement
ಒಬ್ಬ ಕನ್ನಡಿಗ ಪ್ರಧಾನಿ ಆಗಿದ್ದಾರೆ ಅಂತಾ ಜೆ.ಹೆಚ್.ಪಟೇಲ್ ರು ಮುಖ್ಯಮಂತ್ರಿ ಕಚೇರಿ ನನ್ನ ಫೋಟೋ ಹಾಕಿದ್ದರು. ನಂತರ ಬಂದ ಎಸ್.ಎಂ.ಕೃಷ್ಣ, ಧರಂಸಿಂಗ್, ಕುಮಾರಸ್ವಾಮಿ, ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಮತ್ತು ಸದಾನಂದಗೌಡರು ನನ್ನ ಫೋಟೋ ತೆಗೆಯಲಿಲ್ಲ. ಆದ್ರೆ ಸಿದ್ದರಾಮಯ್ಯ ಬಂದ ಕೂಡಲೇ ನನ್ನ ಫೋಟೋ ತೆಗೆದು ಹಾಕಿದ್ರು, ಆ ಅನಾಗರಿಕತೆಗೆ ಮೋದಿ ಸಿಎಂಗೆ ನನ್ನ ಬಗ್ಗೆ ಹೇಳಿದ್ದಾರೆ ಅಂತಾ ಹೇಳಿದ್ರು.
Advertisement
ಜೆಡಿಎಸ್‍ಗೆ ಮತ ಹಾಕಿದ್ರೆ ಬಿಜೆಪಿಗೆ ಹೋಗುತ್ತದೆ ಅಂತಾ ನಮ್ಮ ಗೌರವಯುತ ಮಹಾನ್ ದೊಡ್ಡ ಮುಖ್ಯಮಂತ್ರಿ ಹೇಳ್ತಾರೆ. ಸಿಎಂ ಹೇಳುವ ಶೈಲಿಯನ್ನ ನಾನು ಮಾಡಿ ತೋರಿಸಬಲ್ಲೆ, ಆದ್ರೆ ಅದು ತಪ್ಪಾಗುತ್ತದೆ. ಸಿದ್ದರಾಮಯ್ಯರನ್ನು ನಾವು ರಾಜಕೀಯವಾಗಿ ತಲೆ ಮೇಲೆ ಹೊತ್ತು ಮೆರೆದಿದ್ದೇವೆ. ಈತ ವ್ಯಕ್ತಿಯಲ್ಲ, ಶಕ್ತಿ ಎಂದು ಹೇಳಿದ ನನಗೇ ಬುದ್ದಿ ಹೇಳ್ತಾರೆ ಅಂತಾ ಚುನಾವಣೆಯಲ್ಲಿ ಬಿಜೆಪಿ – ಜೆಡಿಎಸ್ ಮೈತ್ರಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ದೇವೇಗೌಡ್ರು ತಿರುಗೇಟು ನೀಡಿದ್ರು.